
ತೃಪ್ತಿ ದಿಮ್ರಿ ಜೊತೆಗೆ ಡಾರ್ಲಿಂಗ್ ಪ್ರಭಾಸ್ ರಗಡ್ ಪೋಸ್, ಕಿಕ್ಕೇರಿಸಿದ ‘ಸ್ಪಿರಿಟ್’ ಮಾದಕ ಪೋಸ್ಟರ್!
ಹೊಸ ವರ್ಷಕ್ಕೆ ನಟ ಪ್ರಭಾಸ್ 'ದಿ ರಾಜಾಸಾಬ್' ಮತ್ತು 'ಸ್ಪಿರಿಟ್' ಎಂಬ ಎರಡು ಹೊಸ ಚಿತ್ರಗಳೊಂದಿಗೆ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. 'ದಿ ರಾಜಾಸಾಬ್' ಹಾರರ್ ಕಾಮಿಡಿ ಚಿತ್ರವಾಗಿದ್ದರೆ, ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಸ್ಪಿರಿಟ್' ಚಿತ್ರದ ರಾ ಪೋಸ್ಟರ್ನಿಂದ ಸಖತ್ ನಿರೀಕ್ಷೆ ಮೂಡಿಸಿದೆ.
ಹೊಸ ವರ್ಷಕ್ಕೆ ಡಾರ್ಲಿಂಗ್ ಪ್ರಭಾಸ್ ಹೊಸ ಅವತಾರದಲ್ಲಿ ಬರ್ತಾ ಇದ್ದಾರೆ. ಮೊದಲನೇಯದ್ದಾಗಿ ಜನವರಿ 9ಕ್ಕೆ ಪ್ರಭಾಸ್ ನಟನೆಯ ದಿ ರಾಜಾಸಾಬ್ ಸಿನಿಮಾ ತೆರೆಗೆ ಬರ್ತಾ ಇದೆ. ಇದೊಂದು ಹಾರರ್ ಫ್ಯಾಂಟಸಿ ಌಕ್ಷನ್ ಕಾಮಿಡಿ ಚಿತ್ರವಾಗಿದ್ದು, ಪ್ರಭಾಸ್ ಹೊಸ ರೂಪದಲ್ಲಿ ನೋಡೋದಕ್ಕೆ ಸಿಕ್ತಾ ಇದ್ದಾರೆ.ಇತ್ತೀಚಿಗೆ ಸಾಲು ಸಾಲು ಆಕ್ಷನ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಪ್ರಭಾಸ್ ರಾಜಾ ಸಾಬ್ ಆಗಿ ಹೊಸ ಅವತಾರದಲ್ಲಿ ಬರ್ತಿದ್ದಾರೆ. ದಿ ರಾಜಾ ಸಾಬ್ ಟ್ರೈಲರ್ ನೋಡಿದ ಫ್ಯಾನ್ಸ್ ಸಿನಿಮಾ ನೋಡ್ಲಿಕ್ಕೆ ಎಕ್ಸೈಟ್ ಆಗಿದ್ದಾರೆ.
ಇನ್ನೂ ದಿ ರಾಜಾ ಸಾಬ್ ಗಿಂತ ಪ್ರಭಾಸ್ ಫ್ಯಾನ್ಸ್ಗೆ ಮತ್ತಷ್ಟು ಕಿಕ್ ಕೊಟ್ಟಿರೋದು , ವರ್ಷಾರಂಭಕ್ಕೆ ಬಂದಿರೋ ಸ್ಪಿರಿಟ್ ಪೋಸ್ಟರ್. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸ್ಪಿರಿಟ್ ಪೋಸ್ಟರ್ ಸಖತ್ ರಾ ಆಗಿದ್ದು ಡಾರ್ಲಿಂಗ್ ಫ್ಯಾನ್ಸ್ ಸ್ಟನ್ ಆಗಿದ್ದಾರೆ.ತೆರೆದೆದೆಯಲ್ಲಿರೋ ಪ್ರಭಾಸ್ ಮೈಯೆಲ್ಲಾ ಗಾಯವಾಗಿವೆ,. ಅಲ್ಲಲ್ಲಿ ಬ್ಯಾಂಡೇಜ್ ಸುತ್ತಲಾಗಿದೆ. ಕೈಯಲ್ಲಿ ಮದಿರೆಯ ಗ್ಲಾಸ್ ಇದ್ರೆ , ಬಾಯಲ್ಲಿರೋ ಸಿಗರೇಟ್ಗೆ ಸುಂದರಿ ತೃಪ್ತಿ ಕಿಡಿ ಅಂಟಿಸ್ತಾ ಇದ್ದಾರೆ.
ಸಂದೀಪ್ ರೆಡ್ಡಿ ವಂಗಾ ಈ ಹಿಂದೆ ಮಾಡಿದ ಚಿತ್ರಗಳೆಲ್ಲಾ ಚಿತ್ರವಿಚಿತ್ರ. ಹಿಂಸೆ, ರಕ್ತಪಾತ, ಮದಿರೆ, ಮಾನಿನಿ.. ಇವುಗಳಿಲ್ಲದೇ ವಂಗಾ ಸಿನಿಮಾ ಇರೋದೇ ಇಲ್ಲ. ಅದ್ರಲ್ಲೂ ವಂಗಾ ಮಾಡಿದ ಹಿಂದಿನ ಸಿನಿಮಾ ಅನಿಮಲ್ನಲ್ಲಂತೂ ಇವೆಲ್ಲವೂ ತುಸು ಹೆಚ್ಚೇ ಇದ್ದವು.ಅನಿಮಲ್ನಲ್ಲಿ ಸಖತ್ ಬೋಲ್ಡ್ ರೋಲ್ ಮಾಡಿದ್ದ ತೃಪ್ತಿ ದಿಮ್ರಿ, ಸ್ಪಿರಿಟ್ನಲ್ಲಿ ಪ್ರಭಾಸ್ಗೆ ಜೋಡಿಯಾಗಿದ್ದಾರೆ. ಫಸ್ಟ್ ಪೋಸ್ಟರ್ನಿಂದಲೇ ಪ್ರಭಾಸ್ ಫ್ಯಾನ್ಸ್ಗೆ ಕಿಕ್ಕೇರಿಸಿದ್ದಾರೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ,