Suvarna Focus: ಪಾಕ್ ಸಹವಾಸವೇ ಬೇಡ ಅಂತಿದೆ ಬಲೂಚ್ ಪಡೆ, ಚೀನಾಗೆ ಶುರುವಾಯ್ತು ನಡುಕ!

ಬಲೂಚಿಸ್ತಾನವು ತನ್ನನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡಿದ್ದು, ಪಾಕಿಸ್ತಾನಕ್ಕೆ ಆತಂಕವನ್ನುಂಟುಮಾಡಿದೆ. ಭಾರತದ ನಿರ್ಧಾರ ಈ ಪರಿಸ್ಥಿತಿಯನ್ನು ಹೇಗೆ ಬದಲಾಯಿಸಬಹುದು ಎಂಬುದನ್ನು ಈ ಲೇಖನ ವಿವರಿಸುತ್ತದೆ. ಬಲೂಚಿಸ್ತಾನದ ಜನರು ಭಾರತದೊಂದಿಗೆ ವಿಲೀನಗೊಳ್ಳುವ ಅಥವಾ ಸ್ವತಂತ್ರ ರಾಷ್ಟ್ರವಾಗುವ ಗುರಿಯನ್ನು ಹೊಂದಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಮೇ.17): ಕಳೆದ ಕೆಲವು ದಿನಗಳಲ್ಲಿ 7 ದಶಕಗಳಿಂದಲೂ ನಡೆಯುತ್ತಿದ್ದ ಒಂದು ಹೋರಾಟ, ಅಂತಿಮ ಹಂತಕ್ಕೆ ಬಂದ ಹಾಗೆ ಕಾಣುತ್ತಿದೆ. ಪಾಪಿದೇಶದ ಕಪಿಮುಷ್ಠಿಯಿಂದ ಆಚೆ ಬರಬೇಕು ಎಂದು ಒದ್ದಾಡುತ್ತಿದ್ದ ಬಲೂಚಿಸ್ತಾನ, ಈಗ ತನ್ನನ್ನು ತಾನು ಸ್ವತಂತ್ರ ಅಂತ ಘೋಷಿಸಿಕೊಂಡಿದೆ.

ಇದರ ಬೆನ್ನಲ್ಲಿಯೇ ಪಾಕಿಸ್ತಾನಕ್ಕೆ ಪುಕಪುಕ ಶುರುವಾಗಿದೆ. ಚೀನಾ ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿದೆ. ಇಂಥಾ ಪರಿಸ್ಥಿತಿಯಲ್ಲಿ ಭಾರತದ ಒಂದು ನಿರ್ಧಾರ ಏನು ಮ್ಯಾಜಿಕ್ ಮಾಡಲಿದೆ ಅನ್ನೋ ವಿವರ ಇಲ್ಲಿದೆ.

ಬಲೂಚಿಸ್ತಾನದ 80% ನಿಯಂತ್ರಣ ಕಳೆದುಕೊಂಡ ಪಾಕಿಸ್ತಾನ: ಬಲೂಚ್ ನಾಯಕ

ಬಲೂಚಿಸ್ತಾನ ಸ್ವತಂತ್ರಕ್ಕೋಸ್ಕರ ಹೋರಾಡ್ತಾ ಇರೋ ಭೂಪ್ರದೇಶ. ಅಲ್ಲಿನ ಜನಕ್ಕೆ ಒಂದೋ, ಭಾರತದ ಜೊತೆ ವಿಲೀನವಾಗಬೇಕು ಅಥವಾ ತಾವೇ ಒಂದು ಸ್ವತಂತ್ರ ರಾಷ್ಟ್ರವಾಗಬೇಕು. ಇದೇ ಅವರ ಗುರಿ.. ಒಟ್ಟಾರೆ, ಪಾಕಿಸ್ತಾನದಿಂದ ಮುಕ್ತಿಬೇಕು.. ಆ ಮುಕ್ತಿಗಾಗಿಯೇ ಈ ರಕ್ತಕ್ರಾಂತಿ ನಡೆಯುತ್ತಿದೆ.

Related Video