ಭಾರತ ನಮ್ಮನ್ನ ಬೆಂಬಲಿಸಿದ್ರೆ, ನಮ್ಮ ಬಾಗಿಲು ತೆರೆಯುತ್ತೇವೆ ಅಂತ ಮಿರ್ ಯಾರ್ ಹೇಳಿದ್ದಾರೆ. ಸ್ವಾತಂತ್ರ್ಯ ಘೋಷಣೆ ಬಳಿಕ ಪಾಕ್ ಸೇನೆಗೆ ಪ್ರದೇಶದಲ್ಲಿ ನಿಯಂತ್ರಣವಿಲ್ಲ ಅಂತ ಬಲೂಚ್ ನಾಯಕರು ಹೇಳ್ತಾರೆ.

ಇಸ್ಲಾಮಾಬಾದ್: ಬಲೂಚಿಸ್ತಾನದ ನಿಯಂತ್ರಣ ಪಾಕ್ ಸೇನೆಗೆ ಇಲ್ಲ, ಸ್ವತಂತ್ರ ಬಲೂಚಿಸ್ತಾನವನ್ನ ಒಪ್ಕೊಂಡು ಭಾರತ ನಮ್ಮ ಜೊತೆ ನಿಲ್ಲಬೇಕು ಅಂತ ಬಲೂಚ್ ನಾಯಕ ಮಿರ್ ಯಾರ್ ಬಲೂಚ್ ಹೇಳಿದ್ದಾರೆ. ಪಾಕಿಸ್ತಾನಕ್ಕೆ ಬಲೂಚಿಸ್ತಾನದ ಮೇಲೆ ಯಾವ ನಿಯಂತ್ರಣವೂ ಇಲ್ಲ. ಬಲೂಚಿಸ್ತಾನದ 80% ನಿಯಂತ್ರಣ ಪಾಕಿಸ್ತಾನ ಕಳ್ಕೊಂಡಿದೆ. ಈ ಸನ್ನಿವೇಶವನ್ನ ಬಳಸಿಕೊಂಡು ಪಾಕಿಸ್ತಾನದಿಂದ ಬೇರ್ಪಡಲು ದಿಟ್ಟ ಹೆಜ್ಜೆ ಇಡ್ತಿದ್ದೀವಿ ಅಂತ ಮಿರ್ ಯಾರ್ ಬಲೂಚ್ ಸ್ಪಷ್ಟಪಡಿಸಿದ್ದಾರೆ.

ಸ್ವತಂತ್ರ ಬಲೂಚಿಸ್ತಾನವನ್ನ ಒಪ್ಕೊಂಡು ಬೆಂಬಲ ನೀಡಲು ಭಾರತ ಮತ್ತು ವಿಶ್ವಸಂಸ್ಥೆಗೆ ಬಲೂಚ್ ನಾಯಕರು ಮನವಿ ಮಾಡಿದ್ದಾರೆ. ಭಾರತ ನಮ್ಮನ್ನ ಬೆಂಬಲಿಸಿದ್ರೆ, ನಮ್ಮ ಬಾಗಿಲು ತೆರೆಯುತ್ತೇವೆ ಅಂತ ಮಿರ್ ಯಾರ್ ಹೇಳಿದ್ದಾರೆ. ಬಲೂಚಿಸ್ತಾನದಿಂದ ಪಾಕ್ ಭದ್ರತಾ ಪಡೆಗಳನ್ನ ಹಿಂದಕ್ಕೆ ಕರೆಸಿಕೊಳ್ಳಬೇಕು ಅಂತಲೂ ನಾಯಕರು ಒತ್ತಾಯಿಸಿದ್ದಾರೆ. ಸ್ವಾತಂತ್ರ್ಯ ಘೋಷಣೆ ಬಳಿಕ ಪಾಕ್ ಸೇನೆಗೆ ಪ್ರದೇಶದಲ್ಲಿ ನಿಯಂತ್ರಣವಿಲ್ಲ ಅಂತ ಬಲೂಚ್ ನಾಯಕರು ಹೇಳ್ತಾರೆ. ಬಾಂಗ್ಲಾದೇಶದಂಥ ಪರಿಸ್ಥಿತಿ ಬರುವವರೆಗೂ ಕಾಯದೆ, ಅವರು ಗೌರವಯುತವಾಗಿ ಹಿಂದೆ ಸರಿಯಬೇಕು ಅಂತಲೂ ಬಲೂಚ್ ನಾಯಕರು ಹೇಳಿದ್ದಾರೆ.

