ಮದುವೆ ಉಡುಪು ಸಂಗ್ರಹಿಸಿ ಬಡ ಹೆಣ್ಮಕ್ಕಳಿಗೆ ನೆರವು ನೀಡುವ ಯುವತಿ

ಕಲಿಯುಗದಲ್ಲಿ ಸಾಕಷ್ಟು ದಾನ ಧರ್ಮ ಮಾಡುವವರು ಸಿಗುವುದೇ ಕಷ್ಟ. ಬರೇ ಸ್ವಾರ್ಥಿಗಳೇ ತುಂಬಿರೋ ಈ ಜಗತ್ತಲ್ಲಿ ಮುಸ್ಲಿಂ ಹೆಣ್ಣು ಮಗಳೊಬ್ಬಳು ಬಹಳ ಭಿನ್ನವಾಗಿ ನಿಂತಿದ್ದಾಳೆ. ಕಡುಬಡತನದಲ್ಲಿ ಇದ್ದರೂ ಬೇರೆ ಬಡವರ ಖುಷಿಗೆ ಈ ಹೆಣ್ಣು ಮಗಳು ಕಾರಣವಾಗಿದ್ದಾಳೆ.

First Published Apr 24, 2022, 12:28 PM IST | Last Updated Apr 24, 2022, 12:28 PM IST

ಮನೆಯ​ ತುಂಬಾ ತುಂಬಿರೋ ಬಗೆ ಬಗೆಯ ಉಡುಪುಗಳು(dresses).. ಬಟ್ಟೆ ಮಳಿಗೆಗೆ ಬಂದಿದ್ದೇವೇನೋ ಎಂದು ಭಾಸವಾಗುಂತೆ ತುಂಬಿರೋ ಬಟ್ಟೆಬರೆಗಳು. ಇದು ಶಹರಾ ಬಾನು ಎಂಬ 20 ವರ್ಷದ ಯುವತಿ ಸಂಗ್ರಹಿಸಿರೋ ಮದುವೆ ಉಡುಪುಗಳು. ಈ ಉಡುಪುಗಳನ್ನ ಈಕೆ ಬಡವರ ಮದುವೆಗೆ ಉಚಿತವಾಗಿ ನೀಡುತ್ತಾಳೆ. ಈಕೆ ಕೊಡಗು ಜಿಲ್ಲೆಯ ಮಡಿಕೇರಿ(Madikeri) ತಾಲ್ಲೂಕಿನ ಚೆಟ್ಟಳ್ಳಿ ಗ್ರಾಮದ ಶಹರಾ ಬಾನುವಿನ ಕಥೆ. ಬಡವರ ಮದುವೆಗೆ ತಾನು ಯಾಕೆ ಉಡುಪುಗಳನ್ನ ಸಂಗ್ರಹಿಸಿ  ಉಚಿತವಾಗಿ ನೀಡಬಾರದು ಎಂದು ಯೋಚಿಸಿದ್ದಾರೆ. ವಿವಿಧ ಕಡೆಗಳಿಂದ ಮದುವೆಯಲ್ಲಿ ಕೇವಲ ಒಂದು ಬಾರಿ ಬಳಸಿದ ಉತ್ತಮ ಉಡುಪುಗಳನ್ನ ಸಂಗ್ರಹಿಸಲಾರಂಭಿಸಿದ್ದಾರೆ. ಇವೆಲ್ಲವೂ ಶಹರಾಳ ಬಳಿ ಸಂಗ್ರಹದಲ್ಲಿವೆ. ಇವುಗಳನ್ನು ಬಡವರ ಮನೆಯ ಮದುವೆಗೆ ಉಚಿತವಾಗಿ ಕೊಡುತ್ತಾರೆ.  

ಅಲ್ಲದೆ ಬಡ ಹೆಣ್ಣು ಮಕ್ಕಳ ಮದುವೆಗೆ ತೆರಳಿ ಉಚಿತವಾಗಿ ಮೇಕಪ್ ಕೂಡ ಮಾಡಿಕೊಡುತ್ತಾರೆ. ಕೂಲಿ ಕೆಲಸ ಮಾಡಿಕೊಂಡು ತಾವೇ ಕಷ್ಟದಲ್ಲಿರೂ ಸಮಾಜ ಮುಖಿ ಸೇವೆ ಮಾಡುತ್ತಿರುವುದು ಎಲ್ಲರ ಪ್ರಶಂಸೆಗೆ  ಪಾತ್ರವಾಗಿದೆ. ಪುಟ್ಟ ಬಾಡಿಗೆ ಮನೆಯಲ್ಲಿದ್ದುಕೊಂಡು  ಈಕೆಯ ಪೋಷಕರು ಕೂಲಿ ಕೆಲಸಕ್ಕೆ ಹೋಗುತ್ತಾರೆ. ಆದ್ರೆ ಮಗಳು ಶಹರಾ ಮೇಕಪ್​ ವೃತ್ತಿ ಮಾಡಿಕೊಂಡು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಹಾಲು ಬೇಡ ಅನ್ನೋರು ಪೌಷ್ಠಿಕಾಂಶಕ್ಕಾಗಿ ಈ ಬದಲಿ ಆಹಾರ ಸೇವಿಸಿ

ಕಳೆದ ಎರಡು ವರ್ಷಗಳಿಂದ ಬಹಳಷ್ಟು ವಿವಾಹಗಳಿಗೆ ಶಹರಾ  ನೆರವಾಗಿದ್ದಾರೆ. ಯಾರೇ ಬಡವರು ತಮ್ಮ ಹೆಣ್ಣು ಮಗಳ ವಿವಾಹದ ಉಡುಪು ತೆಗೆಯಲು ಬಹಳ ಕಷ್ಟ ಆಗುತ್ತದೆ ಅಂತಾದ್ರೆ ದಯವಿಟ್ಟು ನನ್ನ ಬಳಿ ಬನ್ನಿ, ನಾನು ಸಹಾಯ ಮಾಡುತ್ತೇನೆ ಅಂತಾರೆ ಶಹರಾ ಬಾನು. ಸ್ವಾರ್ಥ ಸಾಧನೆಯಲ್ಲಿ ತೊಡಗಿರುವ ಎಷ್ಟೋ ಶ್ರೀಮಂತರ ಮಧ್ಯೆ ಇಂತಹ ಯುವತಿಯರು ನಿಜಕ್ಕೂ ಭಿನ್ನವಾಗಿ ನಿಲ್ಲುತ್ತಾರೆ.