ಪಿವಿಸಿ ಪೈಪ್ ನುಂಗಿದ ಹಾವು, ಮುಂದೇನಾಯ್ತು ನೋಡಿ...
ನಾಗರ ಹಾವೊಂದು ಪಿವಿಸಿ ಪೈಪ್ ನುಂಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಾವುಗಳು ಸಾಮಾನ್ಯವಾಗಿ ಪ್ಲಾಸ್ಟಿಕ್ ಬಾಟಲಿಗಳನ್ನು ನುಂಗಿ ಒದ್ದಾಡುವುದನ್ನು ನೋಡಿದ್ದೇವೆ. ಕೆಲವೊಮ್ಮೆ ತನ್ನ ದೇಹಕ್ಕಿಂತಲೂ ಅಧಿಕ ಗಾತ್ರದ ಪ್ರಾಣಿಗಳನ್ನು ಮತ್ತೂ ಕೆಲವೊಮ್ಮೆ ಮೊಟ್ಟೆಗಳನ್ನು ನುಂಗಿ ಅದು ಮಧ್ಯದಲ್ಲಿ ಸಿಲುಕಿ ಆ ಕಡೆಯೂ ಹೋಗದೇ ಈ ಕಡೆಯೂ ಬಾರದೇ ನರಳಾಡುತ್ತವೆ. ಕೆಲವೊಮ್ಮೆ ಅವೇ ಸ್ವತಃ ಬಾಯಿಯ ಮೂಲಕ ನುಂಗಿದ್ದನ್ನು ಮತ್ತೆ ಹೊರಗೆ ಉಗುಳುತ್ತವೆ. ಆದೇ ರೀತಿ ಇಲ್ಲೊಂದು ವಿಡಿಯೋದಲ್ಲಿ ನಾಗರ ಹಾವೊಂದು ಪಿವಿಸಿ ಪೈಪ್ ನುಂಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