
ಪಾಕ್ ಮಾಜಿ ಪ್ರಧಾನಿಗೆ ಸೆರೆವಾಸದ ಬಡ್ತಿ: ಕೊಳ್ಳೆ ಹೊಡೆದ ದುಡ್ಡೆಲ್ಲಾ ಏನು ಮಾಡಿದ ಇಮ್ರಾನ್ ಖಾನ್?
ಪಾಕಿಸ್ತಾನದ ಪ್ರಧಾನಿ ಗದ್ದುಗೆ ಮೇಲೆ ಕೂರೋ ಯಾರೊಬ್ಬರಿಗೂ ಕೂಡ, ಕಂಟಕ ತಪ್ಪಿದ್ದಲ್ಲ. ಅಂಥದ್ದೇ ಗಂಡಾಂತರ ಈಗ ಇಮ್ರಾನ್ ಖಾನಿಗೂ ಎದುರಾಗಿದೆ. ಅದರಿಂದ ಅವನು ಪಾರಾಗೋಕೆ, ಒಂದೇ ಒಂದು ದಾರಿಯೂ ಇಲ್ಲದಂತಾಗಿದೆ. ಅಷ್ಟಕ್ಕೂ ಅವನು ಅದೆಂಥಾ ಚಕ್ರವ್ಯೂಹದಲ್ಲಿ ಸಿಲುಕಿದ್ದಾನೆ? ಅದನ್ನಕೆ ಬೇಧಿಸೋದೇ ಅಸಾಧ್ಯವಾಗಿದೆ?
ಬೆಂಗಳೂರು(ಜ.19): ಪಾಕಿಸ್ತಾನದ ಸಾರ್ವಭೌಮನಾಗೋಕೆ ಹೊರಟವನು, ಈಗ ಜೈಲುಪಾಲಾಗ್ಬೇಕಾದ ದಾರುಣ ಸ್ಥಿತಿ ನಿರ್ಮಾಣವಾಗಿದೆ.ನಯಾ ಪಾಕಿಸ್ತಾನದ ಕನಸು ಹೊತ್ತಿದ್ದವನು, ಈಗ ಅದೇ ಪಾಕಿಸ್ತಾನದ ಸೆರೆಮನೆ ಸೇರಬೇಕಾದ ದಾರುಣ ಸ್ಥಿತಿ ನಿರ್ಮಾಣವಾಗಿದೆ. ಅಷ್ಟಕ್ಕೂ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ಅವತ್ತಿನ ಹೀರೋ, ಇವತ್ತು ಅದೇ ಪಾಕಿಸ್ತಾನದ ನ್ಯಾಯಾಲದ ದೃಷ್ಟಿಲಿ ವಿಲನ್ ಆಗಿದ್ದು ಹೇಗೆ?. ಆತನ ಮೇಲಿರೋ ಆರೋಪವೇನು? ಬೆಂಬಲಿಗರು ಹೇಳಿದ್ದೇನು? ಅದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..
ಪಾಕಿಸ್ತಾನದ ಪ್ರಧಾನಿ ಗದ್ದುಗೆ ಮೇಲೆ ಕೂರೋ ಯಾರೊಬ್ಬರಿಗೂ ಕೂಡ, ಕಂಟಕ ತಪ್ಪಿದ್ದಲ್ಲ. ಅಂಥದ್ದೇ ಗಂಡಾಂತರ ಈಗ ಇಮ್ರಾನ್ ಖಾನಿಗೂ ಎದುರಾಗಿದೆ. ಅದರಿಂದ ಅವನು ಪಾರಾಗೋಕೆ, ಒಂದೇ ಒಂದು ದಾರಿಯೂ ಇಲ್ಲದಂತಾಗಿದೆ. ಅಷ್ಟಕ್ಕೂ ಅವನು ಅದೆಂಥಾ ಚಕ್ರವ್ಯೂಹದಲ್ಲಿ ಸಿಲುಕಿದ್ದಾನೆ? ಅದನ್ನಕೆ ಬೇಧಿಸೋದೇ ಅಸಾಧ್ಯವಾಗಿದೆ? ಅದೆಲ್ಲದರ ಕತೆ ನಿಮ್ಮ ಮುಂದೆ ತೆರೆದಿಡ್ತೀವಿ.
ವಿಜಯೇಂದ್ರ v/s ಯತ್ನಾಳ್, ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ತಿಂಗಳಾಂತ್ಯಕ್ಕೆ ಚುನಾವಣೆ!
ಇಮ್ರಾನ್ ಖಾನ್ ಅಧಿಕಾರಕ್ಕೆ ಬಂದ್ರೆ, ಪಾಕಿಸ್ತಾನದ ನಸೀಬು ಬದಲಾಗುತ್ತೆ ಅಂತ ಕನಸು ಕಂಡಿದ್ರು, ಅಲ್ಲಿನ ಜನ.. ಆದ್ರೆ ಆಗಿದ್ದೇನು? ಜಿಂಕೆ, ಚಿಗರೆಯಷ್ಟಿದ್ದ ಇಮ್ರಾನ್ ಖಾನ್ ಆಸ್ತಿ ಮದಗಜದಷ್ಟಾಯ್ತು.. ಪಾಕಿಗೆ ದೇಶ ವಿದೇಶಗಳು ಕೊಟ್ಟ ಅಮೂಲ್ಯ ಉಡುಗೊರೆ, ಇಮ್ರಾನ್ ಸ್ವತ್ತಾಯ್ತು.. ಯಾರಿಗೂ ಗೊತ್ತಾಗದ ಹಾಗೆ ಮಾರಾಟವಾಯ್ತು.. ಭೂಮಿಯ ವಿಚಾರದಲ್ಲೂ ಅಕ್ರಮ ನಡೀತು. ಕಡೆಗೆ, ಇಮ್ರಾನ್ಗೋಸ್ಕರ ರಕ್ತಪಾತವೂ ಆಗೋಯ್ತು.
ಈ ಮೂರ್ನಾಲ್ಕು ವರ್ಷಗಳಲ್ಲಿ ಏನೇನಾಯ್ತು. ಅದರ ಪರಿಣಾಮ ಏನು? ಈಗ ಏನಾಗಿದೆ ಇಮ್ರಾನ್ ಸ್ಥಿತಿ? ಅದೆಲ್ಲದರ ಬಗ್ಗೆ ಮಾಹಿತಿ ಕೊಡ್ತೀವಿ.
ಪಾಕಿಸ್ತಾನದ ಮಾಜಿ ಪ್ರಧಾನಿ ಬಾಳಿಗೆ, ಬೆಂಕಿ ಹೊತ್ತಿಕೊಂಡು ಮೂರ್ನಾಲ್ಕು ವರ್ಷಗಳೇ ಕಳೆದಿವೆ. ಆತನ ಪತ್ನಿಯೂ ಕೂಡ ಈಗ ಅಗ್ನಿಪಥದಲ್ಲಿ ಸಾಗಬೇಕಾಗಿ ಬಂದಿದೆ. ಅಷ್ಟಕ್ಕೂ, 12 ವರ್ಷಗಳ ಸಾಧನೆ, ಕಳೆದ ಕೆಲವು ವರ್ಷಗಳಲ್ಲಿ ಮಣ್ಣುಪಾಲಾಗಿದ್ದು ಹೇಗೆ? ಅದರ ಪೂರ್ತಿ ಡೀಟೇಲ್ಸ್ ಇಲ್ಲಿದೆ ನೋಡಿ.