
ಬಿಗ್ ಬಾಸ್ ರಹಸ್ಯ ಬಯಲು: ತೆರೆಮರೆಯ ಅಸಲಿ ಬಾಸ್ ಯಾರೆಂದು ರಿವೀಲ್ ಮಾಡಿದ ಮಾಲಿನ್ಯ ನಿಯಂತ್ರಣ ಮಂಡಳಿ!
ಕನ್ನಡ ಬಿಗ್ ಬಾಸ್‌ನ ನಿಜವಾದ ಬಾಸ್ ಯಾರು ಎಂಬ ರಹಸ್ಯ ಈಗ ಬಯಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯು ಶೋಗೆ ಬೀಗ ಹಾಕಿದಾಗ, ಕಿಚ್ಚ ಸುದೀಪ್ ಅವರೇ ಮಧ್ಯಪ್ರವೇಶಿಸಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿದರು.
ಬಿಗ್ಬಾಸ್, ಈ ಕಂಠದ ಹಿಂದೆ ಬಿದ್ದವರು ಅದೆಷ್ಟೋ ಜನ.. ಈ ಬಿಗ್ ಬಾಸ್ ಯಾರು..? ಬರಿ ವಾಯ್ಸ್ ಬಿಟ್ರೆ ಅವರ ಮುಖವನ್ನ ಇದುವರೆಗೂ ನೋಡೇ ಇಲ್ಲವಲ್ಲ ಅಂತ ಬಿಗ್ಬಾಸ್ನ ಹುಡುಕಿದವರು ಲಕ್ಷಾಂತರ ಜನ. ಆದ್ರೆ ಈಗ ಒಂಟಿ ಮನೆಯ ರಿಯಲ್ ಬಿಗ್ಬಾಸ್ ಯಾರು ಅನ್ನೋ ಸೀಕ್ರೆಟ್ ರಿವಿಲ್ ಆಗಿದೆ. ಆ ಸತ್ಯವನ್ನ ಬಿಟ್ಟಿಟ್ಟಿರೋದು ಮಾಲಿನ್ಯ ನಿಯಂತ್ರಣ ಮಂಡಳಿ. ಮಾಲಿನ್ಯ ನಿಯಂತ್ರಣ ಮಂಡಳಿ ಬಿಗ್ಬಾಸ್ ಶೋ ನಡೆಯುತ್ತಿರೋ ಇನವೇಟೀವ್ ಫಿಲ್ಮ್ ಸಿಟಿಗೆ ಬೀಗ ಜಡಿದಿದ್ದೇ ತಡ.. ಅಲ್ಲಿದ್ದ ಬಿಗ್ಬಾಸ್ ಯಾರು ಅನ್ನೋದು ಬಟಾ ಬಯಲಾಗಿದೆ. ಅಷ್ಟಕ್ಕು ಕನ್ನಡದ ಆ ಬಿಗ್ ಬಾಸ್ ಯಾರು ಗೊತ್ತಾ..? ಕಂಠ ಬೇರೆ ಆದ್ರು ಆ ಬಿಗ್ಬಾಸ್ ಶಕ್ತಿ ಕಿಚ್ಚ ಸುದೀಪ್.
ಬಿಗ್ಬಾಸ್ ವಿಷಯಕ್ಕೆ ಬಂದ್ರೆ ರಿಯಲ್ ಬಿಗ್ಬಾಸ್ ಅಂದ್ರೆ ಅದು ಕಿಚ್ಚ ಸುದೀಪ್.. ಮಾಲಿನ್ಯ ನಿಯಂತ್ರಣ ಮಂಡಳಿ ಬೀಗ ಹಾಗುತ್ತಿದ್ದಂತೆ ಎಚ್ಚೆತ್ತ ಕಿಚ್ಚ ಸುದೀಪ್ ರಾತ್ರೋ ರಾತ್ರಿ ಉಪ ಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಜೊತೆ ಮಾತನಾಡಿ ಬಿಗ್ಬಾಸ್ ಮನೆ ರೀ ಓಪನ್ ಆಗೋ ಹಾಗೆ ನೋಡಿಕೊಂಡ್ರು. ಕಾರ್ಯಕ್ರಮ ಆಯೋಜಕರು ಮಾಡಲು ಆಗದ ಕೆಲಸವನ್ನ ಬಾದ್ಷಾ ಮಾಡಿ ಮುಗಿಸಿದ್ರು..
