Hijab Verdict: ಜಡ್ಜ್‌ಗಳಿಗೆ ಜೀವ ಬೆದರಿಕೆ ಹಾಕಿದ್ದ ರೆಹಮತ್‌ ಉಲ್ಲಾ ಖಾಕಿ ವಶಕ್ಕೆ

*ಹಿಜಾಬ್‌ ಕೇಸ್‌ ಜಡ್ಜ್‌ಗಳಿಗೆ ಬಹಿರಂಗ ಜೀವ ಬೆದರಿಕೆ
*ತಮಿಳುನಾಡಿನ ತೂಹೀರ್‌ ಜಮಾತ್‌ ಮುಸ್ಲಿಂ ಸಂಘಟನೆ
*ಪೊಲೀಸರ್‌ ವಶದಲ್ಲಿರುವ ಆರೋಪಿ ರೆಹಮತ್‌ ಉಲ್ಲಾ 

First Published Mar 22, 2022, 11:40 AM IST | Last Updated Mar 22, 2022, 11:40 AM IST

ಬೆಂಗಳೂರು (ಮಾ. 22): ರಾಜ್ಯದ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಿಜಾಬ್‌ (Hijab Verdict) ಧರಿಸುವ ಕುರಿತಂತೆ ಹೈಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ಪೀಠ ಐತಿಹಾಸಿಕ ತೀರ್ಪು ನೀಡಿದೆ. ವಿದ್ಯಾರ್ಥಿಗಳು ಹಿಜಾಬ್‌ ಧರಿಸಿ ತರಗತಿ ಪ್ರವೇಶ ಮಾಡಬಾರದು ಪೀಠದ ಮೂವರು ನ್ಯಾಯಮೂರ್ತಿಗಳು ಆದೇಶದಲ್ಲಿ ತಿಳಿಸಿದ್ದಾರೆ. ಈ ತೀರ್ಪು ಹೊರಬಿದ್ದ ಎರಡೇ ದಿನಕ್ಕೆ ತಮಿಳುನಾಡಿನ ಮಧುರೈನಲ್ಲಿ ತೂಹೀರ್‌ ಜಮಾತ್‌ ಸಂಘಟನೆ ಮುಖಂಡರು ಸಾರ್ವಜನಿಕ ಸಭೆಯಲ್ಲಿ ಹಿಜಾಬ್‌ ಸಂಬಂಧ ತೀರ್ಪು ನೀಡಿದ ನ್ಯಾಯಾಧೀಶರಿಗೆ ಬಹಿರಂಗ ಜೀವ ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: Karnataka Hijab Verdict ಈ ಪ್ರಕರಣದಲ್ಲಿ "ಕಾಣದ ಕೈಗಳು" ಕೆಲಸ ಮಾಡಿದ್ದು ಸತ್ಯ ಎಂದ ಹೈಕೋರ್ಟ್!

ಶಾಲಾ-ಕಾಲೇಜಿನಲ್ಲಿ ಹಿಜಾಬ್‌ ಸಂಬಂಧ ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳಿಗೆ ಬಹಿರಂಗ ಜೀವ ಬೆದರಿಕೆ ಹಾಕಿದ್ದ ರೆಹಮತ್‌ ಉಲ್ಲಾ ಈಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೈಕೋರ್ಟ್‌  ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ‌ ಅವರಿಗೆ ರೆಹಮತ್‌ ಉಲ್ಲಾ ಜೀವ ಬೆದರಿಕೆ ಹಾಕಿದ್ದ. ಈಗಾಗಲೇ ರೆಹಮತ್‌ ಉಲ್ಲಾ ತಮಿಳುನಾಡು ಪೊಲೀಸರ ವಶದಲ್ಲಿದ್ದು ಆರೋಪಿಯನ್ನು ವಶಕ್ಕೆ ಪಡೆಯಲು ಬೆಂಗಳೂರು ಪೋಲಿಸರು ಮುಂದಾಗಿದ್ದಾರೆ.