ಸ್ಮಶಾನವಾಗಿದೆ ಇಸ್ರೇಲಿನ ಕಿಬುತ್ಸ್ ಊರು: ಮಕ್ಕಳ ಹತ್ಯೆ ಇಸ್ರೇಲ್ ಸರ್ಕಾರವನ್ನೇ ಅಣುಕಿಸಿತ್ತಾ..?
ಹತ್ಯೆಯ ಭೀಕರತೆ ತೋರಿಸೋಕೆ ಮಚ್ಚು ಕೊಡಲಿ..!
ಇಸ್ರೇಲ್ ಸೇನೆಗೆ ಹಮಾಸ್ ಕೊಟ್ಟ ಸಂದೇಶವೇನು..?
ಮಕ್ಕಳ ಹತ್ಯೆ ಇಸ್ರೇಲ್ ಸರ್ಕಾರವನ್ನೇ ಅಣುಕಿಸಿತ್ತಾ..?
ಕಳೆದ ಒಂದು ವಾರಕ್ಕೂ ಅಧಿಕ ದಿನಗಳಿಂದ ನಾವು ನಿಮಗೆ ಇಸ್ರೇಲ್ (Israel) ಹಾಗೂ ಹಮಾಸ್ (Hamas) ಸಂಘರ್ಷದ ಪಿನ್ ಟು ಪಿನ್ ಮಾಹಿತಿಗಳನ್ನ ನೀಡ್ತಾನೆ ಬಂದಿದ್ದೀವಿ. ಒಂದೊಂದು ದಿನ ಒಂದೊಂದು ಕ್ಷಣವೂ ಯುದ್ಧ ಭೂಮಿಯಲ್ಲಿ ರೋಚಕವಾಗಿರುತ್ತೆ. ಯಾವುದೇ ಘಳಿಗೆಯಲ್ಲಿ ಯಮರಾಜ ಕೋಣನ ಮೇಲೆ ಬರಬಹುದು. ಎಲ್ಲಿಂದಲೋ ನುಗ್ಗಿ ಬರುವ ರಾಕೇಟುಗಳು ನಿಂತ ಜಾಗವನ್ನೇ ಧ್ವಂಸ ಮಾಡಬಹುದು. ಯಾಕೆಂದ್ರೆ ಅದು ಮದುವೆ ಮನೆಯಲ್ಲ. ಎರಡು ಪ್ರಬಲ ಶಕ್ತಿಗಳು ಕಾದಾಟ ಇರೋ ಸಮರಾಂಗಣ. ಆದ್ರೆ ಜೀವ ಭಯವನ್ನೆಲ್ಲಾ ಹೂತು ಹಾಕಿ ವರದಿಗಾಗಿ ಸುವರ್ಣ ನ್ಯೂಸ್ ಮುಂದಾಗಿತ್ತು. ಈಗ ನಾವುನಿಮಗೆ ಹಮಾಸ್ ಉಗ್ರರ ದಾಳಿಗೆ ಒಳಗಾದ ಒಂದು ಹಳ್ಳಿಯನ್ನ ತೋರಿಸಬೇಕು. ಅದು ಹಳ್ಳಿ ಥರ ಕಾಣಿಸೋದಿಲ್ಲಾ. ಮಹಾ ವಲಸೆ ಕಂಡ ನೂರಾರು ವರ್ಷ ಹಳೆಯ ಹಳ್ಳಿಯನ್ನ ಕಂಡ ಹಾಗೇ ಆಗುತ್ತೆ. ಅಲ್ಲಿ ಜನರಿಲ್ಲಾ..