Asianet Suvarna News Asianet Suvarna News

‘ಮುಖ ಮುಚ್ಕೊಂಡ್ ಸುದ್ದಿ ಓದಿ’: ತಾಲಿಬಾನಿಗಳ ತಲೆಬೇನೆ: ಅಬ್ಬೇಪಾರಿಯಾದ ಟಿವಿ ಆ್ಯಂಕರ್ಸ್‌

*‘ಮುಖ ಮುಚ್ಕೊಂಡ್ ಸುದ್ದಿ ಓದಿ’ ಹೊಸ ಕಾನೂನು..!
*ಅಫ್ಘಾನ್ ಜನರಿಗೆ ತಾಲಿಬಾನಿಗಳೇ ತಲೆ ಬೇನೆ..!
*ಹೊಸ ರೂಲ್ಸ್ ಕಂಡು ಅಬ್ಬೇಪಾರಿಯಾದ ಆ್ಯಂಕರ್ಸ್‌!

ಕಾಬೂಲ್‌ (ಮೇ 24): ಅಫ್ಘಾನಿಸ್ತಾನಕ್ಕೆ ಅದ್ಯಾವ ಕೆಟ್ಟ ಘಳಿಗೆಯಲ್ಲಿ ತಾಲಿಬಾನ್ (Taliban) ಅರೆ ಹುಚ್ಚರು ಕಾಲಿಟ್ಟರೋ ಗೊತ್ತಿಲ್ಲಾ, ಅಭಿವೃದ್ಧಿಯ ಪಥದಲ್ಲಿ ಇದ್ದ ದೇಶವನ್ನ ಸಂಪೂರ್ಣ ಅದ್ವಾನ ಮಾಡಿ ಬಿಟ್ಟಿದ್ದಾರೆ. ದಿನಕ್ಕೊಂದು ರೂಲ್ಸು, ಬಾಯಿಗೆ ಬಂದಿದ್ದೇ ಕಾನೂನು (Law) ಅನ್ನೋ ಥರ ಆಗಿದೆ. ಈಗ ಅಲ್ಲಿ ಬಂದಿರೋ ಹೊಸ ರೂಲ್ ಕೇಳಿದ್ರೆ ನಗಬೇಕೋ ಅಳಬೇಕೋ ಗೊತ್ತಾಗೋದಿಲ್ಲಾ. ಸುದ್ದಿ ಓದೋಕೆ ಬರೋ ಲೇಡಿ ಆ್ಯಂಕರ್ಸ್‌ (Female Anchors) ಬುರ್ಖಾ ಹಾಕಿಕೊಂಡು ಸುದ್ದಿ ಓದಬೇಕಂತೆ. 

ಇದನ್ನೂ ನೋಡಿ: ಪಾಕಿಸ್ತಾನದ ಕ್ಯಾತೆಗೆ ರೊಚ್ಚಿಗೆದ್ದ ಅಫ್ಘಾನ್,ಪಾತಕಿ ದೇಶಕ್ಕೆ ಧಮ್ಕಿ!: 

ಟಿವಿ ಆಂಕರ್ಗಳು ಅಂದರೆ ಅವರಿಗೆ ಒಂದು ಐಡೆಂಟಿಟಿ ಇರುತ್ತೆ. ಅವರಿಗೆ ಆದಂತಹ ಅಭಿಮಾನಿಗಳು ಇರ್ತಾರೆ. ಅವರ ಸುದ್ದಿಗಾಗಿ ಕಾದು ಕುಳಿತು ಟಿವಿ ನೋಡೋರು ಸಿಕ್ತಾರೆ. ನಿರೂಪಕರು ಅಂದ್ರೆನೇ ಹಾಗೇ. ಆದ್ರೆ ತಾಲಿಬಾನ್ ರೂಲ್ಸಿನಲ್ಲಿ ಸಿಕ್ಕಿಕೊಂಡಿರೋ ಆ್ಯಂಕರ್ಸ್‌ಗಳಿಗೆ  ಇದೆಂತಾ ಬದುಕು ಇದೆಂತಾ ಕೆಲಸ ಅನ್ನೋ ಥರ ಆಗಿದೆ. ಮುಖ ಮುಚ್ಕೊಂಡು ಟಿವಿಯಲ್ಲಿ (Television) ಕಾಣಿಸಿಕೊಳ್ಳೀ ಎಂಬ ಆದೇಶ ಬಂದಿದೆ. ಈ ಕುರಿತ ವರದಿ ಇಲ್ಲಿದೆ 

Video Top Stories