ಸಂಘರ್ಷದ ಬಳಿಕ ಗಾಜಾ ಪಟ್ಟಿ ಕತೆ ಏನು..? ಗಾಜಾ ಆಧಿಪತ್ಯ ನಿರ್ಧರಿಸಲು ಸಿದ್ಧವಾಗಿವೆ 3 ಪ್ಲಾನ್‌ಗಳು!
ತಿಂಗಳು ಕಳೆದರೂ ನಿಂತಿಲ್ಲ ಇಸ್ರೇಲ್-ಹಮಾಸ್ ಸಂಘರ್ಷ!
ಅದೊಂದು ನಿರ್ಣಯ ಬದಲಿಸುತ್ತಾ ಯುದ್ಧದ ಭವಿಷ್ಯ..?
ಇಸ್ರೇಲ್ ಕಾರ್ಯ ಸಾಧನೆ ನಂತರ ಗಾಜಾ ಯಾರ ಪಾಲು..?
ಹಮಾಸ್ ಅನ್ನೋ ಉಗ್ರ ಸಂಘಟನೆಯ ಸರ್ವನಾಶ ಮಾಡೋದಕ್ಕಂತಲೇ ಇಸ್ರೇಲ್(Israel) ಕಟಿಬದ್ಧವಾಗಿದೆ.ಒಬ್ಬನೇ ಒಬ್ಬ ಹಮಾಸ್ ಉಗ್ರ ಕೂಡ ಉಳೀಬಾರದು ಅನ್ನೋದೇ ಇಸ್ರೇಲಿನ ಒನ್ ವರ್ಡ್ ಅಜೆಂಡಾ. ಹಾಗಾಗಿನೇ, ಹಮಾಸ್(Hamas) ಉಗ್ರರ ಸ್ವರ್ಗವಾಗಿರೋ ಗಾಜಾದ ನಾಶಕ್ಕೆ ಮುಂದಾಗಿದೆ ಇಸ್ರೇಲ್. ಇಸ್ರೇಲಿನ ವಿರುದ್ಧ ನಿಲ್ಲೋದು ಹಮಾಸ್‌ಗೆ ಅಸಾಧ್ಯದ ಮಾತು. ಆದ್ರೆ ಇಸ್ರೇಲ್‌ನ ಎಷ್ಟು ಅಯ್ಯೋ ಅನ್ನಿಸಬಹುದೋ, ಅಷ್ಟು ಗೋಳುಹೊಯ್ಕೊತಿದಾರೆ ಉಗ್ರರು. ಇಸ್ರೇಲಿನ ನಾಗರಿಕರನ್ನ ಕಿಡ್ನಾಪ್ ಮಾಡಿದ್ದಾರೆ. ಇಸ್ರೇಲ್ ತನ್ನ ಮೇಲೆ, ತನ್ನ ಅಮಾಯಕ ಜನರ ಮೇಲೆ ನಿರ್ದಯವಾಗಿ ದಾಳಿ ಮಾಡ್ತಾ ಇದೆ ಅಂತ ವಿಶ್ವಮಟ್ಟದಲ್ಲಿ ಪ್ರಚಾರ ಮಾಡ್ತಾ ಇದಾರೆ. ಇಸ್ರೇಲ್ ತನ್ನ ಪ್ರತಿದಾಳಿಯನ್ನೂ ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಬಂದುಬಿಟ್ಟಿದೆ. ಇಸ್ರೇಲ್ ಉದ್ದೇಶವಂತೂ ನಿರ್ದಿಷ್ಟವಾಗಿದೆ. ಒಬ್ಬನೇ ಒಬ್ಬ ಹಮಾಸ್ ಉಗ್ರ ಕೂಡ ಬದುಕುಳಿಬಾರ್ದು ಅನ್ನೋದೇ ಇಸ್ರೇಲಿನ ಧ್ಯೇಯ ವಾಕ್ಯ. ಹಾಗಾಗಿನೇ, ಹಗಲು ಇರುಳು ಅಂತ ಗ್ಯಾಪ್ ಕೊಡದೆ, ಉಗ್ರ ಸರ್ಪಗಳ ನಾಶಕ್ಕೆ ನಿಂತಿದೆ. ಇಸ್ರೇಲೇನೋ ತನ್ನ ಶತ್ರುವಾಗಿರೋ ಹಮಾಸ್ ಉಗ್ರ ಸಂಘಟನೆಯನ್ನ ನಾಶ ಮಾಡುತ್ತೆ. ಗಾಜಾದಲ್ಲಿ(Gaza) ಸರ್ಕಾರ ನಡೆಸೋದು ಅಂದ್ರೆ, ಉಗ್ರವಾದಕ್ಕೆ ಪೋಷಣೆ ನೀಡೋದು ಅಂತಲೇ ಅರ್ಥ. ನೀವು ಯುದ್ಧಕ್ಕೂ ಮುಂಚಿನ ಗಾಜಾ ನೋಡಿದ್ರೆ, ಇದು ಒಳ್ಳೆ ಡೆವಲಪ್ಡ್ ಕಂಟ್ರಿ ಅಂದ್ಕೊತೀರಿ. ಆದ್ರೆ ಇಲ್ಲಿ ಒಂದೇ ಒಂದು ಉತ್ಪಾದನೆ ನಡೆಯಲ್ಲಾ, ಒಂದೇ ಒಂದು ಮಾರ್ಕೆಟ್ ಇಲ್ಲ.. ಹಾಗಾದ್ರೆ, ಇಲ್ಲಿನ ರೋಡು, ಕಟ್ಟಡ, ನಿರ್ಮಾಣ ಕಾರ್ಯಕ್ಕೆಲ್ಲಾ ದುಡ್ಡು ಎಲ್ಲಿಂದ ಬರುತ್ತೆ ಅಂದ್ರೆ, ಡೊನೇಷನ್ನಿಂದ ಅಂತ ಹೇಳ್ಬೇಕಾಗುತ್ತೆ.. ಇಸ್ರೇಲ್ ಸೇರಿದಂತೆ, ಬಹುತೇಕ ದೇಶಗಳು, ಗಾಜಾದ ಉದ್ಧಾರಕ್ಕೆ ಅಂತ ಡೊನೆಷನ್ ಕೊಡ್ತಾವೆ.. ಆ ದುಡ್ಡಲ್ಲೇ ಇವೆಲ್ಲಾ ನಿರ್ಮಾಣವಾಗಿವೆ.. ದುರಂತ ಅಂದ್ರೆ, ಈ ಎಲ್ಲಾ ನಿರ್ಮಾಣಕಾರ್ಯಕ್ಕಿಂತಾ ಹೆಚ್ಚಿನ ಹಣ ವೆಚ್ಚವಾಗಿರೋದು, ಹಮಾಸ್ ಉಗ್ರರ ಪೋಷಣೆಗೆ.
ಇದನ್ನೂ ವೀಕ್ಷಿಸಿ: ನಿವೃತ್ತಿಗೆ ಯಾರ ಒತ್ತಡವೂ ಇಲ್ಲ ಎಂದ ಸದಾನಂದಗೌಡ..! ಹಲವು ಹಿರಿಯ ಸಂಸದರಿಗೆ ಈ ಬಾರಿ ಸಿಗಲ್ವಾ ಟಿಕೆಟ್..?