ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧದ ಆತಂಕ: ಜಗತ್ತನ್ನೇ ಬೆಚ್ಚಿಬೀಳಿಸಿದ್ದೇಕೆ ಅದೊಂದು ಘಟನೆ
ಉಕ್ರೇನ್‌ನಲ್ಲಿ ರಷ್ಯಾದ ದಾಳಿ, ಇರಾನ್-ಇಸ್ರೇಲ್ ನಡುವಿನ ಉದ್ವಿಗ್ನತೆ ಮತ್ತು ಸ್ವೀಡನ್-ಫಿನ್‌ಲ್ಯಾಂಡ್‌ನ ಯುದ್ಧ ಸಿದ್ಧತೆಗಳು ಮೂರನೇ ಮಹಾಯುದ್ಧದ ಭೀತಿಯನ್ನು ಹೆಚ್ಚಿಸಿವೆ.
ಮಹಾಯುದ್ಧದ ಭೀತಿ ಜಗತ್ತನ್ನ ಆವರಿಸಿದೆ.. ಕೆಲವೇ ದಿನಗಳಲ್ಲಿ ಮೂರನೇ ಮಹಾಯುದ್ಧ ನಡೆದರೂ ನಡೀಬೋದು ಅಂತ, ಹಲವಾರು ಮಂದಿ ಭಯಾನಕ ಭವಿಷ್ಯ ನುಡೀತಿದಾರೆ.. ಅಷ್ಟಕ್ಕೂ ಇದಕ್ಕೆಲ್ಲಾ ಮೂಲ ಕಾರಣವಾಗಿದ್ದು, ಬರೀ ರಷ್ಯಾ ಉಕ್ರೇನ್ ನಡುವಿನ ಸಂಘರ್ಷ ಅಲ್ಲ.. ಮಧ್ಯಪ್ರಾಚ್ಯದ ಭೀಕರ ಸನ್ನಿವೇಶ. ಜಗತ್ತನ್ನೇ ಕಾಡ್ತಾ ಇರೋ ಮೂರನೇ ಮಹಾಯುದ್ಧದ ಭೀತಿಗೆ, ಕಾರಣವಾಗಿರೋದೇ ಇರಾನ್ ಇಸ್ರೇಲ್ ನಡುವಿನ ವೈರ. ಇದೆಲ್ಲದರ ಕತೆ ಒಂದಾದ್ರೆ, ಅಲ್ಲಿ, ಮತ್ತೆರಡು ದೇಶಗಳು, ತನ್ನ ಜನರನ್ನ ಮಹಾಯುದ್ಧಕ್ಕೆ ಸಜ್ಜಾಗಿ ಅಂತ ಸಿದ್ಧಗೊಳಿಸ್ತಾ ಇದೆ. ಒಂದಲ್ಲಾ, ಎರಡಲ್ಲ, ಬರೋಬ್ಬರಿ ಮೂರು ಮಹಾ ಪ್ರದೇಶಗಳಲ್ಲಿ ದೇಶದೇಶಗಳ ನಡುವೆ ಯುದ್ಧ ಶುರುವಾಗಿದೆ.. 3ನೇ ಮಹಾಯುದ್ಧದ ಸುಳಿವು ಕೊಡ್ತಾ ಇವೆ, ಆ 3 ಯುದ್ಧಗಳು.. ಸಾವಿರ ದಿನ ಕಳೆದರೂ ಸಮರ ಮುಗಿದಿಲ್ಲ.. ಸಾವು ನಿಂತಿಲ್ಲ! ಈಗಷ್ಟೇ ಉಕ್ರೇನ್ ಮೇಲೆ ರಷ್ಯಾ ಹೈಪರ್ಸಾನಿಕ್ ದಾಳಿ ನಡೆಸಿ, ಮಾರಣಹೋಮದ ಸುಳಿವು ಕೊಟ್ಟಿದೆ.. ಇರಾನ್ ಇಸ್ರೇಲ್ ಮಧ್ಯೆ, ಭೀಕರ ಸಂಗ್ರಾಮಕ್ಕೆ, ರಣಾಂಗಣ ಸಿದ್ಧವಾಗ್ತಾ ಇದೆ.. ಯುದ್ಧಕ್ಕೆ ಸನ್ನದ್ಧರಾಗಿ ಅಂತ ತನ್ನ ಪ್ರಜೆಗಳಿಗೆ ಸ್ವೀಡನ್.. ಫಿನ್ಲ್ಯಾಂಡ್ ಆದೇಶ ಹೊರಡಿಸಿವೆ.. ಈ ಎಲ್ಲಾ ಯುದ್ಧಗಳ ಅತಿ ಭಯಾನಕ ರಿಪೋರ್ಟ್, ಇಲ್ಲಿದೆ ನೋಡಿ.