
Weekly-Horoscope: ಇಂದಿನಿಂದ ಶರತ್ ಕಾಲ ಆರಂಭ..ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ ?
ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..
ಇಂದಿನಿಂದ ಶರತ್ ಕಾಲ ಆರಂಭವಾಗಲಿದೆ. ಅಂದ್ರೆ ಮಂಗಲ ಕಾಲಕ್ಕೆ ಪ್ರವೇಶ ಮಾಡಲಿದ್ದೇವೆ.ಇನ್ನೂ ಈ ವಾರದ ವಿಶೇಷ ನೋಡುವುದಾದ್ರೆ, ಅ.15 ರಿಂದ ಶರನ್ನವರಾತ್ರಿ ಆರಂಭವಾಗಲಿದೆ. ಅ.18ರಂದು ಸೂರ್ಯ ತುಲಾ ಸಂಕ್ರಮಣ ಇದ್ದು, ಕಾವೇರಿಯಲ್ಲಿ ತೀರ್ಥೋದ್ಭವವಾಗಲಿದೆ. ಅ.20 ರಂದು ಅಂದರೆ ಶುಕ್ರವಾರ ಸರಸ್ವತಿ ಪೂಜೆ ಮಾಡಲಾಗುತ್ತದೆ. ಈ ವಾರ ಮೇಷ ರಾಶಿಯವರಿಗೆ ಲಾಭದ ದಿನವಾಗಿದೆ. ದಾಂಪತ್ಯದಲ್ಲಿ ಕೊಂಚ ಭಿನ್ನಾಭಿಪ್ರಾಯ ಬರಲಿದೆ. ಬಂಧು-ಮಿತ್ರರಲ್ಲಿ ಮನಸ್ತಾಪ ಬರಲಿದೆ. ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು, ಬುದ್ಧಿಬಲದ ಕೊರತೆ ಇರಲಿದೆ. ಸ್ತ್ರೀಯರಿಗೆ ವ್ಯಥೆ ಇದ್ದು, ವಾದಗಳಲ್ಲಿ ಸೋಲಾಗುವ ಸಾಧ್ಯತೆ ಇದೆ. ವಿಷಜಂತುಗಳ ಭಯ ಸಹ ಇದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ಕುಳ್ಳ ನಟನಿಗೆ ಬಂತು ಭರ್ಜರಿ ಡಿಮ್ಯಾಂಡ್! ಅಭಿನಯಿಸಿದ ಮೂರು ಸಿನಿಮಾನೂ ಸೂಪರ್ ಹಿಟ್!