Asianet Suvarna News Asianet Suvarna News

ರಸಗುಲ್ಲಕ್ಕೂ ಬಿತ್ತು ಟ್ಯಾಕ್ಸ್, ಇಮ್ರಾನ್ ಖಾನ್‌ ವಿರುದ್ದ ದಂಗೆಯೆದ್ದ ಜನ.!

ಪಾಕಿಸ್ತಾನದಲ್ಲಿ ರಸಗುಲ್ಲ ವಿಚಾರಕ್ಕೆ ದೊಡ್ಡ ಹೋರಾಟವೇ ಶುರುವಾಗಿದೆ. ಇದಕ್ಕೆ ಕಾರಣ ಪ್ರಧಾನಿ ಇಮ್ರಾನ್ ಖಾನ್ ರಸಗುಲ್ಲದ ಮೇಲೆ ಟ್ಯಾಕ್ಸ್ ಹಾಕುವುದಕ್ಕೆ ಶುರು ಮಾಡಿದ್ದು. ರಸಗುಲ್ಲ ಪಾಕ್‌ನ ಸಾಂಪ್ರದಾಯಿಕ ತಿನಿಸು. 

Apr 16, 2021, 2:29 PM IST

ನವದೆಹಲಿ (ಏ. 16): ಪಾಕಿಸ್ತಾನದಲ್ಲಿ ರಸಗುಲ್ಲ ವಿಚಾರಕ್ಕೆ ದೊಡ್ಡ ಹೋರಾಟವೇ ಶುರುವಾಗಿದೆ. ಇದಕ್ಕೆ ಕಾರಣ ಪ್ರಧಾನಿ ಇಮ್ರಾನ್ ಖಾನ್ ರಸಗುಲ್ಲದ ಮೇಲೆ ಟ್ಯಾಕ್ಸ್ ಹಾಕುವುದಕ್ಕೆ ಶುರು ಮಾಡಿದ್ದು. ರಸಗುಲ್ಲ ಪಾಕ್‌ನ ಸಾಂಪ್ರದಾಯಿಕ ತಿನಿಸು. ಎಲ್ಲಾ ಸಮಾರಂಭಗಳಲ್ಲಿ ಈ ತಿನಿಸು ಇದ್ದೇ ಇರುತ್ತದೆ. ಈ ತಿನಿಸಿನ ಮೇಲೆ 20 ರೂ ಟ್ಯಾಕ್ಸ್ ಹಾಕಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಜನ ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಹೇಗೋ ಜೀವನ ಮಾಡುತ್ತಿದ್ದಾರೆ. ಅಂತದ್ರಲ್ಲಿ 2 ರೂ ಇದ್ದ ರಸಗುಲ್ಲಕ್ಕೆ 20 ರೂ ಮಾಡಿದ್ದಕ್ಕೆ ಬೀದಿಗೆ ಬಂದಿದ್ದಾರೆ. ಆಡಳಿತ ವಿರೋಧಿ ಅಲೆ ಹೇಗಿದೆ ಎಂದರೆ ಅದು ಅಲೆಯಲ್ಲ, ಸುನಾಮಿ ಎನ್ನುವ ಹಾಗೆ ಮಾಡಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ.