Asianet Suvarna News Asianet Suvarna News

Weekly Horoscope: ಈ ರಾಶಿಯ ಸ್ತ್ರೀಯರ ಸಾಲ ನಿವಾರಣೆಯಾಗಲಿದ್ದು, ತಂದೆ-ಮಕ್ಕಳಲ್ಲಿ ಅಸಮಾಧಾನ ಬರಲಿದೆ

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..

ಕರ್ಕಟಕ ರಾಶಿಯವರಿಗೆ ವಾರದ ಆದಿಯಲ್ಲಿ ಆರೋಗ್ಯದಲ್ಲಿ ಅನುಕೂಲವಿದ್ದು, ವೃತ್ತಿಯಲ್ಲಿ ಹೆಚ್ಚಿನ ಅನುಕೂಲವಿದೆ. ಪ್ರಯಾಣ-ಮಿತ್ರರ ವಿಚಾರದಲ್ಲಿ ಎಚ್ಚರವಹಿಸಿ, ಸ್ತ್ರೀಯರಿಗೆ ಕುಟುಂಬ ಸಹಕಾರ. ವಾರಾಂತ್ಯದಲ್ಲಿ ಹಣಕಾಸಿನ ವಿಚಾರದಲ್ಲಿ ತೊಡಕು ಉಂಟಾಗಲಿದ್ದು, ವೃತ್ತಿಯಲ್ಲಿ ಬಡ್ತಿ, ವಿಶೇಷ ಮನ್ನಣೆ ಸಿಗಲಿದೆ. ಆರೋಗ್ಯ ವಿಚಾರದಲ್ಲಿ ಎಚ್ಚರವಹಿಸಿ. ಪರಿಹಾರಕ್ಕೆ ದುರ್ಗಾ ಸನ್ನಿಧಾನದಲ್ಲಿ ರುದ್ರಾಭಿಷೇಕ ಮಾಡಿಸಿ. ಸಿಂಹ ರಾಶಿಯವರಿಗೆ ವಾರದ ಆದಿಯಲ್ಲಿ ವೃತ್ತಿಯಲ್ಲಿ ಅಸಮಾಧಾನ, ಭೂ ವ್ಯವಹಾರಗಳಲ್ಲಿ ತೊಡಕು, ರಸ್ತೆಗಳಲ್ಲಿ ಘರ್ಷಣೆಗಳು, ಸೇವಕರು-ಸಹಾಯಕರಲ್ಲಿ ತಕರಾರು ಬರಲಿದೆ. ವಾರಾಂತ್ಯದಲ್ಲಿ ಸ್ತ್ರೀಯರಿಗೆ ಹೆಚ್ಚಿನ ವ್ಯಯವಾಗಲಿದ್ದು, ಅನವಶ್ಯಕ ಹಾನಿಗಳು, ವೃತ್ತಿ ಸ್ಥಳದಲ್ಲಿ, ಅಸಮಾಧಾನ, ಕುಟುಂಬದಲ್ಲಿ ಸ್ತ್ರೀಯರಿಗೆ ಕಿರಿಕಿರಿ ಉಂಟಾಗಲಿದೆ. ಪರಿಹಾರಕ್ಕೆ ದುರ್ಗಾ ಸನ್ನಿಧಿಯಲ್ಲಿ ಅಷ್ಟೋತ್ತರ ಸೇವೆ ಮಾಡಿಸಿ.

ಇದನ್ನೂ ವೀಕ್ಷಿಸಿ:  ಹಾಸನದಲ್ಲಿ ದಿನದಿನಕ್ಕೂ ಹೆಚ್ಚಾಗ್ತಿದೆ ಡೆಂಘೀ ಆರ್ಭಟ: 6 ಮಂದಿ ಸಾವು, 6 ಮಕ್ಕಳಿಗೆ ಐಸಿಯುನಲ್ಲಿ ಚಿಕಿತ್ಸೆ

Video Top Stories