Asianet Suvarna News Asianet Suvarna News

ಕೊಳೆತು ನಾರುವ ಮೀನಿಗೆ ಸಖತ್ ಡಿಮ್ಯಾಂಡ್! ಮನುಷ್ಯನ ದೇಹದಲ್ಲಿ ಮೂಳೆಯೇ ಇಲ್ಲದಿದ್ದರೆ ಏನಾಗ್ತಿತ್ತು?

ಪಾಕಿಸ್ತಾನ್‌ ಬರಗೆಟ್ಟುಹೋಗಿದೆ, ಆದ್ರೂಪಾಠಕಲ್ತಿಲ್ಲ. ಅಷ್ಟಕ್ಕೂಈಗಏನುಆಯ್ತುಅಂತಿರಾ..? ಮಾರ್ಕೆಟ್‌ನಲ್ಲಿಫ್ರೇಶ್‌-ಫ್ರೆಶ್‌ಮೀನು, ಕೊಳೆತಮೀನನ್ನೇಜನರಿಗೆತಿನ್ನಸ್ತಿದೆ ಈ ಪಾಕ್‌!

Aug 7, 2022, 10:36 PM IST

ಪಾಕಿಸ್ತಾನದಲ್ಲಿ ಸೇವಿಸುವ ಸರಿಸುಮಾರು 90% ಮೀನುಗಳು  ಕೊಳೆತ ಮತ್ತು ಮಾನವ ಬಳಕೆಗೆ ಯೋಗ್ಯವಾಗಿಲ್ಲ ಎಂದು ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (WWF) ಅಧಿಕಾರಿಗಳು ಹೇಳಿದ್ದಾರೆ. ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಆಫ್ ಇಂಟರ್‌ನ್ಯಾಶನಲ್ ಅಫೇರ್ಸ್‌ನಲ್ಲಿ ನಡೆದ 'ಬ್ಲೂ ಎಕಾನಮಿ: ಆನ್ ಅವೆನ್ಯೂ ಫಾರ್ ಡೆವಲಪ್‌ಮೆಂಟ್ ಇನ್ ಪಾಕಿಸ್ತಾನ್' ಎಂಬ ಶೀರ್ಷಿಕೆಯ ಸೆಮಿನಾರ್‌ನಲ್ಲಿ ಸಮುದ್ರ ಮೀನುಗಾರಿಕೆ ಕುರಿತು WWF ನ ತಾಂತ್ರಿಕ ಸಲಹೆಗಾರ ಮತ್ತು ಸಮುದ್ರ ಮೀನುಗಾರಿಕೆ ಇಲಾಖೆಯ ಮಾಜಿ ಡೈರೆಕ್ಟರ್ ಜನರಲ್ ಮುಹಮ್ಮದ್ ಮೊಜಮ್ ಖಾನ್ ಈ ಮೌಲ್ಯಮಾಪನವನ್ನು ಹಂಚಿಕೊಂಡಿದ್ದಾರೆ. ಅಂಗಡಿಗಳಲ್ಲಿ ಮತ್ತು ರಸ್ತೆಬದಿಯ ಗಾಡಿಗಳಲ್ಲಿ ಮಾರಾಟವಾಗುವ ಹೆಚ್ಚಿನ ಶೇಕಡಾವಾರು ಮೀನುಗಳು ಮಾನವ ಬಳಕೆಗೆ ಯೋಗ್ಯವಲ್ಲ ಎಂದು ಖಾನ್ ಹೇಳಿದ್ದು.  ಪಾಕಿಸ್ತಾನದ ಕುಸಿದ  ಆರ್ಥಿಕತೆ, ಎದುರಿಸುತ್ತಿರುವ ಸವಾಲುಗಳು, ಸಮುದ್ರ ಮೀನುಗಾರಿಕೆ ಸಮಸ್ಯೆಗಳು ಮತ್ತು ಕರಾವಳಿ ಸಮುದಾಯಗಳ ಸಾಮಾಜಿಕ ಆರ್ಥಿಕ ಉನ್ನತಿಯ ವಿವಿಧ ಅಂಶಗಳನ್ನು ಒತ್ತಿ ಹೇಳಿದ್ದಾರೆ.