ನಿವೃತ್ತಿಗೆ ಯಾರ ಒತ್ತಡವೂ ಇಲ್ಲ ಎಂದ ಸದಾನಂದಗೌಡ..! ಹಲವು ಹಿರಿಯ ಸಂಸದರಿಗೆ ಈ ಬಾರಿ ಸಿಗಲ್ವಾ ಟಿಕೆಟ್..?

‘ಸದಾನಂದಗೌಡರಿಗೆ ಕೇಂದ್ರ ಸೂಚನೆ ಕೊಟ್ಟಿದೆ’
‘ಸದಾನಂದಗೌಡ ಈ ಬಾರಿ ಚುನಾವಣೆಗೆ ನಿಲ್ಲಲ್ಲ’
‘ನೇರವಾಗಿ ಚುನಾವಣೆಗೆ ನಿಲ್ಲದಂತೆ ಸೂಚಿಸಿದೆ ’
ಸದಾನಂದಗೌಡ ನಿವೃತ್ತಿ ಬಗ್ಗೆ ಬಿಎಸ್‌ವೈ ಹೇಳಿಕೆ

Share this Video
  • FB
  • Linkdin
  • Whatsapp

ಕೇಂದ್ರ ಮಾಜಿ ಸಚಿವ ಡಿ.ವಿ. ಸದಾನಂದಗೌಡ(DV Sadanand Gowda) ನಿವೃತ್ತಿ(Retire) ಘೋಷಣೆ ಮಾಡಿದ್ದು, ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಎಲ್ಲಾ ಅನುಭವಿಸಿದ್ದೇನೆ ಇಷ್ಟು ಸಾಕು ಎಂದು ಡಿ.ವಿ. ಸದಾನಂದಗೌಡ ಹೇಳಿದ್ದಾರೆ. ಮೂವತ್ತು ವರ್ಷದಿಂದ ಪಕ್ಷದ ಎಲ್ಲಾ ಸ್ಥಾನಮಾನ ನೋಡಿದ್ದೇನೆ. ಪಕ್ಷದಲ್ಲಿ ಎಲ್ಲಾ ಅಧಿಕಾರವನ್ನ ಅನುಭವಿಸಿದ್ದೇನೆ ಎಂದು ಡಿವಿಎಸ್ ಹೇಳಿದ್ದಾರೆ. ನಿವೃತ್ತಿಗೆ ಯಾರ ಒತ್ತಡವೂ ಇಲ್ಲ ಎಂದ ಡಿ.ವಿ. ಸದಾನಂದಗೌಡ ಹೇಳಿದ್ದಾರೆ. ಇತ್ತೀಚೆಗೆ ಹೈಕಮಾಂಡ್ ಭೇಟಿ ಮಾಡಿದ್ದರು. ಬುಲಾವ್ ನೀಡಿ ದೆಹಲಿಗೆ ಕರೆಸಿಕೊಂಡಿದ್ದ ಬಿಜೆಪಿ ಹೈಕಮಾಂಡ್(BJP), ಜೆ.ಪಿ ನಡ್ಡಾ ಭೇಟಿಯಾಗಿ ಚರ್ಚೆ ನಡೆಸಿದ ಬಳಿಕ ನಿವೃತ್ತಿ ಘೋಷಣೆ ಮಾಡಿದ್ದಾರೆ. ಲೋಕಸಭೆ ಚುನಾವಣೆಗೆ ಅಖಾಡಕ್ಕಳಿತಾ ಬಿಜೆಪಿ ಹೈಕಮಾಂಡ್? ಹಲವು ಹಿರಿಯ ಸಂಸದರಿಗೆ ಈ ಬಾರಿ ಸಿಗಲ್ವಾ ಬಿಜೆಪಿ ಟಿಕೆಟ್..? ಎಂಬ ಪ್ರಶ್ನೆ ಇದೀಗ ಕಾಡ ತೊಡಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ದೀಪಾವಳಿ ವಿಭಿನ್ನವಾಗಿ ಆಚರಿಸುವ ಗೌಳಿ ಸಮುದಾಯ: ಬಲಿಪಾಡ್ಯಮಿ ದಿನ ಎಮ್ಮೆ, ಕೋಣ ಸಿಂಗರಿಸಿ ಸಂಭ್ರಮ

Related Video