
ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
ಅಮೆರಿಕದಲ್ಲಿ ನಡೆದ ಭೀಕರ ಹತ್ಯೆಯೊಂದು ಜಾಗತಿಕ ರಾಜಕೀಯ ಪ್ರಕ್ಷುಬ್ಧತೆಗೆ ಕಾರಣವಾಗಿದೆ. ಈ ಘಟನೆಯ ಪರಿಣಾಮಗಳು ಜಗತ್ತಿನಾದ್ಯಂತ ಹೇಗೆ ಪ್ರತಿಧ್ವನಿಸುತ್ತಿವೆ ಎಂಬುದನ್ನು ಈ ಲೇಖನ ವಿವರಿಸುತ್ತದೆ. ಯುರೋಪಿನಲ್ಲೂ ಸಂಘರ್ಷದ ಕಿಡಿ ಹೊತ್ತಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ.
ಇಡಿ ಜಗತ್ತಲ್ಲಿ ಪ್ರಳಯಕಾರಿ ಸನ್ನಿವೇಶ ನಿರ್ಮಾಣವಾಗಿದೆ.. ಆದ್ರೆ ಇದು, ಭೂಕಂಪವೋ, ಸುನಾಮಿಯೋ, ಮತ್ತೊಂದೊ,ಮ ಮಗದೊಂದೋ ಅಲ್ಲ.. ಅದೆಲ್ಲವನ್ನೂ ಮೀರಿದ ಪ್ರಳಯ.ಪ್ರಪಂಚ ರಾಜಕೀಯದ ಪ್ರಚಂಡ ಪ್ರಳಯ.. ಆ ಪ್ರಳಯದ ಕೇಂದ್ರ ಬಿಂದು ಎಲ್ಲಿದೆಯೋ ಗೊತ್ತಿಲ್ಲ. ಆದ್ರೆ ಅದರ ಪರಿಣಾಮ, ಪ್ರಭಾವ ಭೂಮಂಡಲವನ್ನೆಲ್ಲಾ ಆವರಿಸಿಕೊಳ್ತಾ ಇದೆ. ಅದು ಹೇಗೆ ಅನ್ನೋದನ್ನ ಹೇಳ್ತೀವಿ.ಅದಕ್ಕಿಂತಾ ಮುಂಚೆ, ಈ ಭಯಾನಕ ಘಟನೆಯ ಕತೆ ಕೇಳಿ.
ಮಾತೆತ್ತಿದರೆ ಸಾಕು ತನ್ನನ್ನ ತಾನು ದೊಡ್ಡಣ್ಣ ಅಂತ ಹೆಮ್ಮೆಯಿಂದ ಹೇಳಿಕೊಳ್ಳೋ ದೇಶ, ಈ ಅಮೆರಿಕಾ.. ಆದ್ರೆ ಇದೇ ಅಮೆರಿಕಾದಲ್ಲಿ ನಡೆದಿದ್ದು ಮಾತ್ರ, ಘೋರಾತಿಘೋರ, ಭೀಕರ ಹತ್ಯೆ.ಮಟಮಟ ಮಧ್ಯಾಹ್ನ.ನೂರಾರು ಜನರ ಸಮಕ್ಷಮದಲ್ಲಿ, ಸಿನಿಮಾದಲ್ ಹೊಡೆದಾಕೋ ಥರ, ಸ್ನೈಪರ್ ಶೂಟ್ ಮಾಡಿ ಕೊಲೆ ಮಾಡಲಾಗಿದೆ.ಅಷ್ಟಕ್ಕೂ, ಇಷ್ಟು ದಾರುಣವಾಗಿ ಸತ್ತವನು ಯಾರು? ಅವನ ಸಾವಿಗೆ ಇಡೀ ಅಮೆರಿಕಾ ಗಡಗಡ ನಡುಗಿದ್ಯಾಕೆ? ಜೀವ ತೆಗೆದ ಗುಂಡನ್ನ ತೂರಿಬಿಟ್ಟಿದ್ಯಾರು? ಅಂತೂ ಅಮೆರಿಕಾದಲ್ಲಿ ಜ್ವಾಲಾಮುಖಿಯೊಂದು ಆಸ್ಫೋಟಗೊಂಡಿದೆ.ಆದ್ರೆ ಇದರ ಕಿಡಿ ಇಷ್ಟಕ್ಕೇ ನಿಲ್ಲುವಂಥದ್ದಲ್ಲ.ಇದರ ಪರಿಣಾಮ ಮುಂದೇನಾಗಲಿದೆ ಅಂತ ನೋಡೋಕೂ ಮೊದಲೇ, ಯುರೋಪಿಯನ್ ರಾಷ್ಟ್ರದಲ್ಲೊಂದು ಕಿಡಿ ಹೊತ್ತಿಕೊಂಡಿದೆ.