ಬಲೂಚಿಸ್ತಾನ ಈಗ ಪಾಕಿಸ್ತಾನದ ನಿಯಂತ್ರಣದಲ್ಲಿಲ್ಲ. ಪಾಕ್ ಸೇನೆಗೆ ರಾತ್ರಿ ಕ್ವೆಟ್ಟಾ ಬಿಟ್ಟು ಹೋಗೋಕೂ ಆಗ್ತಿಲ್ಲ ಅಂತ ಬಲೂಚ್ ನಾಯಕರು ಹೇಳ್ತಾರೆ. ಭದ್ರತಾ ಭೀತಿಯಿಂದ ಬಲೂಚಿಸ್ತಾನದಲ್ಲಿ ಪಾಕ್ ಸೇನೆ ಸಂಜೆ 5 ರಿಂದ ಬೆಳಗ್ಗೆ 5 ರವರೆಗೆ ಗಸ್ತು ತಿರುಗೋದನ್ನ ನಿಲ್ಲಿಸಿದೆ. ಪ್ರದೇಶದ 70-80% ನಿಯಂತ್ರಣ ಪಾಕಿಸ್ತಾನ ಕಳ್ಕೊಂಡಿದೆ ಅಂತ ರಝಾಕ್ ಬಲೂಚ್ ಹೇಳಿದ್ದಾರೆ.

ವಿಶ್ವಸಂಸ್ಥೆಯಲ್ಲೂ ನಮ್ಮನ್ನು ಗುರುತಿಸಬೇಕು
ಇತ್ತೀಚೆಗಷ್ಟೇ ಬಲೂಚ್‌ ಹೋರಾಟಗಾರ ಮಿರ್‌ ಯಾರ್‌, ‘ಉಗ್ರ ಪಾಕ್‌ನ ಪತನ ಸನ್ನಿಹಿತವಾಗುತ್ತಿದೆ. ನಾವು ಅದರಿಂದ ಸ್ವಾತಂತ್ರ್ಯ ಘೋಷಿಸಿಕೊಂಡಿದ್ದೇವೆ ಮತ್ತು ನಮ್ಮ ರಾಜಭಾರ ಕಚೇರಿಯನ್ನು ತೆರೆಯಲು ಅನುಮತಿಸುವಂತೆ ಭಾರತಕ್ಕೆ ಮನವಿ ಮಾಡುತ್ತಿದ್ದೇವೆ. ವಿಶ್ವಸಂಸ್ಥೆಯಲ್ಲೂ ನಮ್ಮನ್ನು ಗುರುತಿಸಬೇಕು ಮತ್ತು ನಿಧಿ ಬಿಡುಗಡೆ ಮಾಡಬೇಕು’ ಎಂದಿದ್ದರು. ಅಷ್ಟೇ ಅಲ್ಲದೆ, ‘ಪಾಕ್‌ ಪರ ಚೀನಾ ಇರುವಂತೆ ಭಾರತದ ಪರವಾಗಿ 60 ದಶಲಕ್ಷ ಬಲೂಚಿಗಳಿದ್ದೇವೆ’ ಎಂದೂ ಅವರು ಹೇಳಿದ್ದರು.

ಇದನ್ನೂ ಓದಿ: ಆಪರೇಷನ್‌ ಸಿಂದೂರ ಬೆನ್ನಲ್ಲೇ ರಕ್ಷಣಾ ಇಲಾಖೆಗೆ ಹೆಚ್ಚುವರಿ ₹50,000 ಕೋಟಿ! ರಕ್ಷಣಾ ಇಲಾಖೆ ವಾರ್ಷಿಕ ಬಜೆಟ್ ಎಷ್ಟು?

