ರಷ್ಯಾ-ಉಕ್ರೇನ್ ಆಯ್ತು.. ತೈವಾನ್-ಚೀನಾ ವಾರ್ ಶುರು..!
- ಬ್ಯಾನ್ ನೆಪದಲ್ಲಿ ಚೀನಾ ಮಸಲತ್ತು
- ರಷ್ಯಾ-ಉಕ್ರೇನ್ ಯುದ್ಧ ಜ್ವಾಲೆ ಮಧ್ಯೆಯೇ ತೈವಾನ್-ಚೀನಾ ಯುದ್ಧಾಗ್ನಿ
- ಪುಟಾಣಿ ತೈವಾನ್ ಮೇಲೆ ಡ್ರ್ಯಾಗನ್ ಚೀನಾಗೆ ಯಾಕೆ ಕೆಂಗಣ್ಣು
ರಷ್ಯಾ-ಉಕ್ರೇನ್ ಯುದ್ಧ ಜ್ವಾಲೆ ಮಧ್ಯೆಯೇ ತೈವಾನ್ ಚೀನಾ ಯುದ್ಧ ಸನ್ನಿಹಿತವಾಗಿದೆ.ತೈವಾನ್‌ಲ್ಲಿ ಬೆಳೆಸಲಾಗುವ ಹಣ್ಣುಗಳಿಗೆ ವಿದೇಶಗಳಲ್ಲಿ ಭಾರೀ ಬೇಡಿಕೆ ಇದೆ. ಚೀನಾ ಕೂಡಾ ಇಲ್ಲಿಂದಾನೆ ಭಿನ್ನ-ಭಿನ್ನ ಬಗೆಯ ಹಣ್ಣುಗಳನ್ನ ಆಮದು ಮಾಡಿಕೊಳ್ಳುತ್ತೆ. ತೈವಾನ್‌ಗೆ ಅಲ್ಲಿ ಬೆಳೆಸಲಾಗುವ ಹಣ್ಣುಗಳ ರಫ್ತಿನಿಂದಲೇ ಕೋಟಿ ಕೋಟಿ ಲಾಭ ಆಗುತ್ತಿತ್ತು. ಆದರೆ ಈಗ ಚೀನಾ ಏಕಾಏಕಿ ತೈವಾನ್‌ನಿಂದ ಯಾವುದೇ ಹಣ್ಣುಗಳೂ ದೇಶದೊಳಗೆ ತರುವ ಹಾಗಿಲ್ಲ ಅಂತ ಕಟ್ಟುನಿಟ್ಟಿನ ಆದೇಶವನ್ನ ಹೊರಡಿಸಿದೆ. ಈ ಮೂಲಕ ತೈವಾನ್ ಆರ್ಥಿಕವಾಗಿ ಕುಗ್ಗಲಿ ಅನ್ನೊದು ಚೀನಾದ ಅಸಲಿ ಪ್ಲಾನ್. ಈಗ ಇದೇ ಹಣ್ಣಿನ ಮಹಾಯುದ್ಧಕ್ಕೆ ಮುನ್ನುಡಿ ಬರೆದಂತಾಗಿದೆ.