Asianet Suvarna News Asianet Suvarna News

Weekly-Horoscope: ನಿಮ್ಮ ವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ.. ಅಶುಭ..? ಇಲ್ಲಿದೆ ಮಾಹಿತಿ

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..
 

ಈ ವಾರದ ವಿಶೇಷತೆ ಈ ರೀತಿ ಇದ್ದು, ಇಂದು ಬುಧ ಕನ್ಯಾ ರಾಶಿ ಪ್ರವೇಶ ಮಾಡಲಿದ್ದಾನೆ. ಇನ್ನೂ ಶುಕ್ರ ಗ್ರಹ ಸಿಂಹ ರಾಶಿ ಪ್ರವೇಶ ಮಾಡಲಿದೆ. ಅ.3ರಂದು ಮಂಗಳವಾರ ಕುಜಗ್ರಹ ತುಲಾರಾಶಿ ಪ್ರವೇಶ ಮಾಡಲಿದ್ದು, ಅ.4 ಅಂದರೆ ಬುಧವಾರ ವ್ಯತೀಪಾತ ಮಹಾಲಯ ಇದೆ. ಅ.6 ಶುಕ್ರವಾರ ಮಧ್ಯಾಷ್ಟಮೀ ಇದ್ದು, ಅ.7 ರಂದು ಅವಿಧವಾ ನವಮಿ ಇದೆ. ಇನ್ನೂ ಈ ವಾರದ ರಾಶಿಗಳ ಫಲಾಫಲ ಈ ರೀತಿ ಇದೆ. ಮೇಷ ರಾಶಿಯ ಸ್ತ್ರೀಯರಿಗೆ ಹೆಚ್ಚಿನ ಅನುಕೂಲ ಇದ್ದು, ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ ಬರಲಿದೆ. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಬರಲಿದ್ದು, ವೃತ್ತಿಯಲ್ಲಿ ಅನುಕೂಲವಿದೆ. ವ್ಯವಹಾರಗಳಲ್ಲಿ ಮೋಸ ಹೋಗುವ ಸಾಧ್ಯತೆ ಇದೆ. ದೂರ ಪ್ರಯಾಣದಲ್ಲಿ ತೊಂದರೆಯಾಗುವ ಸಾಧ್ಯತೆ ಇದೆ. ಈ ರಾಶಿಯವರು ಲಕ್ಷ್ಮೀ ನರಸಿಂಹನ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ:  ತಲಕಾವೇರಿಗೆ ಅಭಿಷೇಕ್-ಅವಿವಾ ವಿಶೇಷ ಪೂಜೆ: ಕಾವೇರಿ ಒಡಲು ತುಂಬಲೆಂದು ಪ್ರಾರ್ಥನೆ..!

Video Top Stories