ಕೊಡಗಿನ ಜಾನಪದ ಕಲೆಗಾರ್ತಿ ಪದ್ಮಶ್ರೀ ರಾಣಿ ಮಾಚ್ಚಯ್ಯ ಜೊತೆ ಮಾತುಕತೆ

ಕೊಡವ ಜನಾಂಗದ ಜಾನಪದ ನೃತ್ಯ ಉಮ್ಮತ್ತಾಟ್ ಕಲಾವಿದೆ,  ಕಲೆಗಾರ್ತಿ ರಾಣಿ ಮಾಚ್ಚಯ್ಯಗೆ ಪದ್ಮಶ್ರೀ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರಕಿದೆ. 1967ರಲ್ಲೇ ಉಮ್ಮತಾಟ್ ನೃತ್ಯ ತಂಡವನ್ನು ಕಟ್ಟಿದ್ದ ರಾಣಿ, ದೇಶದ ನಾನಾ ಭಾಗಗಳಲ್ಲಿ ಉಮ್ಮತಾಟ್ ನೃತ್ಯ ಪ್ರದರ್ಶನ ಮಾಡಿದ್ದಾರೆ.

First Published Jan 27, 2023, 3:14 PM IST | Last Updated Jan 27, 2023, 3:17 PM IST

ಕೊಡಗಿನ ಜಾನಪದ ಕಲೆಗಾರ್ತಿ ರಾಣಿಮಾಚ್ಚಯ್ಯ ಅವರಿಗೆ ಪದ್ಮಶ್ರೀ ಪ್ರಶಸ್ತಿಯ ಗರಿ ಮುಡಿಗೇರಿದೆ. ಕೊಡವ ಜನಾಂಗದ ಜಾನಪದ ನೃತ್ಯವಾದ ಉಮ್ಮತ್ತಾಟ್ ಕಲೆಯನ್ನು  ಯುವತಿಯರು, ಮಹಿಳೆ (Woman)ಯರಾದಿಯಾಗಿ  ಎಲ್ಲರಿಗೂ ಕಲಿಸುತ್ತಲೇ ಅದನ್ನು ಮತ್ತು ಪ್ರಚುರಪಡಿಸುವ ಕೆಲಸವನ್ನು ಹಿಂದಿನಿಂದಲೂ ಮಾಡುತ್ತಲೇ ಇದ್ದರು. ಹೀಗಾಗಿಯೇ ಆ ಜಾನಪದ ನೃತ್ಯ (Folk dance) ರಾಷ್ಟ್ರ ಅಷ್ಟೇ ಅಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಣ್ಯ ವೇದಿಕೆಗಳಲ್ಲಿ ಪ್ರದರ್ಶನ ಕಂಡು ಜನಮನ್ನಣೆ ಗಳಿಸುವಂತೆ ಮಾಡಿದ ಕೀರ್ತಿ, ಹೆಗ್ಗಳಿಕೆ ರಾಣಿಮಾಚ್ಚಯ್ಯ ಅವರಿಗೆ ಸಲ್ಲುತ್ತದೆ. 

Padma Awards 2023: ಎಸ್‌ಎಂ ಕೃಷ್ಣಗೆ ಪದ್ಮವಿಭೂಷಣ, ಎಸ್‌ಎಲ್‌ ಭೈರಪ್ಪ, ಸುಧಾಮೂರ್ತಿಗೆ ಪದ್ಮಭೂಷಣ ಗೌರವ!

ಅಷ್ಟುಮಾತ್ರವಲ್ಲ ಹಲವು ಯುವತಿಯರು ಹಾಗೂ ಮಹಿಳೆಯರನ್ನ ಒಗ್ಗೂಡಿಸಿಕೊಂಡು ಜಾನಪದ ನೃತ್ಯ ತಂಡವನ್ನ ಕಟ್ಟಿ ಕೊಡಗಿನ ಕೊಡವ ಜನಾಂಗದ ಜಾನಪದ ನೃತ್ಯ ಉಮ್ಮತಾಟ್ ಅನ್ನು ದೇಶಮಟ್ಟದಲ್ಲಿ ಪ್ರದರ್ಶನ ನೀಡಿದ ಕೀರ್ತಿ ರಾಣಿ ಮಾಚ್ಚಯ್ಯರಿಗೆ ಸಲ್ಲುತ್ತದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದಲ್ಲಿ  ಜನಿಸಿದ ಇವರು, 1967 ರಲ್ಲಿ ಉಮ್ಮತಾಟ್ ನೃತ್ಯ ತಂಡವನ್ನು ಕಟ್ಟಿದ್ದರು. ನಂತರ ಆ ತಂಡವನ್ನು ನಿರಂತರ ತರಬೇತಿಗೊಳಿಸುತ್ತಾ ದೇಶದ ನಾನಾ ಭಾಗಗಳಲ್ಲಿ ನಡೆಯುವ ಪ್ರಸಿದ್ಧ ವೇದಿಕೆಗಳಲ್ಲಿ ತಮ್ಮ ನೃತ್ಯ ಪ್ರದರ್ಶನ ನೀಡುವ ಮಟ್ಟಕ್ಕೆ ಬೆಳೆಸಿದರು. ಜಿಲ್ಲೆ, ರಾಜ್ಯ ದೇಶ ಮಟ್ಟದಲ್ಲಿ ಪ್ರದರ್ಶನವನ್ನು ನೀಡಿ ಜನ ಮನ್ನಣೆ ಗಳಿಸಿದ ರಾಣಿ ಮಾಚಯ್ಯರ ಈ  ಸೇವೆಯನ್ನ ಭಾರತ ಸರ್ಕಾರ ಗಮನಿಸಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ‌.