Asianet Suvarna News Asianet Suvarna News

Weekly-Horoscope: ಈ ರಾಶಿಯವರಿಗೆ ವಾರ ಪೂರ್ತಿ ಸಾಲ-ಶತ್ರುಗಳ ಕಾಟವಿದ್ದು, ವೃತ್ತಿಯಲ್ಲಿ ಅಸಮಾಧಾನವಿರಲಿದೆ..

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..

ವೃಷಭ ರಾಶಿಯವರಿಗೆ ವಾರದ ಆದಿಯಲ್ಲಿ ಮಕ್ಕಳ ವಿಚಾರಲ್ಲಿ ಮನಸ್ತಾಪ ಬರಲಿದೆ. ಸ್ತ್ರೀಯರ ಆರೋಗ್ಯದಲ್ಲಿ ತೊಡಕು. ವೃತ್ತಿಯಲ್ಲಿ ಅನುಕೂಲವಿದೆ. ಇನ್ನೂ ವಾರ ಮಧ್ಯದಲ್ಲಿ ಪ್ರಯಾಣ-ಭೂಮಿ ವಿಚಾರದಲ್ಲಿ ತೊಡಕು, ವೃತ್ತಿಯಲ್ಲಿ ಹೆಚ್ಚಿನ ಅನುಕೂಲ. ಧರ್ಮ ಕಾರ್ಯಗಳಲ್ಲಿ ಭಾಗಿಯಾಗುತ್ತೀರಿ. ವಾರಾಂತ್ಯದಲ್ಲಿ ಹಣ-ಆರೋಗ್ಯ ವಿಚಾರದಲ್ಲಿ ಎಚ್ಚರವಹಿಸಿ. ವೃತ್ತಿಯಲ್ಲಿ ಅನುಕೂಲ, ಸಹೋದರರಲ್ಲಿ ಭಿನ್ನಾಭಿಪ್ರಾಯ ಬರಲಿದೆ. ಪರಿಹಾರಕ್ಕೆ ದುರ್ಗಾ ಕವಚ ಪಠಿಸಿ. ಮಕರ ರಾಶಿಯವರಿಗೆ ವಾರದ ಆದಿಯಲ್ಲಿ ಹೆಚ್ಚಿನ ವ್ಯಯ ಉಂಟಾಗಲಿದ್ದು, ತಂದೆ-ಮಕ್ಕಳಲ್ಲಿ ಮನಸ್ತಾಪ ಬರಲಿದೆ. ಸಂಗಾತಿಯಿಂದ ಸಹಕಾರ ದೊರೆಯಲಿದೆ.

ಇದನ್ನೂ ವೀಕ್ಷಿಸಿ:  Devil Movie: ದರ್ಶನ್ ಫ್ಯಾನ್ಸ್‌ಗೆ ಸಿಕ್ಕಾಯ್ತು ಬಿಗ್ ಸರ್ಪ್ರೈಸ್..!'ಡೆವಿಲ್' ಸಿನಿಮಾ ಎಂಟ್ರಿಗೆ ಫಿಕ್ಸ್ ಆಯ್ತು ಡೇಟ್!