ಮೋದಿ- ಬೈಡೆನ್ ಸಂಭಾಷಣೆ ನೋಡಿ ಪಾಕ್‌ಗೆ ಪುಕಪುಕ, ಚೀನಾಗೆ ಹೈಪರ್ ಟೆನ್ಷನ್.!
ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್ ಚುನಾಯಿತರಾದ ನಂತರ ಇಂಡೋ-ಅಮೆರಿಕಾ ಸಂಬಂಧದ ಬಗ್ಗೆ, ಮೋದಿ-ಬೈಡೆನ್ ಬಾಂಧವ್ಯದ ಬಗ್ಗೆ ಸಾಕಷ್ಟು ರಾಜಕೀಯ ಚರ್ಚೆಯಾಗಿತ್ತು. ಬೈಡೆನ್ ಅಮೆರಿಕಾ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಜೊತೆ ಫೋನ್ ಸಂಭಾಷಣೆ ನಡೆಸಿದ್ದಾರೆ.
ನವದೆಹಲಿ (ಫೆ. 11): ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್ ಚುನಾಯಿತರಾದ ನಂತರ ಇಂಡೋ-ಅಮೆರಿಕಾ ಸಂಬಂಧದ ಬಗ್ಗೆ, ಮೋದಿ-ಬೈಡೆನ್ ಬಾಂಧವ್ಯದ ಬಗ್ಗೆ ಸಾಕಷ್ಟು ರಾಜಕೀಯ ಚರ್ಚೆಯಾಗಿತ್ತು. ಬೈಡೆನ್ ಅಮೆರಿಕಾ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಜೊತೆ ಫೋನ್ ಸಂಭಾಷಣೆ ನಡೆಸಿದ್ದಾರೆ. ಈ ವೇಳೆ ಎರಡೂ ದೇಶಗಳ ಸಹಕಾರವನ್ನು ವಿವಿಧ ವಲಯಗಳಲ್ಲಿ ವೃದ್ಧಿಸುವ ಬದ್ಧತೆಯನ್ನು ಉಭಯ ನಾಯಕರು ವ್ಯಕ್ತಪಡಿಸಿದ್ದಾರೆ.
ಪಂಚಮಸಾಲಿಗಳ ಪಂಚ್, ವಾಲ್ಮೀಕಿ ವಾರ್, ಕುರುಬರ ಕಿಕ್; ಸಿಎಂಗೆ ಸವಾಲಾಗಿದೆ ಮೀಸಲಾತಿ ಹೋರಾಟ
‘ನಾನು ಬೈಡೆನ್ ಅವರ ಯಶಸ್ಸಿಗೆ ಹಾರೈಸಿದೆ. ಪ್ರಾದೇಶಿಕ ವಿಚಾರಗಳ ಬಗ್ಗೆ ಚರ್ಚಿಸಿ ಯಾವುದಕ್ಕೆ ಆದ್ಯತೆ ನೀಡಬೇಕೆಂಬ ಬಗ್ಗೆ ಮಾತುಕತೆ ನಡೆಸಿದೆವು. ಹವಾಮಾನ ಬದಲಾವಣೆ ವಿರುದ್ಧ ಹೋರಾಡಲು ಒಪ್ಪಿಕೊಂಡೆವು. ಇಂಡೋ ಪೆಸಿಫಿಕ್ ಹಾಗೂ ಇತರ ಪ್ರದೇಶಗಳಲ್ಲಿ ಶಾಂತಿ ಸ್ಥಾಪಿಸುವ ಉದ್ದೇಶದಿಂದ ವ್ಯೂಹಾತ್ಮಕ ಸಹಭಾಗಿತ್ವ ಬಲಗೊಳಿಸಲು ಹಾಗೂ ಅಂತಾರಾಷ್ಟ್ರೀಯ ನಿಯಮಗಳಿಗೆ ಬದ್ಧರಾಗಿರುವುದಾಗಿ ನಿರ್ಧರಿಸಿದೆವು’ ಎಂದು ಮಾತುಕತೆ ಬಗ್ಗೆ ಮೋದಿ ಟ್ವೀಟ್ ಮಾಡಿದ್ದಾರೆ.