Asianet Suvarna News Asianet Suvarna News

Weekly-Horoscope: ಈ ರಾಶಿಯವರಿಗೆ ಸಾಲ-ಶತ್ರುಗಳ ಬಾಧೆ ಕಾಡಲಿದ್ದು, ಉತ್ತಮ ಕೆಲಸಗಳಿಗೆ ವಿಘ್ನಗಳು ಬರಲಿವೆ..

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..

ಮೇಷ ರಾಶಿಯವರಿಗೆ ವಾರದ ಆದಿಯಲ್ಲಿ ವೃತ್ತಿಯಲ್ಲಿ ವಿಶೇಷ ಅನುಕೂಲವಿದ್ದು, ವ್ಯಾಪಾರಿಗಳಿಗೆ ಕೊಂಚ ತೊಡಕಾಗಲಿದೆ. ಹಾಲು-ಹೈನುಗಾರರಿಗೆ ಅನುಕೂಲ, ಬಂಧು-ಮಿತ್ರರ ಸಹಕಾರ ಇರಲಿದೆ. ವಾರಾಂತ್ಯದಲ್ಲಿ ಕೃಷಿಕರಿಗೆ ಸ್ವಲ್ಪ ಅಸಮಾಧಾನವಿರಲಿದ್ದು, ನೀರಿನಿಂದ ತೊಂದರೆಗಳು, ಬಂಧು-ಮಿತ್ರರಿಂದ ಸಹಕಾರ, ಸಹೋದರರಲ್ಲಿ ಭಿನ್ನಾಭಿಪ್ರಾಯ ಬರಲಿದೆ. ಪರಿಹಾರಕ್ಕೆ ಕೃಷ್ಣ ಸ್ಮರಣೆ ಮಾಡಿ. ವೃಷಭ ರಾಶಿಯವರಿಗೆ ವಾರದ ಆದಿಯಲ್ಲಿ ವೃತ್ತಿಯಲ್ಲಿ ಅನುಕೂಲವಿದ್ದು, ಸಜ್ಜನರ ಸಹಕಾರ, ಸಾಲ-ಶತ್ರುಗಳ ಬಾಧೆ, ಬಂಧು-ಮಿತ್ರರಲ್ಲಿ ಮನಸ್ತಾಪ ಬರಲಿದೆ. ವಾರಾಂತ್ಯದಲ್ಲಿ ಗಂಟಲು-ಕಿವಿ ಬಾಧೆ ಬಾಧಿಸಲಿದೆ. ಹಿರಿಯರ ಸಲಹೆಯಿಂದ ತೊಂದರೆ, ಆಹಾರದಲ್ಲಿ ವ್ಯತ್ಯಾಸ, ಹಣಕಾಸಿನ ತೊಂದರೆ ಬರಲಿದೆ. ಪರಿಹಾರಕ್ಕೆ ದುರ್ಗಾ ಸನ್ನಿಧಾನದಲ್ಲಿ ಅಭಿಷೇಕ ಮಾಡಿಸಿ.

ಇದನ್ನೂ ವೀಕ್ಷಿಸಿ:  ಇನ್ಮೇಲಾದರೂ ಕೆಲಸಕ್ಕೆ ಬಾರದವರನ್ನ ಕಿತ್ತಾಕಿ: ಬಿಎಸ್‌ವೈ ವಿರುದ್ಧ ಮತ್ತೆ ಗುಡುಗಿದ ಸೋಮಣ್ಣ

Video Top Stories