ಗಲ್ವಾನ್ ನದಿ ತಿರುಗಿಸಲು ಚೀನಾ ಯತ್ನ: ಗ್ರಾಫ್ ಮೂಲಕ ತಿಳಿಸುವ ಪ್ರಯತ್ನವಿದು..!
20 ಭಾರತೀಯ ಯೋಧರ ಸಾವಿಗೆ ಕಾರಣವಾದ ಚೀನಾ-ಭಾರತ ಯೋಧರ ಸಂಘರ್ಷದ ಬೆನ್ನಲ್ಲೇ, ಈಶಾನ್ಯ ಲಡಾಖ್‌ನ ಗಲ್ವಾನ್ ನದಿಯ ಹರಿವನ್ನು ತಿರುಗಿಸಲು ಚೀನಾ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ಕೆಲವು ಉಪಗ್ರಹ ಚಿತ್ರಗಳು ಮಾಧ್ಯಮಗಳಿಗೆ ಲಭ್ಯವಾಗಿದ್ದು, ಹರಿವನ್ನು ತಡೆಯಲು ಬಳಕೆಯಾಗುತ್ತಿತ್ತು ಎನ್ನಲಾದ ಬುಲ್ಡೋಜರ್ ಕಾಣಿಸಿದೆ.
ನವದೆಹಲಿ (ಜೂ. 19): 20 ಭಾರತೀಯ ಯೋಧರ ಸಾವಿಗೆ ಕಾರಣವಾದ ಚೀನಾ-ಭಾರತ ಯೋಧರ ಸಂಘರ್ಷದ ಬೆನ್ನಲ್ಲೇ, ಈಶಾನ್ಯ ಲಡಾಖ್‌ನ ಗಲ್ವಾನ್ ನದಿಯ ಹರಿವನ್ನು ತಿರುಗಿಸಲು ಚೀನಾ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ಕೆಲವು ಉಪಗ್ರಹ ಚಿತ್ರಗಳು ಮಾಧ್ಯಮಗಳಿಗೆ ಲಭ್ಯವಾಗಿದ್ದು, ಹರಿವನ್ನು ತಡೆಯಲು ಬಳಕೆಯಾಗುತ್ತಿತ್ತು ಎನ್ನಲಾದ ಬುಲ್ಡೋಜರ್ ಕಾಣಿಸಿದೆ.
ಗಲ್ವಾನ್ ಗಡಿಯಲ್ಲಿ ಉದ್ವಿಗ್ನ ಸ್ಥಿತಿ: ಯುದ್ಧ ವಿಮಾನ ಖರೀದಿಯಲ್ಲಿ ವಾಯುಸೇನೆ
ಸಂಘರ್ಷ ನಡೆದ ಸ್ಥಳದಿಂದ 1 ಕಿ.ಮೀ. ದೂರದಲ್ಲಿ ಚೀನಾದ ಬುಲ್ಡೋಜರ್‌ಗಳು ಉಪಗ್ರಹ ಚಿತ್ರದಲ್ಲಿ ಪತ್ತೆಯಾಗಿವೆ. ಈ ಸ್ಥಳದಲ್ಲಿ ನದಿಯು ಪದೇ ಪದೇ ತಿರುವು ಬದಲಿಸುತ್ತಿರುವುದು ಕಾಣಿಸಿದೆ. ವಿವಾದಿತ ಅಕ್ಸಾಯ್ ಚಿನ್‌ನಿಂದ ಲಡಾಖ್‌ನತ್ತ ಈ ನದಿ ಹರಿಯುತ್ತದೆ. ಚೀನಾದಲ್ಲಿ ನೀಲಿ ಬಣ್ಣದಲ್ಲಿ ಶುಷ್ಕವಾಗಿದ್ದ ನೀರು, ವಾಸ್ತವ ಗಡಿ ರೇಖೆ ದಾಟಿ ಭಾರತಕ್ಕೆ ಹರಿವು ಆರಂಭಿಸುತ್ತಿದ್ದಂತೆಯೇ ಮಣ್ಣು ಮಿಶ್ರಿತ ನೀರಾಗಿ ಹಾಗೂ ಕಾಣಲು ಆಗದಷ್ಟುಚಿಕ್ಕದಾಗಿ ಪರಿವರ್ತಿತವಾಗಿದೆ. ಇದೇ ವೇಳೆ, ಭಾರತದ ಸೇನಾ ಟ್ರಕ್‌ಗಳು ಗಡಿಯಿಂದ ಈಚೆ 2 ಕಿ.ಮೀ. ದೂರದಲ್ಲಿ ಒಣಗಿದ ಗಲ್ವಾನ್ ನದಿ ತೀರದಲ್ಲಿ ನಿಂತಿದ್ದು ಕಂಡುಬರುತ್ತದೆ. ಇದನ್ನು ಗ್ರಾಫ್ ಮೂಲಕ ಹೇಳಿದರೆ ಇನ್ನೂ ಸುಲಭವಾಗಿ ಅರ್ಥ ಆಗುತ್ತದೆ. ಇಲ್ಲಿದೆ ನೋಡಿ..!