ಬಿಗ್ ಬಾಸ್ ಕನ್ನಡ 11, ಹನುಮಂತನ ಆಟಕ್ಕೆ ಬೆಚ್ಚಿದ ಮನೆ, ರಿಯಲ್ ಹನುಮನಂತೆ ಎದುರಾಳಿಗಳಿಗೆ ಟಾರ್ಗೆಟ್

ಬಿಗ್ ಬಾಸ್ ಕನ್ನಡ 11ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಸಿಂಗರ್ ಹನುಮಂತ ಲಮಾಣಿ, ಹೊಸ ಟಾಸ್ಕ್‌ನಲ್ಲಿ ತಮ್ಮ ಆಟದ ಶೈಲಿಯಿಂದ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ರಿಯಲ್ ಹನುಮನಂತೆ ಜಿಗಿದು ಎದುರಾಳಿಗಳನ್ನು ಟಾರ್ಗೆಟ್ ಮಾಡುವ ಮೂಲಕ ಹನುಮಂತ ತಮ್ಮ ಗೇಮ್ ಪ್ಲಾನ್ ಅನ್ನು ಬದಲಾಯಿಸಿದ್ದಾರೆ.

First Published Nov 7, 2024, 7:48 PM IST | Last Updated Nov 7, 2024, 7:48 PM IST

ವೈಲ್ಡ್ ಕಾರ್ಡ್​ ಮೂಲಕ ಬಿಗ್ ಬಾಸ್ ಕನ್ನಡ 11ಕ್ಕೆ ಎಂಟ್ರಿ ಕೊಟ್ಟ ಸಿಂಗರ್ ಹನುಮಂತ ಲಮಾಣಿ ಆಟವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಹೊಸ ಟಾಸ್ಕ್​ನಲ್ಲಿ  ಹನುಮಂತ ಆಡಿದ ರೀತಿಗೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಟಾಸ್ಕ್ ಆಡುವಾಗ ಹನುಮಂತ ಎದುರಾಳಿಯನ್ನು ಸೋಲಿಸುವ ಸ್ಪಷ್ಟ ಗುರಿಯನ್ನು ಇಟ್ಟುಕೊಂಡಿದ್ದು, . ‘ನಿಜವಾದ ಗೇಮ್​ ಹನುಮಂತನದ್ದು’ ಎಂದು ತ್ರಿವಿಕ್ರಮ್ ಹೇಳಿರುವುದು ಮತ್ತು  ‘ನೀ ಭಾರಿ ಅದಿ’ ಎಂದು ಧನರಾಜ್ ಹೇಳಿ ಬೆನ್ನು ತಟ್ಟಿರುವುದು ಪ್ರೋಮೋದಲ್ಲಿ ಕಾಣಿಸಿದೆ.

ನಟಿ ಜೊತೆ ಸಪ್ತಪದಿ ತುಳಿಯಲು ರೆಡಿಯಾದ ನಿಹಾರಿಕಾ ಕೊನಿಡೆಲಾ ಮಾಜಿ ಪತಿ ಚೈತನ್ಯ!

ಭವ್ಯ ಗೌಡ ಅಂತು ಹನುಮಂತನ ವಿರುದ್ಧ ರೇಗಾಡಿದ್ದಾರೆ. ಕೈನಲ್ಲಿ ಹಿಡಿದಿರುವ ಡಬ್ಬದಿಂದ ನೀರನ್ನು ಖಾಲಿ ಮಾಡುವುದು ಆಟವಾಗಿತ್ತು. ಹನುಮಂತ ರಿಯಲ್‌ ಹನುಮನಂತೆ ಜಿಗಿದು ಎದುರಾಳಿಗಳನ್ನು ಟಾರ್ಗೆಟ್‌ ಮಾಡಿದ್ದಾರೆ. ಹೀಗಾಗಿ ಹನುಮಂತನ ಆಟಕ್ಕೆ ಎಲ್ಲರೂ ಬೆರಗಾಗಿದ್ದಾರೆ. ಕಳೆದವಾರದ ವೀಕೆಂಡ್ ಎಪಿಸೋಡ್‌ ನಲ್ಲಿ ಕಿಚ್ಚ ಸುದೀಪ್ ಕೂಡ ಬಿಗ್‌ಬಾಸ್ ಆಟವನ್ನು ನಿಜವಾಗಿ ಅರ್ಥಮಾಡಿಕೊಂಡಿರುವುದು ಹನುಮಂತ ಎಂದಿದ್ದರು. ಅದರಂತೆ  ಹನುಮಂತನ ಆಟದ ವೈಖರಿ ಕೂಡ ದಿನ ಕಳೆದಂತೆ ಬದಲಾಗುತ್ತಿದೆ. ಇನ್ನು ಈ ಮುಂದಿನ ವಾರದ ಕ್ಯಾಪ್ಟನ್‌ ಯಾರಾಗಲಿದ್ದಾರೆ ಎಂಬುದು ಇಂದು ನಿರ್ಧಾರವಾಗಲಿದೆ.

Video Top Stories