ಅಷ್ಟೆ ಅಲ್ಲ ಬಿಗ್ಬಾಸ್ ಸೀಸನ್ 12 ವರೆಗೆ ದೊಡ್ಡ ಶೋ ಆಗಿ ಮೂಡಲು ಕಾರಣ ಸುದೀಪ್..ಅವರ ಬ್ರ್ಯಾಂಡ್ ವ್ಯಾಲ್ಯೂ, ವ್ಯಕ್ತಿತ್ವ, ಖಡಕ್ ಮಾತು, ಪ್ರತಿಯೊಂದು ವಿಷಯದಲ್ಲಿ ಸ್ಟ್ಯಾಂಡ್ಗ್ ತೆಗೆದುಕೊಳ್ಳೋ ಕಲೆ. ಎಲ್ಲವೂ ಸುದೀಪ್ ಬಿಟ್ರೆ ಈ ಬಿಗ್ ಶೋ ನಡೆಸಿಕೊಡೋಕೆ ಬೇರೆ ಆಪ್ಷನ್ನೇ ಇಲ್ಲದಂತೆ ಮಾಡಿದೆ. ಹೀಗಾಗೆ ಬಿಗ್ಬಾಸ್ಗೆ ಸುದೀಪ್ ಅನಿವಾರ್ಯ..
ಇದಕ್ಕೆ ನಿದರ್ಶನ ಅಂದ್ರೆ ಕಿಚ್ಚ ಸುದೀಪ್ ಬಿಗ್ಬಾಸ್ನಿಂದ ಹೊರ ಬಂದಾಗ. ಕಾರ್ಯಕ್ರಮ ಆಯೋಜಕರು ಕಿಚ್ಚನಿಗಾಗೆ ದುಂಬಾಲು ಬಿದ್ದಿದ್ರು, ನೀವಿಲ್ಲ ಅಂದ್ರೆ ಬಿಗ್ಬಾಸ್ ಕನ್ನಡ ಇಲ್ಲ ಎಂದು ಸುದೀಪ್ರ ಎಲ್ಲಾ ಬೇಡಿಕೆ ಈಡೇರಿಸಿ ಮನ ವೊಲಿಸಿ ಮತ್ತೆ ಕರೆ ತಂದಿದ್ದಾರೆ. ಈಗ ಬಿಗ್ಬಾಸ್ಗೆ ಸಂಕಷ್ಟ ಎದುರಾದಾಗ ರಾತ್ರೋ ರಾತ್ರಿ ಡಿಕೆಶಿ ಜೊತೆ ಮಾತಾಡಿ ಸಮಸ್ಯೆ ಬಗೆ ಹರಿಸಿ ಮತ್ತೆ ಬಿಗ್ ಬಾಸ್ ಶುರುವಾಗೋ ಹಾಗೆ ಮಾಡಿದ್ದು ಸುದೀಪ್. ಹೀಗಾಗಿ ಇಷ್ಟು ದಿನ ಕನ್ನಡ ಕಿರುತೆರೆಯಲ್ಲಿ ಬರೋ ಬಿಗ್ಬಾಸ್ ಯಾರು ಅಂತ ಹುಡುಕುತ್ತಿದ್ದವರಿಗೆ ಆ ರಿಯಲ್ ಬಿಗ್ಬಾಸ್ ಕಿಚ್ಚನೇ ಅನ್ನೋದು ಗೊತ್ತಾಗಿದೆ.