Asianet Suvarna News Asianet Suvarna News

Weekly-Horoscope: ಈ ವಾರ ಮೀನ ರಾಶಿಗೆ ಬುಧ ಪ್ರವೇಶ ಮಾಡಲಿದ್ದು, ಇದರಿಂದ ಆಗುವ ಲಾಭ-ನಷ್ಟವೇನು ?

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..

ಈ ವಾರದ ವಿಶೇಷ ನೋಡುವುದಾದ್ರೆ, ಮಾರ್ಚ್ - 07 ಅಂದರೆ ಗುರುವಾರ ಮೀನ ರಾಶಿಗೆ ಬುಧ ಪ್ರವೇಶ ಮಾಡಲಿದ್ದಾನೆ. ಮಾರ್ಚ್ 07ರಂದು  ಕುಂಭ ರಾಶಿಗೆ ಶುಕ್ರ ಪ್ರವೇಶ ಮಾಡಲಿದ್ದಾನೆ. ಮಾರ್ಚ್ 08ರಂದು ಶುಕ್ರವಾರ ಮಹಾಶಿವರಾತ್ರಿ ಇದೆ. ವಾರದ ಆದಿಯಲ್ಲಿ ಸುಖ ನಷ್ಟವಾಗಲಿದೆ. ಬಂಧು-ಮಿತ್ರರಿಂದ ನಷ್ಟ. ಮನಸ್ತಾಪಗಳು. ವೃತ್ತಿಯಲ್ಲಿ ಅನುಕೂಲ. ಶುಭ-ದೇವತಾ ಕಾರ್ಯಗಳು ನಡೆಯಲಿವೆ. ವಾರ ಮಧ್ಯದಲ್ಲಿ ಹಣಕಾಸಿನ ತೊಂದರೆಯಾಗಲಿದ್ದು, ವೃತ್ತಿಯಲ್ಲಿ ಅನುಕೂಲ. ಶುಭ ಕಾರ್ಯಗಳಲ್ಲಿ ಭಾಗಿ. ಸಹೋದರರಿಂದ ವ್ಯಯ, ಆರೋಗ್ಯ ವ್ಯತ್ಯಾಸವಾಗಲಿದೆ. ವಾರಾಂತ್ಯದಲ್ಲಿ ಚರ್ಮ ವ್ಯಾಧಿ ಬಾಧೆ ಕಾಡಲಿದೆ. ವೃತ್ತಿಯಲ್ಲಿ ಅನುಕೂಲ. ಹೆಚ್ಚಿನ ವ್ಯಯ. ಆರೋಗ್ಯ ವ್ಯತ್ಯಾಸವಾಗಲಿದೆ. ಪರಿಹಾರಕ್ಕೆ ಹೆಸರುಕಾಳು ದಾನ ಮಾಡಿ.

ಇದನ್ನೂ ವೀಕ್ಷಿಸಿ:  ಮೋದಿ ಅರಬ್‌ ದೊರೆಯನ್ನು ಬ್ರದರ್‌ ಅಂದ್ರೆ ಓಕೆನಾ? ಹಿಂದೂ-ಮುಸ್ಲಿಂ ಭಾವೈಕ್ಯತೆ ಬಗ್ಗೆ ನಿಮಗೆ ಏನನಿಸುತ್ತೆ?

Video Top Stories