ಇಸ್ರೇಲ್ ಪರ ಕದನಕಣಕ್ಕೆ ಧುಮುಕಿದೆ ಅಮೆರಿಕಾ: ವಿಶ್ವಯುದ್ಧ ಸೃಷ್ಟಿಸುತ್ತಾ ಮಧ್ಯಪ್ರಾಚ್ಯದ ಶೀತಲಸಮರ..?
ಉಗ್ರರ ಬೆನ್ನಿಗೆ ಚೀನಾ.. ಇರಾನ್..!
ಇಸ್ರೇಲ್ ಹೆಗಲಿಗೆ ನಿಂತ ಅಮೆರಿಕಾ..!
ಮುಂದೇನಾಗುತ್ತೆ ಈ ಯುದ್ಧಕಾಂಡ..?
ಮಹಾಯುದ್ಧದತ್ತ ಗಾಜಾ-ಇಸ್ರೇಲ್ ಸಂಘರ್ಷ ಸಾಗುತ್ತಿದೆ. ಹಮಾಸ್(Hamas) ಕೈಲಿ ಚೀನಾದ(China) ಅಯುಧಗಳಿವೆ. ಹೌತಿ ಉಗ್ರರ ಬೆನ್ನಿಗೆ ಇರಾನ್ ನಿಂತಿದೆ. ಇಸ್ರೇಲ್ ಪರ ಕದನಕಣಕ್ಕೆ ಅಮೆರಿಕಾ(America) ಧುಮುಕಿದೆ. ಈ ಜಗತ್ತು ಅದಾಗಲೇ ಎರಡು ಮಹಾಯುದ್ಧಗಳನ್ನ ನೋಡಿದೆ. ಮೂರನೇ ಮಹಾಯುದ್ಧ ಯಾವುದೇ ಕಾರಣಕ್ಕೂ ನಡೀಬಾರದು ಅನ್ನೋ ಉದ್ದೇಶಕ್ಕೆ, ನೂರೆಂಟು ಒಪ್ಪಂದಗಳನ್ನ ಮಾಡ್ಕೊಂಡಿದ್ದೀವಿ. ಸಾವಿರಾರು ಸಂಸ್ಥೆಗಳು ಅದೇ ಧ್ಯೇಯಕ್ಕಾಗಿ ತಲೆ ಎತ್ತಿ ನಿಂತಿದ್ದಾವೆ. ಆದ್ರೆ ಇದೆಲ್ಲವನ್ನೂ ಮೀರಿ ಮತ್ತೊಂದು ಮಹಾಯುದ್ಧ ಆರಂಭವವಾಗೋ ಲಕ್ಷಣ ಕಾಣ್ತಾ ಇದೆ. ಉಗ್ರರ ದಾಳಿಯಿಂದಲೇ ಆ ವಿಶ್ವಸಮರ ಶುರುವಾಗೋ ಸಾಧ್ಯತೆ ಇದೆ. ಕಳೆದ ಅಕ್ಟೋಬರ್ 7ನೇ ತಾರೀಖನ್ನ ಯಾರು ಮರೆತರೂ ಇಸ್ರೇಲ್ ಮಾತ್ರ ಮರೆಯೋಕೆ ಸಾಧ್ಯವೇ ಇಲ್ಲ. ಅವತ್ತಿಂದಲೇ ಇಸ್ರೇಲ್ ಪಾಲಿನ ಅತಿಭೀಕರ ಭಯಾನಕ ಕ್ಷಣಗಳು ಎದುರಾದ್ವು. ಅದೇ ಇವತ್ತು ಈ ದಾರುಣಕ್ಕೆಲ್ಲಾ ಪ್ರಮುಖ ಕಾರಣ. ಉಗ್ರರು ಶುರುಮಾಡಿದ ದಾಳಿಗೆ, ಇಸ್ರೇಲ್ ಪ್ರತಿದಾಳಿ ಆರಂಭಿಸಿತು.. ಅದೇ ಈಗ ಈ ಯುದ್ಧವಾಗಿ ಬದಲಾಗಿದೆ. ಇದೇ ಯುದ್ಧವೇ ಮಹಾಯುದ್ಧವಾಗೋಕೆ ಇನ್ನೂ ಹೆಚ್ಚು ಕಾಲ ಬೇಕಾಗಿಲ್ಲ ಅನ್ನೋ ಮಾತು ಕೇಳಿಬರ್ತಿದೆ.
ಇದನ್ನೂ ವೀಕ್ಷಿಸಿ: ಅವನನ್ನ ಮುಗಿಸಲು ಟಾಯ್ಲೆಟ್‌ನಲ್ಲಿ ಅಡಗಿದ್ರು..! ಮನೆ ಕಟ್ಟಿದ್ದೇ ತಪ್ಪಾಗಿ ಹೊಯ್ತಾ..?