ಕುಳ್ಳ ನಟನಿಗೆ ಬಂತು ಭರ್ಜರಿ ಡಿಮ್ಯಾಂಡ್! ಅಭಿನಯಿಸಿದ ಮೂರು ಸಿನಿಮಾನೂ ಸೂಪರ್ ಹಿಟ್!

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅಂತ ಇದಕ್ಕೆ ಹೇಳ್ತಾರೆ ಅನ್ನಿಸುತ್ತೆ. ರಜಿನಿಕಾಂತ್ ಜೈಲರ್  ಸಿನಿಮಾದಲ್ಲಿ ನೀವೆಲ್ಲಾ ಈ ಕುಳ್ಳ ನಟನನ್ನು ನೋಡಿರ್ತೀರಿ. ಮರಿಯೋಕೆ ಚಾನ್ಸ್ ಇಲ್ಲ. ಯಾಕಂದ್ರೆ ವಿಲನ್‌ಗಿಂತ ಜಾಸ್ತಿ ಬಿಲ್ಡಪ್ ಈ ನಟನಿಗೆ ಕೊಟ್ಟಿದ್ರು.
 

First Published Oct 15, 2023, 10:50 AM IST | Last Updated Oct 15, 2023, 10:50 AM IST

ತಮಿಳಿನ ನಟ ಜಾಫರ್ ಸಾದಿಕ್‌ಗೆ ಇದೀಗ ಸಿಕ್ಕಪಟ್ಟೆ ಡಿಮ್ಯಾಂಡ್. ಈತ  ಅಭಿನಯಿಸಿದ ಸಿನಿಮಾಗಳು ಕೋಟಿ ಕೋಟಿಗಳಿಸುತ್ತಿವೆ. ಒಂದು ರೀತಿ ಜಾಫರ್ ಸಾದಿಕ್(Zafar Sadiq) ಸ್ಟಾರ್‌ಗಳ  ಲಕ್ಕಿ ಚಾರ್ಮ್ ಆಗಿಬಿಟ್ಟಿದ್ದಾರೆ. 4.8 ಅಡಿ ಮಾತ್ರ ಇರೋದು. ಆದರೆ ಈತನ ಕ್ರೇಜ್ ಹೆಚ್ಚಾಗುತ್ತಿದೆ. ಮೊನ್ನೆ ಮೊನ್ನೆ ಬಂದ ಶಾರುಖಾನ್  ಜವಾನ್(Jawan) ಚಿತ್ರದಲ್ಲಿ ಜಾಫರ್ ಜಲ್ವಾ ಜೋರಿತ್ತು. ಜಾಫರ್ ಸಾದಿಕ್ ಕಷ್ಟದಿಂದಲೇ ಮೇಲೆ ಬಂದಿದ್ದಾರೆ. ಆರಂಭದಲ್ಲಿ ಡ್ಯಾನ್ಸರ್ ಆಗಿದ್ದರು ನಂತರ ಕೊರಿಯೋಗ್ರಾಫರ್ ಆದರು. ಹೈಟ್ ನೋಡಿದ್ರೆ, ಎಲ್ಲಿ ನಿಂತು ಡ್ಯಾನ್ಸ್ ಮಾಡ್ತಿದ್ರು ಅನ್ನುವ ಡೌಟ್ ಕೂಡ ಬರುತ್ತದೆ. ಆದರೆ ಪ್ರತಿಭೆ ಇದ್ರೆ ಏನ್ ಬೇಕಾದ್ರು ಆಗಬಹುದು ಅನ್ನೋದಕ್ಕೆ ಜಾಫರ್ ಸಾದಿಕ್ ಅತ್ಯುತ್ತಮ ಉದಾಹರಣೆ. ಡ್ಯಾನ್ಸರ್(Dancer) ಕೊರಿಯೋಗ್ರಾಫರ್ ಆಗಿದ್ದ ಜಾಫರ್ ಸಾದಿಕ್‌ಗೆ ಒಳ್ಳೆ ಆಫರ್‌ಗಳು ಹುಡುಕಿಕೊಂಡು ಬಂದವು. ಗ್ಯಾಂಗ್‌ಸ್ಟರ್‌ಗಳ ಗುಂಪಿನಲ್ಲಿ ಇರೋ ಒಬ್ಬ ಕುಳ್ಳ ಖಳನಾಯಕನ ಪಾತ್ರಗಳಿಗೆ ಈತನೆ ಬೇಕೆನ್ನುವಂತಾಗಿದೆ. ಕಮಲ್ ಹಾಸನ್ ವಿಕ್ರಮ್(Vikram) ಸಿನಿಮಾದಲ್ಲೂ ಜಾಫರ್ ನಟಿಸಿದ್ದರು. ವೆಬ್ ಸಿರೀಸ್ ಲೆಕ್ಕ ಬಂದ್ರೆ, ಸೈತಾನ್ ವೆಬ್ ಸರಣಿಯಲ್ಲೂ ಜಾಫರ್ ನಟಿಸಿದ್ದಾರೆ. ಈಗಾಗಲೇ ಶಾರೂಕ್ ಖಾನ್ ರಜಿನಿಕಾಂತ್‌, ಕಮಲ್‌ ಹಾಸನ್ ರಂತ ಸೂಫರ್‌ಸ್ಟಾರ್‌ಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ರಾಜಮೌಳಿಗಾಗಿ ಯಾವ ನಟರು ಹೇಗೆ ಬದಲಾಗಿದ್ದಾರೆ ಗೊತ್ತಾ? ಹೇಗಿರುತ್ತೆ ಸಿನಿಮಾ ತಯಾರಿ ?