ಪಾಕ್‌ನ 51 ಸ್ಥಳಗಳ ಮೇಲೆ ಬಲೂಚಿಗಳ ಭಾರೀ ದಾಳಿ
ಅಕ್ರಮಿತ ಬಲೂಚಿಸ್ತಾನದ 51 ಸ್ಥಳಗಳಲ್ಲಿ ಪಾಕ್ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸಿರುವುದಾಗಿ ಬಿಎಲ್‌ಇ ಹೇಳಿಕೊಂಡಿತ್ತು. ಪಾಕ್ ಆಕ್ರಮಿತ ಬಲೂಚಿಸ್ತಾನದ ಮೇಲಿನ ದಾಳಿ ಹೊಣೆ ಬಿಎಲ್‌ಇ ಹೊತ್ತಿಕೊಂಡಿದೆ. ಈ ಬಗ್ಗೆ ವಕ್ತಾರ ಜೀಯಂದ್ ಬಲೂಚ್ ಪ್ರಕಟಣೆ ನೀಡಿದದ್ದು, ‘ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಘರ್ಷಣೆ ಉತ್ತುಂಗದಲ್ಲಿದ್ದಾಗ ಬಲೂಚ್‌ ಲಿರಬರೇಷನ್ ಆರ್ಮಿ ಪಾಕಿಸ್ತಾನದ ಮಿಲಿಟರಿ ಮತ್ತು ಗುಪ್ತಚರ ತಾಣಗಳನ್ನು ಗುರಿಯಾಗಿಸಿಕೊಂಡು 51ಕ್ಕೂ ಹೆಚ್ಚು ಸ್ಥಳಗಳಲ್ಲಿ 71 ಸಂಘಟಿತ ದಾಳಿಗಳನ್ನು ನಡೆಸಿತ್ತು. ಮಿಲಿಟರಿ ಬೆಂಗಾವಲುಗಳು ಮತ್ತು ಗುಪ್ತಚರ ಕೇಂದ್ರಗಳು ಮತ್ತು ಖನಿಜ ಸಾಗಣೆ ವಾಹನಗಳನ್ನು ಗುರಿಯಾಗಿಸಿಕೊಂಡ ದಾಳಿ ನಡೆಸಿದ್ದೇವೆ ’ ಎಂದು ಬಿಎಲ್ಇ ಹೇಳಿಕೆ ಬಿಡುಗಡೆ ಮಾಡಿತ್ತು.

ಪಾಕಿಸ್ತಾನ ವಿಭಜನೆಗೊಂಡು ಸಿಂಧ್ ಮತ್ತು ಬಲೂಚಿಸ್ತಾನ ರಾಷ್ಟ್ರ ಅಸ್ತಿತ್ವಕ್ಕೆ ಬರಲು ಭಾರತ ಜಾಗತಿಕ ಮಟ್ಟದಲ್ಲಿ ರಾಜತಾಂತ್ರಿಕವಾಗಿ ಯಶಸ್ವಿಯಾದರೆ ಮಗ್ಗುಲ ಮುಳ್ಳನ್ನು ಕಿತ್ತೆಸದಂತಾಗುತ್ತದೆ. ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರವಾಗುವಲ್ಲಿ ಬ್ರಿಟಿಷರು ನಡೆಸಿದ ಕುತಂತ್ರವನ್ನೂ ಕೊನೆಗೊಳಿಸಿದಂತಾಗುತ್ತದೆ. ಭಾರತ ಗಡಿಗೆ ಪಾಕಿಸ್ತಾನ ಇನ್ನಷ್ಟು ದೂರ ಆಗುವುದರಿಂದ ದಾಳಿ ಆತಂಕ ಸ್ವಲ್ಪ ಕಡಿಮೆಯಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ಕಾಂಗ್ರೆಸ್ ಸೈನ್ಯವನ್ನೂ ನಂಬುತ್ತಿಲ್ಲ, ಪಾಕಿಸ್ತಾನ ಧ್ವನಿಯಾಗಿ ಮಾತನಾಡುತ್ತಿದೆ: ಕೇಂದ್ರ ಸಚಿವ ಜೋಶಿ ಗರಂ