Asianet Suvarna News Asianet Suvarna News

ಅರಬ್ ಒಕ್ಕೂಟ ರಾಷ್ಟ್ರಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಒಪ್ಪಂದ: ಟ್ರಂಪ್ ಒಪ್ಪಂದಕ್ಕೆ ಬೈಡನ್ ಬ್ರೇಕ್!

ವಾಷಿಂಗ್ಟನ್‌ಗೆ ರಾಜ್ಯ ಮಾನ್ಯತೆ ನೀಡುವ ಸಂಬಂಧ ಸಂಸತ್ತಿನಲ್ಲಿ ಮಸೂದೆ ಮಂಡನೆಯಾಗಿದೆ. ಕಳೆದ ವರ್ಷವೇ ನಗರವನ್ನು ಅಮೆರಿಕದ 51ನೇ ರಾಜ್ಯವನ್ನಾಗಿ ಮಾಡಲು ಮಸೂದೆ ಮಂಡನೆಯಾಗಿತ್ತು. ಆದರೆ, ಅಗತ್ಯ ಬೆಂಬಲ ಸಿಗದೇ ಬಿಲ್ ಪಾಸ್ ಆಗರಿಲಿಲ್ಲ. ಇದೀಗ ಡೆಮಾಕ್ರಾಟ್ಸ್‌ಗೆ ಸಂಪೂರ್ಣ ಬಹಮತವಿದ್ದು, ಮಸೂದೆಗೆ 202 ಸಂಸದರು ಬೆಂಬಲಿಸಿದ್ದಾರೆ. ಸೆನೇಟ್‌ನಲ್ಲಿ 10 ರಿಪಬ್ಲಿಕನ್ಸ್ ಈ ಮಸೂದೆಯನ್ನು ಬೆಂಬಲಿಸಿದರೆ ಮಾತ್ರ ಮಸೂದೆ ಪಾಸ್ ಆಗಬಹುದು ಎನ್ನಲಾಗುತ್ತಿದೆ. ಜಿಲ್ಲೆಯೊಂದು ರಾಜ್ಯವಾಗಿ ಬದಲಾದಲ್ಲಿ ಇತರೆ ಅಮೆರಿಕನ್ನರಿಗೆ ಸಿಗುವ ಎಲ್ಲಾ ತೆರಿಗೆ ಸೌಲಭ್ಯಗಳೂ ವಾಷಿಂಗ್ಟನ್‌ ವಾಸಿಗಳಿಗೂ ಸಿಗಲಿವೆ ಎಂದು ಸ್ಪೀಕರ್ ನ್ಯಾನ್ಸಿ ಪೆಲೋಸಿ ಹೇಳಿದ್ದಾರೆ. 

First Published Jan 28, 2021, 1:16 PM IST | Last Updated Jan 28, 2021, 1:35 PM IST

ವಾಷಿಂಗ್ಟನ್(ಜ.28): ವಾಷಿಂಗ್ಟನ್‌ಗೆ ರಾಜ್ಯ ಮಾನ್ಯತೆ ನೀಡುವ ಸಂಬಂಧ ಸಂಸತ್ತಿನಲ್ಲಿ ಮಸೂದೆ ಮಂಡನೆಯಾಗಿದೆ. ಕಳೆದ ವರ್ಷವೇ ನಗರವನ್ನು ಅಮೆರಿಕದ 51ನೇ ರಾಜ್ಯವನ್ನಾಗಿ ಮಾಡಲು ಮಸೂದೆ ಮಂಡನೆಯಾಗಿತ್ತು. ಆದರೆ, ಅಗತ್ಯ ಬೆಂಬಲ ಸಿಗದೇ ಬಿಲ್ ಪಾಸ್ ಆಗರಿಲಿಲ್ಲ. ಇದೀಗ ಡೆಮಾಕ್ರಾಟ್ಸ್‌ಗೆ ಸಂಪೂರ್ಣ ಬಹಮತವಿದ್ದು, ಮಸೂದೆಗೆ 202 ಸಂಸದರು ಬೆಂಬಲಿಸಿದ್ದಾರೆ. ಸೆನೇಟ್‌ನಲ್ಲಿ 10 ರಿಪಬ್ಲಿಕನ್ಸ್ ಈ ಮಸೂದೆಯನ್ನು ಬೆಂಬಲಿಸಿದರೆ ಮಾತ್ರ ಮಸೂದೆ ಪಾಸ್ ಆಗಬಹುದು ಎನ್ನಲಾಗುತ್ತಿದೆ. ಜಿಲ್ಲೆಯೊಂದು ರಾಜ್ಯವಾಗಿ ಬದಲಾದಲ್ಲಿ ಇತರೆ ಅಮೆರಿಕನ್ನರಿಗೆ ಸಿಗುವ ಎಲ್ಲಾ ತೆರಿಗೆ ಸೌಲಭ್ಯಗಳೂ ವಾಷಿಂಗ್ಟನ್‌ ವಾಸಿಗಳಿಗೂ ಸಿಗಲಿವೆ ಎಂದು ಸ್ಪೀಕರ್ ನ್ಯಾನ್ಸಿ ಪೆಲೋಸಿ ಹೇಳಿದ್ದಾರೆ. 

ಇನ್ನು ಈಗಾಗಲೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಜೋ ಬೈಡನ್, ಡೊನಾಲ್ಡ್ ಟ್ರಂಪ್ ಕಾಲದಲ್ಲಿದ್ದ ಹಲವು ನಿಯಮಗಳಿಗೆ ಬ್ರೇಕ್ ಹಾಕಿದ್ದಾರೆ. ಇದೀಗ ಅರಬ್ ರಾಷ್ಟ್ರಗಳೊಂದಿಗೆ ಶಸ್ತ್ರಾಸ್ತ್ರ ಪೂರೈಸಲು ಟ್ರಂಪ್ ಮಾಡಿಕೊಂಡಿದ್ದ ಒಪ್ಪಂದಕ್ಕೂ ಬೈಡನ್ ಸದ್ಯಕ್ಕೆ ಬ್ರೇಕ್ ಹಾಕಿದ್ದಾರೆ. 

ಅತ್ತ ತಾನೇ ಹುಟ್ಟು ಹಾಕಿದ ಕೊರೋನಾ ವೈರಸ್‌ ಅನ್ನು ಓಡಿಸುವಲ್ಲಿ ಚೀನಾ ಬಹಳ ಬೇಗ ಯಶಸ್ವಿಯಾಗಿದ್ದು ಸುಳ್ಳಲ್ಲ. ಆದರೆ, ಇದೀಗ ಮತ್ತೆ ಅನೇಕ ಹೊಸ ಕೋವಿಡ್ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ಚೀನಾದಲ್ಲಿ ಆತಂಕ ಸೃಷ್ಟಿಯಾಗಿದೆ. ಇಷ್ಟೇ ಅಲ್ಲದೇ, ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ಇಂದಿನ ಟ್ರೆಂಡಿಂಗ್ ಸುದ್ದಿಗಳು ಇಲ್ಲಿವೆ ನೋಡಿ

Video Top Stories