Asianet Suvarna News Asianet Suvarna News

ಪಾಕ್‌ನಲ್ಲಿ ಶುರುವಾಗಿದೆ ಅಂತರ್ಯುದ್ಧ, ಅನ್ನಕ್ಕಾಗಿ ಹಾಹಾಕಾರ; ಬಿಕಾರಿಯಾಗ್ತಿದೆಯಾ ಪಾಕ್.?

ನೆರೆಯ ದೇಶ ಪಾಕಿಸ್ತಾನದಲ್ಲಿ ಅಂತರ್ಯುದ್ಧ ಶುರುವಾಗಿದೆ. ಪಾಕ್‌ನ ಪ್ರಮುಖ ನಗರಗಳಲ್ಲಿ ಅನ್ನಕ್ಕಾಗಿ ಹಾಹಾಕಾರ ಶುರುವಾಗಿದೆ. ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇನ್ನು ಜನರ ಆರ್ಥಿಕ ಸ್ಥಿತಿ ಪಾತಾಳಕ್ಕಿಳಿದಿದೆ. 

ನವದೆಹಲಿ (ಜ. 17): ನೆರೆಯ ದೇಶ ಪಾಕಿಸ್ತಾನದಲ್ಲಿ ಅಂತರ್ಯುದ್ಧ ಶುರುವಾಗಿದೆ. ಪಾಕ್‌ನ ಪ್ರಮುಖ ನಗರಗಳಲ್ಲಿ ಅನ್ನಕ್ಕಾಗಿ ಹಾಹಾಕಾರ ಶುರುವಾಗಿದೆ. ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇನ್ನು ಜನರ ಆರ್ಥಿಕ ಸ್ಥಿತಿ ಪಾತಾಳಕ್ಕಿಳಿದಿದೆ. ಹಾಗಾಗಿ ದಿನಬಳಕೆಯ ವಸ್ತುಗಳಿಗೆ ದುಬಾರಿ ಬೆಲೆಯನ್ನು ತೆರಲು ಜನರಿಗೆ ಕಷ್ಟವಾಗುತ್ತಿದೆ. 

ಶುರುವಾಗಿದೆ ಯುದ್ಧಭೀತಿ, ನಿಜವಾಯ್ತಾ ಗವಿಗಂಗಾಧರೇಶ್ವರ ಸನ್ನಿಧಿಯ ಭವಿಷ್ಯ..?

ಗೋಧಿ ಕೆಜಿಗೆ 150 ರೂ, ಸಕ್ಕರೆ 100 ರೂ, ಅಡುಗೆ ಎಣ್ಣೆ ಲೀ.ಗೆ 250 ರೂ, ಹೀಗೆ ದಿನಬಳಕೆಯ ವಸ್ತುಗಳ  ಬೆಲೆ ಏರಿಕೆಯಾಗಿದೆ. ದೇಶದ 25 ಕೋಟಿ ಜನರಲ್ಲಿ ಬಹುತೇಕರು ಹಸಿವಿನಿಂದ ನರಳುತ್ತಿದ್ದಾರೆ. ಹಾಗಾದ್ರೆ ಪಾಕ್‌ನಲ್ಲಿ ನಿಜಕ್ಕೂ ನಡೆಯುತ್ತಿರುವುದೇನು..?