ಜಾನ್ಸನ್ ಆ್ಯಂಡ್ ಜಾನ್ಸನ್‌ನಿಂದಲೂ ಕೊರೋನಾ ಲಸಿಕೆ, ಮೊದಲ ಡೋಸ್ ಪಡೆದವರಲ್ಲಿ ಇಲ್ಲ ಅಡ್ಡ ಪರಿಣಾಮ!

ಜಾಗತಿಕವಾಗಿ ಸದ್ದು ಮಾಡಿದ ಇಂದಿನ ಟ್ರೆಂಡಿಂಗ್ ಸುದ್ದಿಗಳು ಇಲ್ಲಿವೆ ನೋಡಿ

First Published Jan 14, 2021, 11:25 AM IST | Last Updated Jan 14, 2021, 12:41 PM IST

ವಾಷಿಂಗ್ಟನ್(ಜ.14): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸಂಸತ್ ಎರಡನೇ ಬಾರಿ ವಾಗ್ದಂಡನೆ ವಿಧಿಸಿದೆ. ಆ ಮೂಲಕ ಈ ಪ್ರಕ್ರಿಯೆಗೆ ಎರಡೆರೆಡರು ಬಾರಿ ಗುರಿಯಾದ ದೇಶದ ಮೊದಲ ಅಧ್ಯಕ್ಷರಾಗಿದ್ದಾರೆ. ಸೇವ್ ಅಮೆರಿಕ ಮಾರ್ಚ್ ಎಂಬ ಹೆಸರಿಲ್ಲಿ ಟ್ರಂಪ್ ಪರ ನಡೆದ ಪ್ರತಿಭಟನೆ ಹಿಂಸಾರೂಪ ತಾಳಿತ್ತು. ದೇಶದ ಪ್ರಜಾಪ್ರಭುತ್ವ ದೇವಾಲಯದ ಮೇಲೆಯೇ ದಾಳಿ ನಡೆದಿದ್ದಕ್ಕೆ ಅತೀವ ಆಕ್ರೋಶ ವ್ಯಕ್ತವಾಗಿತ್ತು. ಟ್ರಂಪ್ ಅವರನ್ನು ಹೀಗೇ ಬಿಟ್ಟರೆ ದೇಶಕ್ಕೇ ಅಪಾಯ ಎಂಬ ಕಾರಣಕ್ಕೆ ಕೆಳಮನೆಯಲ್ಲಿ ಟ್ರಂಪ್‌ಗೆ ವಾಗ್ದಂಡನೆ ವಿಧಿಸಲಾಗಿದೆ.  

ಲಸಿಕೆ ಪಡೆವವರಿಗೆ ಆಯ್ಕೆ ಅವಕಾಶ ಇಲ್ಲ!

ಕ್ರಿಸ್ಮಸ್ ವೇಳೆ ಅಮೆರಿಕದ ಮೊದಲ ಮಹಿಳೆ ಮೆಲಾನಿಯಾ ತೊಟ್ಟ ಉಡುಗೆ ಬಗ್ಗೆ ಪ್ರಖ್ಯಾತ ನಿಯತಕಾಲಿಕೆಗಳು ವರದಿ ಮಾಡಲಿಲ್ಲವೆಂದು ಡೊನಾಲ್ಡ್ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಕಮಲಾ ಹ್ಯಾರೀಸ್ ಜಿನ್ಸ್‌ಗೆ ಸಾಕ್ಸ್ ಇಲ್ಲದ ಶೂಸ್ ಧರಿಸಿ, ಅಧಿಕೃತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಆ ಡ್ರೆಸ್‌ಗೂ ಟೀಕೆಗಳು ವ್ಯಕ್ತವಾಗಿದ್ದವು. ಅವರಿಗೆ ಫ್ಯಾಷನ್ ಸೆನ್ಸ್ ಇಲ್ಲವೆಂದೇ ಫ್ಯಾಷನ್ ಪ್ರೇಮಿಗಳು ಟೀಕಿಸಿದ್ದರು. ಇವಿಷ್ಟೇ ಅಲ್ಲದೇ ಜಾಗತಿಕವಾಗಿ ಸದ್ದು ಮಾಡಿದ ಇಂದಿನ ಟ್ರೆಂಡಿಂಗ್ ಸುದ್ದಿಗಳು ಇಲ್ಲಿವೆ ನೋಡಿ