ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ನೀವು ಮಹತ್ತರ ಕಾರ್ಯ ಸಾಧಿಸದಿರಲು ಈ 6 ವಿಘ್ನಗಳೇ ಕಾರಣ ?

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..

First Published Oct 8, 2023, 11:44 AM IST | Last Updated Oct 8, 2023, 11:44 AM IST

ಈ ವಾರದ ಒಂದೊಳ್ಳೆ ಮಾತು ಏನೆಂದರೆ, ಮಹತ್ತರವಾದದ್ದನ್ನು ಸಾಧಿಸಲು ಆರು ವಿಘ್ನಗಳಿದ್ದಾವೆ. ಅವುಗಳೆಂದರೇ ಸೋಮಾರಿತನ, ಸ್ತ್ರೀಯರ ದೌರ್ಬಲ್ಯ, ರೋಗಬಾಧೆ, ಹುಟ್ಟೂರಿನ ವ್ಯಾಮೋಹ, ತೃಪ್ತಿ ಹಾಗೂ ಹೆದರಿಕೆ. ಇವುಗಳಿದ್ದರೆ ನಾವು ಮಹತ್ತರವಾದದ್ದನ್ನು ಸಾಧಿಸಲು ಸಾಧ್ಯವಿಲ್ಲ. ಇನ್ನೂ ಈ ವಾರದ ವಿಶೇಷ ಏನಂದ್ರೆ, ಅಕ್ಟೋಬರ್ 12, ಗುರುವಾರ ಪ್ರದೋಷ ಪೂಜೆ ಇದೆ. ಅಕ್ಟೋಬರ್ 13 ಅಂದರೆ ಶುಕ್ರವಾರ ಘಾತ ಚತುರ್ದಶಿ ಮಹಾಲಯ ಇದ್ದು, ಅಕ್ಟೋಬರ್ 14ರಂದು ಶನಿವಾರ ಮಹಾಲಯ ಅಮಾವಾಸ್ಯೆ ಇದೆ. ಈ ವಾರ ಧನಸ್ಸು ರಾಶಿಯವರಿಗೆ ಹಣಕಾಸಿನ ವ್ಯತ್ಯಾಸ ಆಗಲಿದ್ದು, ವಿದ್ಯಾರ್ಥಿಗಳಿಗೆ ತೊಂದರೆ, ಉಪನ್ಯಾಸಕ ವರ್ಗದವರು ಎಚ್ಚರವಾಗಿರಬೇಕು. ಆಹಾರ ವ್ಯತ್ಯಾಸದಿಂದ ತೊಂದರೆ. ವೃತ್ತಿಯಲ್ಲಿ ಅನುಕೂಲ. ಹೆಚ್ಚಿನ ಹಣವ್ಯಯ ಆಗಲಿದೆ. ಧರ್ಮಕಾರ್ಯಗಳಲ್ಲಿ ಭಾಗಿಯಾಗುತ್ತೀರಿ. ಈ ರಾಶಿಯವರು ಗುರು ಚರಿತ್ರೆ ಪಾರಾಯಣ ಮಾಡಿ. 

ಇದನ್ನೂ ವೀಕ್ಷಿಸಿ:  ಲಿಯೋ v/s ಘೋಸ್ಟ್: ಒಂದೇ ದಿನ ಇಬ್ಬರ ಸಿನಿಮಾ ರಿಲೀಸ್‌, ಫ್ಯಾನ್ಸ್ ಏನಂತಾರೆ..?