ಮೋದಿಯಿಂದ ಡೆನ್ಮಾರ್ಕ್ ಯುವರಾಣಿ ಮೇರಿಗೆ ಗಾಜಿನ ಹಕ್ಕಿ, ಯುವರಾಜನಿಗೆ ಡೋಕ್ರಾ ದೋಣಿ, ಏನಿದರ ಮಿಸ್ಟರಿ?

ಪ್ರಧಾನಿ ನರೇಂದ್ರ ಮೋದಿಯವರ (PM Modi) ಮೂರು ದಿನದ ವಿದೇಶಿ ಪ್ರವಾಸ ಅಂತ್ಯಗೊಂಡಿದೆ. ಮೇ 2 ರಂದು ಮೋದಿ ಜರ್ಮನಿಗೆ (Germony) ಭೇಟಿ ನೀಡುವ ಮೂಲಕ ವಿದೇಶ ಪ್ರವಾಸ ಆರಂಭಿಸಿದ್ದರು. 

Share this Video
  • FB
  • Linkdin
  • Whatsapp

ಪ್ರಧಾನಿ ನರೇಂದ್ರ ಮೋದಿಯವರ (PM Modi) ಮೂರು ದಿನದ ವಿದೇಶಿ ಪ್ರವಾಸ ಅಂತ್ಯಗೊಂಡಿದೆ. ಮೇ 2 ರಂದು ಮೋದಿ ಜರ್ಮನಿಗೆ (Germony) ಭೇಟಿ ನೀಡುವ ಮೂಲಕ ವಿದೇಶ ಪ್ರವಾಸ ಆರಂಭಿಸಿದ್ದರು. ಈ ಮಹತ್ವದ ಪ್ರವಾಸದಲ್ಲಿ ಮೋದಿಯವರು ಡೆನ್ಮಾರ್ಕ್‌ನ ರಾಜಕುಟುಂಬವನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು.

News Hour ಬೊಮ್ಮಾಯಿ ಸರ್ಕಾರದ ಸರ್ವೇ ರಿಪೋರ್ಟ್, ಹೈಕಮಾಂಡ್‌ನಿಂದ ಬಂತು ಖಡಕ್ ಸೂಚನೆ!

ಡೆನ್ಮಾರ್ಕಿನ ಯುವರಾಣಿ ಮೇರಿಗೆ ಗಾಜಿನ ಹಕ್ಕಿಯನ್ನು (Silver Meenakari Bird) ಉಡುಗೊರೆಯಾಗಿ ನೀಡಿದರು. ಈ ಹಕ್ಕಿಯನ್ನು ಮಾಡುವ ಮೀನಾಕಾರಿ ಕಲೆಗೆ ನೂರಾರು ವರ್ಷಗಳ ಇತಿಹಾಸವಿದೆ. ಡೆನ್ಮಾರ್ಕ್ ಯುವರಾಜನಿಗೆ ಡೋಕ್ರಾ ದೋಣಿಯನ್ನು (Dokra boat) ಉಡುಗೊರೆಯಾಗಿ ಕೊಡಲಾಯಿತು. ನವಿಲಿನ ನೌಕೆ 4 ಸಾವಿರ ವರ್ಷಗಳ ಇತಿಹಾಸವನ್ನು ಸಾರುತ್ತದೆ. ಇನ್ನು ಡೆನ್ಮಾರ್ಕ್ ರಾಣಿ 2 ನೇ ಮಾರ್ಗರೇಟ್‌ಗೆ ರೋಗನ್ ಪೇಯಿಂಟಿಂಗ್‌ನ್ನು ಉಡುಗೊರೆಯಾಗಿ ನೀಡಿದರು. ಉಡುಗೊರೆಗಳನ್ನು ಕೊಡುವುದರ ಹಿಂದೆ ಭಾರತೀಯ ವೈಭವ, ನಮ್ಮ ಐತಿಹಾಸದ ಶ್ರೀಮಂತಿಯನ್ನು ಸಾರುವುದು ಉದ್ಧೇಶವಾಗಿತ್ತು. 

Related Video