ಬಿಗ್ ಬಾಸ್​ಗೆ ಗುಡ್​ ಬೈ, ಮತ್ತೆ ಖಚಿತಪಡಿಸಿದ ಕಿಚ್ಚ! ಬಿಗ್​ಬಾಸ್-​11 ನನ್ನ ಕೊನೆ ಸೀಸನ್ ಎಂದ ಸುದೀಪ್!

ಸುದೀಪ್ ಅವರು ಬಿಗ್ ಬಾಸ್​ನಿಂದ ಹೊರನಡೆಯುವುದಾಗಿ ಘೋಷಿಸಿದ್ದಾರೆ. ನವೀನ್ ಶಂಕರ್ 'ನೋಡಿದವರು ಏನಂತಾರೆ' ಚಿತ್ರದೊಂದಿಗೆ ಬರುತ್ತಿದ್ದಾರೆ.

Anusha Kb  | Updated: Jan 21, 2025, 10:54 AM IST

ಕಿಚ್ಚ ಸುದೀಪ್ 'ಬಿಗ್ ಬಾಸ್ ಕನ್ನಡ'ದ ಹೋಸ್ಟ್ ಆಗಿ 11 ಸೀಸನ್​ಗಳನ್ನು ನಡೆಸಿಕೊಟ್ಟಿದ್ದಾರೆ. ಇದು ಅವರ ಕೊನೆಯ ಸೀಸನ್ ಎಂದು ಈ ಮೊದಲು ಹೇಳಿದ್ದರು. ಆದ್ರೆ ಬಿಗ್​ ಬಾಸ್​ ವಾಹಿನಿ ನನ್ನ ರೆಸಿಗ್ನೇಶನ್​ ಲೆಟರ್​ನ ಸ್ವೀಕರಿಸಿಲ್ಲ ಎಂದಿದ್ದರು. ಈಗ ಬಿಗ್ ಬಾಸ್ ತೊರೆಯುವ ಬಗ್ಗೆ ಮತ್ತೊಮ್ಮೆ ಘೋಷಣೆ ಮಾಡಿದ್ದಾರೆ. ಟ್ವೀಟ್ ಮಾಡಿರುವ ಕಿಚ್ಚ ಬಿಗ್ ಬಾಸ್​ನ ಕಳೆದ 11 ಸೀಸನ್‌ಗಳನ್ನು ನಾನು ಆನಂದಿಸಿದ್ದೇನೆ.  ನೀವು ತೋರಿದ ಎಲ್ಲಾ ಪ್ರೀತಿಗಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು. ಮುಂಬರುವ ಫಿನಾಲೆ, ಹೋಸ್ಟ್ ಆಗಿ ನನ್ನ ಕೊನೆಯ ಸೀಸನ್. ನಿಮ್ಮನ್ನು ಒಳ್ಳೆಯ ರೀತಿಯಲ್ಲಿ ರಂಜಿಸಿದ್ದೇನೆ ಎಂದು ನಾನು ಭಾವಿಸುತ್ತೇನೆ. ಇದೊಂದು ಅವಿಸ್ಮರಣೀಯ ಪಯಣ. ಅದನ್ನು ನನ್ನ ಕೈಲಾದಷ್ಟು ನಿಭಾಯಿಸಿದ್ದಕ್ಕೆ ನನಗೆ ಖುಷಿ ಇದೆ. ಈ ಅವಕಾಶಕ್ಕಾಗಿ ಕಲರ್ಸ್​ ಕನ್ನಡಕ್ಕೆ ಧನ್ಯವಾದ ಎಂದಿದ್ದಾರೆ.

ಕಾಡುವ ಕಥೆಯೊಂದಿಗೆ ಬಂದ ನವೀನ್ ಶಂಕರ್..!

ನಟ ನವೀಶ್ ಶಂಕರ್ ಈಗ ಕಾಡುವ ಕಥೆಯೊಂದಿಗೆ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಕುಲದೀಪ್ ಕಾರಿಯಪ್ಪ ಸಾರಥ್ಯದ 'ನೋಡಿದವರು ಏನಂತಾರೆ' ಸಿನಿಮಾದಲ್ಲಿ ನವೀನ್ ಅಕ್ಷರಶಃ ಜೀವಿಸಿದ್ದಾರೆ. ಅದಕ್ಕೆ ಬಿಡುಗಡೆಯಾಗಿರುವ ಟ್ರೇಲರ್ ಉದಾಹರಣೆ. ಬಹುಮುಖ ಪ್ರತಿಭೆ ಸಾಧುಕೋಕಿಲಾ, ಹಿರಿಯ ಪತ್ರಕರ್ತರಾದ ಜೋಗಿ 'ನೋಡಿದವರು ಏನಂತಾರೆ' ಟ್ರೇಲರ್ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಸಿನಿಮಾದಲ್ಲಿ ನವೀಶ್ ಶಂಕರ್ ಸಿದ್ದಾರ್ಥ್ ದೇವಯ್ಯನಾಗಿ ನಟಿಸಿದ್ದು, ಅಪೂರ್ವ ಭಾರದ್ವಾಜ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಇದೇ ತಿಂಗಳ 31ರಂದು ಸಿನಿಮಾ ಬಿಡುಗಡೆಯಾಗಲಿದೆ.

Read More...