
ಕನ್ನಡ ಸೀರಿಯಲ್ ನಟನ ಕಿತ್ತೋದ ಮದುವೆ: ಎರಡೇ ತಿಂಗಳ ಸಂಸಾರದಲ್ಲಿ ಗಲಾಟೆ
ನರ್ಸ್ ಹಾಗೂ ಸೀರಿಯಲ್ ಆರ್ಟಿಸ್ಟ್ ಮಧ್ಯೆ ಕಿತ್ತೋದ ಮದುವೆ. ಎರಡೇ ತಿಂಗಳಲ್ಲಿ ಬಂದ ಬಿರುಕು. ಪರಸ್ಪರ ಆರೋಪ-ಪ್ರತ್ಯಾರೋಪಗಳಿಂದ ಸಂಸಾರದಲ್ಲಿ ಕೋಲಾಹಲ.
ಅವಳು ಅನಾಥೆ. ನರ್ಸಿಂಗ್ ಕೆಲಸ ಮಾಡ್ತಿದ್ದಾಳೆ. ಇನ್ನೂ ಅವನು ಸೀರಿಯಲ್ ಆರ್ಟಿಸ್ಟ್. ಸಣ್ಣ ಪುಟ್ಟ ರೋಲ್ಗಳನ್ನ ಮಾಡಿಕೊಂಡಿದ್ದಾನೆ. ಅವರಿಬ್ಬರೂ ಪ್ರೀತಿಸಿ ಕಳೆದವರ್ಷವಷ್ಟೇ ಮದುವೆಯಾಗಿದ್ರು... ಆದರೆ ಎರಡೇ ತಿಂಗಳು ಅವರು ಸಂಸಾರ ಮಾಡಿದ್ದು. ಇವತ್ತು ಹೆಂಡತಿ ಮೇಲೆ ಗಂಡ. ಗಂಡನ ವಿರುದ್ಧ ಹೆಂಡತಿ ಆರೋಪ ಮಾಡಿಕೊಳ್ಳುತ್ತಿದ್ದಾರೆ. ಗಂಡ ಹೆಂಡತಿಯ ಫೋಟೋಗಳನ್ನ ತೋರಿಸಿದ್ರೆ ಹೆಂಡತಿ ಗಂಡನ ವಿಡಿಯೋಗಳನ್ನ ತೋರಿಸುತ್ತಿದ್ದಾಳೆ. ಹಾಗಾದ್ರೆ ಆ ದಂಪತಿ ಮಧ್ಯೆ ನಡೆದಿದ್ದೇನು? ಇಬ್ಬರಲ್ಲಿ ಯಾರು ಸತ್ಯ..? ಇವರಿಬ್ಬರ ನಡುವೆ ಬಂದ ಮತ್ತಿಬ್ಬರು ಯಾರು? ಒಂದು ಕಿತ್ತೋದ್ ಮ್ಯಾರೇಜ್ ಸ್ಟೋರಿಯ ಕಂಪ್ಲೀಟ್ ಕಥೆಯೇ ಇವತ್ತಿನ ಎಫ್.ಐ.ಆರ್. ಸದ್ಯ ಇಬ್ಬರ ಮಾತುಗಳನ್ನ ಕೇಳ್ತಿದ್ರೆ ಇವರಿಬ್ಬರ ಸಂಸಾರ ಸರಿ ಹೋಗೋದು ಡೌಟೇ.. ವಯಸಲ್ಲದ ವಯಸಲ್ಲಿ ಪ್ರೀತಿ ಮಾಡಿ ನಂತರ ಹೆತ್ತವರಿಗೂ ಗೊತ್ತಾಗದೇ ಮದುವೆಯಾದ್ರೆ ಏನಾಗುತ್ತೆ ಅನ್ನೋದಕ್ಕೆ ಈ ಸಂಸಾರದ ಗಲಾಟೆಯೇ ಸಾಕ್ಷಿ.