
ಹನುಮಂತನ ಮೇಲಿದೆಯಂತೆ ಆಂಜನೇಯನ ಆಶೀರ್ವಾದ: 50 ಲಕ್ಷ ಗೆದ್ದರೂ ಲುಂಗಿ ಬಿಡಲ್ಲ, ಕುರಿ ಕಾಯೋದು ನಿಲ್ಸಲ್ಲ!
ಅಂದು ಸರಿಗಮಪ ವೇದಿಕೆ ಮೇಲೆ ನಿಂತು ‘ಹಾವೇರಿ ಜಿಲ್ಲೆ, ಸವಣೂರು ತಾಲ್ಲೂಕು ಚಿಲ್ಲೂರ ಬಡ್ನಿ ತಾಂಡಾ ನಮ್ಮೂರಿ’ ಎಂದು ಹೇಳುವ ಮೂಲಕ ಕನ್ನಡಿಗರಿಗೆ ತನ್ನ ಪರಿಚಯ ಮಾಡಿಕೊಂಡ ಹನುಮಂತ ಇಂದು ಬಹು ಎತ್ತರಕ್ಕೆ ಬೆಳೆದು ನಿಂತಿದ್ದಾನೆ. ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಗೆದ್ದು ಕನ್ನಡಿಗರ ಮನೆ-ಮನದಲ್ಲಿ ಮತ್ತಷ್ಟು ಹತ್ತಿರವಾಗಿದ್ದಾರೆ.
ಬೆಂಗಳೂರು(ಜ.29): ಚಿಲ್ಲೂರ ಬಡ್ನಿ to ಬಿಗ್ ಬಾಸ್ ಚಾಂಪಿಯನ್..! ಪ್ಯಾಟೆ ಮಂದಿಯನ್ನ ಮಣಿಸಿದ್ದು ಹೇಗೆ ಹಳ್ಳಿ ಹಕ್ಕಿ..? ಮದವೇರಲಿಲ್ಲ.. ಮುಗ್ಧತೆ ಅಳಿಸಲಿಲ್ಲ.. ಬದಲಾಗದ ಬದುಕಿನ ಕತೆ..! ಇದು ಕರುನಾಡು ಗೆದ್ದ ಕುರಿಗಾಹಿಯ ಜೀವನಗಾಥೆ..! ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ಚಿಲ್ಲೂರ ಬಡ್ನಿ ಚಿನ್ನಾರಿ ಮುತ್ತ.
ಅಂದು ಸರಿಗಮಪ ವೇದಿಕೆ ಮೇಲೆ ನಿಂತು ‘ಹಾವೇರಿ ಜಿಲ್ಲೆ, ಸವಣೂರು ತಾಲ್ಲೂಕು ಚಿಲ್ಲೂರ ಬಡ್ನಿ ತಾಂಡಾ ನಮ್ಮೂರಿ’ ಎಂದು ಹೇಳುವ ಮೂಲಕ ಕನ್ನಡಿಗರಿಗೆ ತನ್ನ ಪರಿಚಯ ಮಾಡಿಕೊಂಡ ಹನುಮಂತ ಇಂದು ಬಹು ಎತ್ತರಕ್ಕೆ ಬೆಳೆದು ನಿಂತಿದ್ದಾನೆ. ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಗೆದ್ದು ಕನ್ನಡಿಗರ ಮನೆ-ಮನದಲ್ಲಿ ಮತ್ತಷ್ಟು ಹತ್ತಿರವಾಗಿದ್ದಾರೆ. ಹನುಮಂತ ಹಾವೇರಿ ಜಿಲ್ಲೆಯ ಸಣ್ಣ ಹಳ್ಳಿಯಿಂದ ಬಂದು ಇಂದು ಬಿಗ್ ಬಾಸ್ ಗೆದ್ದು ನಿಂತಿದ್ದಾನೆ. ಅವನ ಈ ಸಾಧನೆ ಜರ್ನಿ ಕುರಿತು ಒಂದಿಷ್ಟು ಇಲ್ಲಿ ನೋಡೋಣ ಬನ್ನಿ.
ಟ್ರೋಫಿ ಗೆದ್ದಾಯ್ತು ಮದುವೆಗೆ ರೆಡಿ, ಯಾರದು ಹುಡ್ಗಿ? ವಿನ್ನರ್ ಹನುಮನಿಗೆ ಸಿನಿಮಾ ಆಫರ್!
ಬಿಗ್ ಬಾಸ್ ಗೆದ್ದಿರುವ ಚಿಲ್ಲೂರು ಬಡ್ತಿಯ ಚಿನ್ನಾರಿ ಮುತ್ತುವಿನ ಮುಗ್ದತೆ ಮತ್ತು ಅವನ ಸರಳತೆ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಈತನ ಮುಗ್ದತೆ ಕುರಿತು ಅನೇಕ ಸ್ಟಾರ್ ಸೆಲೆಬ್ರಿಟಿಗಳು ತುಂಬಾನೇ ಹೊಗಳಿದ್ದಾರೆ.
ಹನುಮಂತ 2018ರಲ್ಲಿ ಸರಿಗಮಪ ವೇದಿಕೆಯಲ್ಲಿ ಮೊದಲು ಬಂದು ನಿಂತಾಗ ಅವನ ಮುಗ್ದತೆ ಕಂಡು ಗಾಯಕ ವಿಜಯ್ ಪ್ರಕಾಶ್ ಭಾವುಕರಾಗಿದ್ದರು. ಈ ಯುಗದಲ್ಲೂ ಹನುಮಂತನಂತ ಮುಗ್ದನನ್ನು ಕಂಡು ಮನಸಾರೆ ಮೆಚ್ಚಿದ್ದರು. ಅಂದು ಅವರು ಏನ್ ಹೇಳಿದ್ದರು ಅನ್ನೋದನ್ನು ಇಲ್ಲಿ ನೋಡೋಣ.
ಹನುಮಂತು ಬಿಗ್ ಬಾಸ್ ಮನೆಗೂ ಅದೇ ಮುಗ್ದತೆಯಿಂದಲೇ ಎಂಟ್ರಿ ಕೊಟ್ಟಿದ್ದ. ಹಾಗೆ ಅದೇ ಸರಳತೆ ಮತ್ತು ಮುಗ್ದತೆಯಿಂದಲೇ ಕಪ್ಪು ಗೆದ್ದು ಬೀಗಿದ್ದಾನೆ. ಬಿಗ್ ಮನೆಗೆ ಎಂಟ್ರ ಕೊಟ್ಟಿದ್ದ ಹನುಮಂತನಿಗೆ ಅಲ್ಲಿ ಎಲ್ಲವೂ ಇತ್ತು. ಆದ್ರೆ ಅದ್ಯಾವುದಕ್ಕೂ ಆಸೆ ಪಡದೇ ತನ್ನ ಸರಳತೆಯಲ್ಲೇ ಅಲ್ಲಿ ಬದುಕಿದ ಹಾಗೆನೇ ಅದರಿಂದಲೇ ಎಲ್ಲರ ಮನಸ್ಸು ಗೆದ್ದ. ಯೆಸ್ ಹನುಮಂತನ ಹವಾ ದಿನದಿಂದ ದಿನಕ್ಕೆ ಹೀಗೆ ಎತ್ತರಕ್ಕೆ ಬೆಳೆಯುತ್ತಿರಲಿ.