
ವಿಜಯೇಂದ್ರ v/s ಯತ್ನಾಳ್, ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ತಿಂಗಳಾಂತ್ಯಕ್ಕೆ ಚುನಾವಣೆ!
ವಿಜಯೇಂದ್ರ v/s ಯತ್ನಾಳ್ ನಡುವಿನ ಯುದ್ಧ ಮುಂದುವರಿದಿದೆ. ಇದೀಗ ರಾಜ್ಯಾಧ್ಯಕ್ಷ ಸ್ಥಾನದ ಫೈಟ್ ಶುರುವಾಗಿದೆ. ಈ ತಿಂಗಳ ಅಂತ್ಯದಲ್ಲೇ ಮೊದಲ ಬಾರಿಗೆ ಚುನಾವಣೆ ಮೂಲಕ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಾ?
ಬೆಂಗಳೂರು(ಜ.18) ಕರ್ನಾಟಕ ಬಿಜೆಪಿಯಲ್ಲಿನ ಕೋಲಾಹಲ, ಸಮರ ಇನ್ನು ಮುಗಿದಿಲ್ಲ. ಹೈಕಮಾಂಡ್ ಅದೆಷ್ಟೇ ಸ್ಟ್ರಾಂಗ್ ಆಗಿದ್ದರೂ ಕರ್ನಾಟಕದ ಇತಿಹಾಸದಲ್ಲೇ ಬಿಜೆಪಿ ಒಳಜಗಳ ಶಮನ ಮಾಡಲು ಸಾಧ್ಯವಾಗಿಲ್ಲ. ಇದೀಗ ಮತ್ತೊಮ್ಮೆ ವಿಜಯೇಂದ್ರ v/s ಯತ್ನಾಳ್ ಫೈಟ್ ಶುರುವಾಗಿದೆ. ರಾಜ್ಯ ಬಿಜೆಪಿ ಇತಿಹಾಸದಲ್ಲೇ ಮೊದಲ ಬಾರಿ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಗೆ ಚುನಾವಣೆಯಾಗುತ್ತಾ? ಪ್ರತಿ ಬಾರಿ ಪ್ರಕ್ರಿಯೆಯ ರೂಪದಲ್ಲಿ ಅವಿರೋಧ ಆಯ್ಕೆಯಾಗ್ತಿತ್ತು. ಆದರೆ ಈ ಬಾರಿ ಚುನಾವಣೆಯಲ್ಲಿ ಯತ್ನಾಳ್ ಟೀಂನಿಂದ ಸ್ಪರ್ಧೆ ಸಾಧ್ಯತೆ ಇದೆ. ಏನಿದು ರಾಜ್ಯ ಬಿಜೆಪಿಯ ಹೊಸ ಜಟಾಪಟಿ?