Asianet Suvarna News Asianet Suvarna News

ಇನ್ನು ಕೆಲವೇ ವರ್ಷ ಬರಲಿದೆ ಫ್ಲೈಯಿಂಗ್ ಕಾರ್..!: ಪೆಟ್ರೋಲ್ , ಡೀಸೆಲ್ ಬೇಡ.. ಆಕಾಶದಲ್ಲಿ ಹಾರಲಿದೆ ಈ ಕಾರ್..!

ಎಫ್‌ಎಎ ಎಲೆಕ್ಟ್ರಿಕಲ್ ವರ್ಟಿಕಲ್ ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ವಾಹನಗಳಿಗಾಗಿ ತನ್ನ ನೀತಿಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಇವಿಟಿಒಎಲ್‌ಗಳು ಮತ್ತು ನೆಲದ ಮೂಲಸೌಕರ್ಯಗಳ ನಡುವಿನ ಸಂವಹನಗಳನ್ನು ನಿಯಂತ್ರಿಸುತ್ತದೆ ಎಂದು ಕಂಪನಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಪ್ರತೀದಿನ ಟ್ರಾಫಿಕ್ ಜಾಮ್ ಅಲ್ಲಿ ಸಿಲುಕಿ ಸುಸ್ತಾಗಿರೋರಿಗೆ ಇದೀಗ ಗುಡ್ ನ್ಯೂಸ್ ಬಂದಿದೆ. ಅದೇನಂದ್ರೆ ಹಾರುವ ಕಾರ್‌ಗೆ (Flying car) ಮಾನ್ಯತೆ ಸಿಕ್ಕಿದ್ದು, ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಫ್ಲೈಯಿಂಗ್ ಕಾರ್ ಫೀಲ್ಡಿಗಿಳಿಯಲಿದೆ. ಈ ಕಾರ್‌ಗಳಿಗೆ ಪೆಟ್ರೋಲ್ ಡೀಸೆಲ್ ಬೇಕಾಗಿಲ್ಲ. ಒಮ್ಮೆ ಚಾರ್ಜ್ ಮಾಡಿದ್ರೆ 110 ಕಿಮೀ ಹಾರಾಟ ನಡೆಸುತ್ತೆ. ಇನ್ಮುಂದೆ ನೀವು ರೋಡಿನಿಂದ ಆಗಸಕ್ಕೆ ಟೇಕಾಫ್ ಮಾಡಬಹುದು. ಯಾಕಂದ್ರೆ ಸ್ಕೈ-ಫೈ ಸಿನಿಮಾಗಳಲ್ಲಿ ನೀವು ನೋಡಿದಂತೆಯೇ ಇದೀಗ ಹಾರುವ ಕಾರುಗಳಿಗೆ ಅಧಿಕೃತವಾಗಿ ಅನುಮೋದನೆ ಸಿಕ್ಕಿದೆ. ಅಮೆರಿಕ(America) ಮೂಲದ ಅಲೆಫ್ ಏರೋನಾಟಿಕ್ಸ್ ಅಭಿವೃದ್ಧಿಪಡಿಸಿರುವ ಈ ಹಾರುವ ಕಾರಿಗೆ ಅಮೆರಿಕ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಅಭಿವೃದ್ದಿ ಪಡಿಸಿರುವ ತನ್ನ ಮಾಡೆಲ್ A ಹೆಸರಿನ ಕಾರು ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್(US Federal Aviation Administration) ನಿಂದ ವಿಶೇಷ ಏರ್‌ವರ್ದಿನೆಸ್ ಪ್ರಮಾಣೀಕರಣವನ್ನು ಪಡೆದಿದೆ ಅಂತ ಕಂಪನಿ ಘೋಷಿಸಿದೆ. ಈ ಬೆಳವಣಿಗೆ ಐತಿಹಾಸಿಕವಾಗಿದೆ. ಯಾಕಂದ್ರೆ ಯಾವುದೇ ದೇಶ ಈ ರೀತಿಯ ವಾಹನವನ್ನು ಪ್ರಮಾಣೀಕರಿಸಿಲ್ಲ. ಆದ್ರೆ ಅಮೆರಿಕ ಮೊದಲ ಬಾರಿಗೆ ಇಂಥಾ ಹಾರುವ ಕಾರಿಗೆ ಅನುಮೋದನೆ ಕೊಟ್ಟಿದೆ. ಈ ಮೂಲಕ ಅನೇಕ ವರ್ಷಗಳಿಂದ ಜನರು ಕಾಣುತ್ತಿದ್ದ ಹಾರುವ ಕಾರಿನ ಸ್ಕೈ-ಫೈ ಕನಸು ನನಸಾಗಿದೆ.

ಇದನ್ನೂ ವೀಕ್ಷಿಸಿ: Panchanga: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ ?: ಈ ದಿನ ಶಿವ-ದುರ್ಗಾ ಆರಾಧನೆ ಮಾಡಿ

Video Top Stories