ನಟಿ ಶೋಭಿತಾ ಶಿವಣ್ಣ ಸಾವಿಗೆ ಕಾರಣವೇನು? ಬಹ್ಮಗಂಟು ಸಹ ನಟಿ ಪ್ರತಿಕ್ರಿಯೆ!
ಕನ್ನಡ ಖ್ಯಾತ ಕಿರುತೆರೆ ನಟಿ ಶೋಭಿತಾ ಶಿವಣ್ಣ ಸಾವು ಚಿತ್ರಲೋಕವನ್ನೇ ಅಘಾತಗೊಳಿಸಿದೆ. ಲವಲವಿಕೆಯಿಂದ ಇದ್ದ ಶೋಭಿತಾ ಶಿವಣ್ಣ ಸಾವಿನ ಹಿಂದಿನ ಕಾರಣವೇನು? ಬ್ರಹ್ಮಗಂಟು ಸಹ ನಟಿ ಗೀತಾ ಪ್ರತಿಕ್ರಿಯೆ.
ಬೆಂಗಳೂರು(ಡಿ.01) ಕನ್ನಡ ನಟಿ ಶೋಭಿತಾ ಶಿವಣ್ಣ ಸಾವಿನ ಸುದ್ದಿ ಹಲವರಿಗೆ ಆಘಾತ ತಂದಿದೆ. ಘಟನೆ ಕುರಿತು ಶೋಭಿತಾ ಜೊತೆ ಬ್ರಹ್ಮಗಂಟು ಧಾರವಾಹಿಯಲ್ಲಿ ನಟಿಸಿದ ಸಹ ನಟಿ ಗೀತಾ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇತರ ನಟ ನಟಿಯರು ಬದುಕು ಅಂತ್ಯಗೊಳಿಸಿದಾಗ ಪ್ರತಿ ಬಾರಿ ಈ ವಿಚಾರ ಚರ್ಚೆ ಮಾಡುತ್ತಿದ್ದ ಶೋಭಿತಾ, ಈ ರೀತಿಯ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಹೇಳುತ್ತಿದ್ದರು.ಆದರೆ ಇದೀಗ ಶೋಭಿತಾ ಈ ರೀತಿ ಅಂತ್ಯ ಕಾಣಸಲು ಸಾಧ್ಯವೇ ಇಲ್ಲ ಎಂದು ಸಹ ನಟಿ ಗೀತಾ ಹೇಳಿದ್ದಾರೆ.