ಮಾಜಿ ಅಧ್ಯಕ್ಷ ಕರ್ಜೈ ಜೊತೆ ತಾಲಿಬಾನ್ ಮಾತುಕತೆ: ಅಫ್ಘನ್‌ನಲ್ಲಿ ರಚನೆಯಾಗುತ್ತಾ ಸಮ್ಮಿಶ್ರ ಸರ್ಕಾರ?

ಅಧ್ಯಕ್ಷ ಅಶ್ರಫ್ ಘನಿ ಸರ್ಕಾರವನ್ನು ಪತನಗೊಳಿಸಿ ತಮ್ಮ ತೆಕ್ಕೆಗೆ ತೆಗೆದುಕೊಂಡಿರುವ ತಾಲಿಬಾನ್ ಉಗ್ರರು, ದೇಶದಲ್ಲಿ ಸಮ್ಮಿಶ್ರ ಸರ್ಕಾರ ರಚನೆಗೆ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ. 

Share this Video
  • FB
  • Linkdin
  • Whatsapp

ಕಾಬೂಲ್ (ಆ. 18): ಅಧ್ಯಕ್ಷ ಅಶ್ರಫ್ ಘನಿ ಸರ್ಕಾರವನ್ನು ಪತನಗೊಳಿಸಿ ತಮ್ಮ ತೆಕ್ಕೆಗೆ ತೆಗೆದುಕೊಂಡಿರುವ ತಾಲಿಬಾನ್ ಉಗ್ರರು, ದೇಶದಲ್ಲಿ ಸಮ್ಮಿಶ್ರ ಸರ್ಕಾರ ರಚನೆಗೆ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ. ಕಳೆದೆರಡು ದಿನಗಳಿಂದ ಹಲವು ರಾಜಕಾರಣಿಗಳ ಜೊತೆ ತಾಲಿಬಾನ್ ಮುಖಂಡರು ಮಾತುಕತೆ ನಡೆಸುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಸ್ಪಷ್ಟ ನಿರ್ಧಾರ ಹೊರಬೀಳಲಿದೆ. 

ಹೇಡಿ, ಸ್ವಾರ್ಥಿ ಅಧ್ಯಕ್ಷ ಅಶ್ರಫ್ ಘನಿ, ಪುಕ್ಕಲು ಸೇನೆ: ಅಫ್ಘನ್ ನಾಗರೀಕರು ಅತಂತ್ರ

ಸಮ್ಮಿಶ್ರ ಸರ್ಕಾರ ರಚನೆಯಿಂದ ಉಗ್ರರ ಆಡಳಿತ ಎಂಬ ಕಳಂಕ ತಪ್ಪುತ್ತದೆ. ವಿದೇಶಗಳ ಜೊತೆ ಸಂಬಂಧ ಸುಧಾರಣೆಯಾಗುತ್ತದೆ. ವಿದೇಶಗಳ ಮಾನ್ಯತೆ ಪಡೆಯಲು ಅವಕಾಶ ಸಿಕ್ಕಂತಾಗುತ್ತದೆ, 

Related Video