ಹೆಣಗಳು ಇದಾವೆ. ಮನೆಯ ಗೋಡೆಗಳೆಲ್ಲಾ ಗುಂಡುಗಳನ್ನ ತಿಂದು ತೂತು ಕಂಡಿವೆ. ಆರ್ ಪಿ ಜಿ ದಾಳಿಗೆ ದೊಡ್ಡ ದೊಡ್ಡ ಕಿಂಡಿಯೇ ಆಗಿ ಬಿಟ್ಟಿದೆ. ಬಲಿಷ್ಟವಾದ ಕಾಂಕ್ರೀಟ್ ಗೋಡೆಗಳು ಧ್ವಂಸವಾಗಿದೆ. ಅಲ್ಲಿ ಇರೋದು ಈಗ ಪತ್ರಕರ್ತರು ಬಿಟ್ಟರೆ ಇಸ್ರೇಲ್ ಆರ್ಮಿ ಮಾತ್ರ. ಅದನ್ನ ಬಿಟ್ರೆ ಇರೋದು ಹಮಾಸ್ ಕುಕೃತ್ಯಕ್ಕೆ ಸಾಕ್ಷಿಯಾದ ಕಲೆಗಳು ಮಾತ್ರ.. ಮಾನವೀಯತೆ ಅನ್ನೋ ಪದದ ಅರ್ಥವೆ ಗೊತ್ತಿಲ್ಲದ ಉಗ್ರ ಪಿಂಡಗಳು ತಮ್ಮ ಧರ್ಮವನ್ನ ನಂಬದವರು ಇರೋದೇ ಪ್ರಾಣತ್ಯಾಗಕ್ಕೆ ಅಂತ ಹತ್ಯೆಯನ್ನ ಮಾಡ್ತಾರೆ. ಅದು ಅಂತಿಂಥ ಹತ್ಯೆಯಲ್ಲಾ.. ನೋಡಿದ್ರೆ ಸಾಯೋ ತನಕ ಭಯ ಇರ್ಬೇಕು.. ಪ್ರತಿ ಕ್ಷಣ ಜೀವ ಭಯ ಕಾಡ್ಬೇಕು ಅಂಥಹ ಹತ್ಯೆ. ಕಿಬುತ್ಸ್(kibbutz ) ಬಿಯರಿ ಕಥೆಯನ್ನ ನಾವು ನಿಮಗೆ ಹೇಳೊಕೆ ಬಂದಿದ್ದೀವಿ. ಅದೊಂದು ಚಿಕ್ಕ ಊರು, ಊರು ಅನ್ನೋದಕ್ಕಿಂತ ಹಳ್ಳಿ ಎಂದರೇ ಸೂಕ್ತ. ಯಾಕೆಂದ್ರೆ ಅಲ್ಲಿನ ಜನ ಸಂಖ್ಯೆ ಕೇವಲ 1000. ಸರಿಯಾಗಿ 15 ದಿನಗಳ ಹಿಂದಿನ ಮಾತು. ಅರ್ಧ ಹಳ್ಳಿ ಬೆಳಗಿನ ನಿದ್ದೆಯಲ್ಲಿ ಇದ್ರೆ ಇನ್ನರ್ಧ ಹಳ್ಳಿ ತಮ್ಮ ತಮ್ಮಕೆಲಸಕ್ಕೆ ಅಣಿಯಾಗ್ತಾ ಇತ್ತು. ಗಾಜಾ ಗಡಿಯಿಂದ ಕೇವಲ 2 ಕಿಲೋಮೀಟರ್ ದೂರವಿರುವ ಕಿಬುತ್ಸ್ ಮೇಲೆ ಹಮಾಸ್ ದಾಳಿಗೆ ಸಂಚು ಹಾಕಿಕೊಂಡು 300 ಶಸ್ತ್ರಧಾರಿ ಹಮಾಸ್ ಉಗ್ರರನ್ನ ಛೂ ಬಿಟ್ಟಿತ್ತು.
ಇದನ್ನೂ ವೀಕ್ಷಿಸಿ: ನವರಾತ್ರಿಯ ಈ ಒಂಭತ್ತು ದಿನಗಳ ಮಹತ್ವವೇನು..? ನವಶಕ್ತಿ ಸ್ವರೂಪಗಳ ವೈಭವ ದಸರಾ ಉತ್ಸವ..!