ಯುದ್ಧಭೂಮಿಯಲ್ಲಿ ಸುವರ್ಣ ನ್ಯೂಸ್ ಸಂಚಾರ: ಕಣ್ಣೆದುರೇ ರಾಕೆಟ್ ಅಟ್ಯಾಕ್..ಲೈವ್‌ನಲ್ಲೇ ಸೈರನ್ ಸದ್ದು..!
3ನೇ ದಿನವೂ ವಾರ್ ಝೋನ್ನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್
ರಣಕಣದಿಂದ ಅಜಿತ್ ಹನಮಕ್ಕನವರ್ ನಾನ್ ಸ್ಟಾಪ್ ವರದಿ
ಇಸ್ರೇಲ್ ಯುದ್ಧಭೂಮಿಯಿಂದ ನಿರಂತರ ರಿಪೋರ್ಟಿಂಗ್..!
ಮೂರನೇ ದಿನವೂ ಯುದ್ಧ ಭೂಮಿಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಯನ್ನು ಮಾಡುತ್ತಿದ್ದು, ಇಸ್ರೇಲ್(Israel), ಹಮಾಸ್ (Hamas), ಜೋರ್ಡಾನ್ ಗಡಿ, ಪವಿತ್ರ ಸ್ಥಳ ಜೆರುಸಲೇಂನಲ್ಲಿಂದಲೂ(Jerusalem) ವರದಿಯನ್ನು ನೀಡಲಾಗುತ್ತಿದೆ. ಗುಂಡಿನ ಮೊರೆತ, ಬಾಂಬ್ ಸದ್ದಿನ ನಡುವೆಯೂ ಕದನಕಣದಿಂದ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಮಾಡುತ್ತಿದೆ. ಜೋರ್ಡಾನ್, ಜೆರುಸಲೇಂನ ಯುದ್ಧ ಭೂಮಿಯಲ್ಲಿ ಅಜಿತ್ ಹನಮಕ್ಕನವರ್(Ajit Hanamakkanavar) ಅಲ್ಲಿನ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ. ಮಿಸೈಲ್ ಅಟ್ಯಾಕ್, ಸೈರನ್ ಶಬ್ಧವಿದ್ದರೂ ನಿರಂತರವಾಗಿ ಯುದ್ಧ ಭೂಮಿಯಿಂದ ಲೈವ್ ನೀಡಲಾಗುತ್ತಿದೆ. ಈ ವೇಳೆ ಹಮಾಸ್ ಉಗ್ರರ ಅಟ್ಟಹಾಸಕ್ಕೆ ಹಲವಾರು ಸಾಕ್ಷಿಗಳು ದೊರೆತಿವೆ.
ಇದನ್ನೂ ವೀಕ್ಷಿಸಿ: ಇಸ್ರೇಲ್ ಬೆನ್ನಿಗೆ ನಿಂತ ವಿಶ್ವದ ಬಲಿಷ್ಠ ರಾಷ್ಟ್ರಗಳು: ಲೆಬನಾನ್ ಗುರಿಯಾಗಿಸಿಕೊಂಡು ಸಿದ್ಧವಾಗಿ ನಿಂತ ಇಸ್ರೇಲ್ ಸೇನೆ