Udupi: ಮಾರಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನೋ ಎಂಟ್ರಿ..!

ಇಲ್ಲಿನ ಕಾಪು ಸುಗ್ಗಿ ಮಾರಿಜಾತ್ರೆಯಲ್ಲಿ ಮುಸ್ಲಿಮರ ಅಂಗಡಿಯಲ್ಲಿ ವ್ಯಾಪರ ವಹಿವಾಟು ನಡೆಸದಿರಲು ಹಿಂದುಗಳು ತೀರ್ಮಾನಿಸಿದ್ದಾರೆ. ಇದೀಗ ಧರ್ಮಗಳ ನಡುವೆ ವ್ಯಾಪಾರಿ ವಾರ್ ಶುರುವಾಯಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ಸರ್ವಜನಾಂಗದ  ಶಾಂತಿಯ ತೋಟ ಎನಿಸಿದ್ದ ಕರ್ನಾಟಕದಲ್ಲಿ ಇದೀಗ ವ್ಯಾಪಾರ ಮಾಡಲು ಧರ್ಮ ನೋಡಬೇಕಾದ ಸ್ಥಿತಿ ಬಂದಿರುವುದು ನಿಜಕ್ಕೂ ದುರಂತ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

First Published Mar 22, 2022, 1:04 PM IST | Last Updated Mar 22, 2022, 1:04 PM IST

ಉಡುಪಿ(ಮಾ.22): ಒಂದು ಕಡೆ ಹಿಜಾಬ್ ಗದ್ದಲ ತಣ್ಣಗಾಗುತ್ತಿರುವ ವೇಳೆಯಲ್ಲಿಯೇ ಇದೀಗ ಕರಾವಳಿ ಭಾಗದಲ್ಲಿ ಸಮಾಜದಲ್ಲಿ ಸಾಮರಸ್ಯ ಕಡುವಂತಹ ಬೆಳವಣಿಗೆಯೊಂದು ಮುನ್ನೆಲೆಗೆ ಬಂದಿದೆ. ಈ ಹಿಂದೆ ಹಿಂದೂಗಳಿಂದ ಮೀನು ಖರೀದಿಯನ್ನು ಮುಸ್ಲಿಮರು ಬಹಿಷ್ಕರಿಸಿದ್ದರು. ಆದರೆ ಇದೀಗ ಹಿಂದುಗಳು, ಮುಸ್ಲಿಮರ ಜತೆ ವ್ಯಾಪಾರ ಮಾಡಲು ನಿರಾಕರಿಸಲಾರಂಭಿಸಿದ್ದಾರೆ.

ಇಲ್ಲಿನ ಕಾಪು ಸುಗ್ಗಿ ಮಾರಿಜಾತ್ರೆಯಲ್ಲಿ ಮುಸ್ಲಿಮರ ಅಂಗಡಿಯಲ್ಲಿ ವ್ಯಾಪರ ವಹಿವಾಟು ನಡೆಸದಿರಲು ಹಿಂದುಗಳು ತೀರ್ಮಾನಿಸಿದ್ದಾರೆ. ಇದೀಗ ಧರ್ಮಗಳ ನಡುವೆ ವ್ಯಾಪಾರಿ ವಾರ್ ಶುರುವಾಯಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ಸರ್ವಜನಾಂಗದ  ಶಾಂತಿಯ ತೋಟ ಎನಿಸಿದ್ದ ಕರ್ನಾಟಕದಲ್ಲಿ ಇದೀಗ ವ್ಯಾಪಾರ ಮಾಡಲು ಧರ್ಮ ನೋಡಬೇಕಾದ ಸ್ಥಿತಿ ಬಂದಿರುವುದು ನಿಜಕ್ಕೂ ದುರಂತ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Hijab Verdict: ಜಡ್ಜ್‌ಗಳಿಗೆ ಜೀವ ಬೆದರಿಕೆ ಹಾಕಿದ್ದ ರೆಹಮತ್‌ ಉಲ್ಲಾ ಖಾಕಿ ವಶಕ್ಕೆ