ತಲಕಾವೇರಿಗೆ ಅಭಿಷೇಕ್-ಅವಿವಾ ವಿಶೇಷ ಪೂಜೆ: ಕಾವೇರಿ ಒಡಲು ತುಂಬಲೆಂದು ಪ್ರಾರ್ಥನೆ..!

ಕೆಲವೇ ತಿಂಗಳುಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅವರು ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. 
 

Share this Video
  • FB
  • Linkdin
  • Whatsapp

ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್(Abhishek Ambareesh) ಇತ್ತೀಚೆಗಷ್ಟೆ ಪ್ರೀತಿಸಿ ಅವಿವಾ(Aviva) ಜೊತೆ ಸಪ್ತಪದಿ ತುಳಿದು ನವಜೀವನಕ್ಕೆ ಕಾಲಿಟ್ಟಿದ್ದರು. ಇನ್ನು ರಾಜ್ಯದಲ್ಲಿ ಈ ವರ್ಷ ಮಳೆಯ(Rain) ಅಭಾವ ಕಾಡುತ್ತಿದ್ದು, ಬೇಸಿಗೆ ವೇಳೆಗೆ ನೀರಿಗಾಗಿ ಆಹಾಕಾರ ಸೃಷ್ಟಿಯಾಕೋದು ಖಚಿತ ಎನ್ನುತ್ತಿದ್ದಾರೆ ತಜ್ನರು. ಇನ್ನು ಇದೇ ಸಂದರ್ಭದಲ್ಲಿ ಮಳೆಗಾಗಿ ಪ್ರಾರ್ಥಿಸಿ ಅಭಿಷೇಕ್ ಅಂಬರೀಷ್ ಮತ್ತು ಅವಿವಾ ದಂಪತಿ ಕೊಡಗು ಜಿಲ್ಲೆಯ ತಲಕಾವೇರಿಗೆ(Talakaveri) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಳೆ ಬರಲಿ ಎಂದು ಪ್ರಾರ್ಥಿಸುವುದರ ಜೊತೆಗೆ ಕಾವೇರಿ ವಿವಾದ ಬಗೆಹರಿಯಲೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ರೈತರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಅಂಬರೀಷ್ ಅವರು ಹೆಗಲಮೇಲೆ ಹಸಿರು ಟವೆಲ್ ಹಾಕಿದ್ದದ್ದು ಗಮನ ಸೆಳೆಯುತ್ತಿತ್ತು. ಅಭಿಷೇಕ್ ದಂಪತಿ ವಿಶೇಷ ಪೂಜೆ ಸಲ್ಲಿಸಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. 

ಇದನ್ನೂ ವೀಕ್ಷಿಸಿ: ಡಾರ್ಲಿಂಗ್ ಕೃಷ್ಣನ 'ಶುಗರ್ ಫ್ಯಾಕ್ಟರಿ' ಓಪನ್: ಸಿಕ್ಕಾಪಟ್ಟೆ ಸ್ವೀಟ್ ಕನ್ನಡದ ಈ ಹಾಟ್ ಕೇಕ್..!

Related Video