
Madenur Manu ವಿರುದ್ಧ ಆರೋಪ ಮಾಡಿ, ನ್ಯಾಯ ಕೊಡಿಸಿ ಎಂದಿದ್ದ ಸಂತ್ರಸ್ತೆ ಈಗ ಕೇಸ್ ಹಿಂಪಡೆದಿದ್ದು ಯಾಕೆ?
ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಅತ್ಯಾ*ಚಾರ ಆರೋಪ ಹೊತ್ತು ಜೈಲು ಸೇರಿದ್ದ ವಿಷ್ಯ ಗೊತ್ತೇ ಇದೆ. ಈಗ ಮಡೆನೂರು ಕೇಸ್ ಮುಕ್ತಾಯ ಗೊಂಡಿದೆ. ಈತನ ಮೇಲೆ ಅತ್ಯಾ*ಚಾರ ಆರೋಪ ಹೊರಿಸಿದ್ದ ನಟಿ ಈಗ ಕೇಸ್ ವಾಪಾಸ್ ಪಡೆದಿದ್ದಾಳೆ.
ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಮೇಲೆ ಅತ್ಯಾ*ಚಾರ ಕೇಸ್ ದಾಖಲಾಗಿತ್ತು. ತನ್ನ ಸಿನಿಮಾ ರಿಲೀಸ್ ಆಗುವ ಹಿಂದಿನ ದಿನವೇ ನಾಯಕ ಮಡೆನೂರು ಜೈಲು ಸೇರಿದ್ದ. ಈ ನಡುವೆ ಈತ ಕನ್ನಡ ಸ್ಟಾರ್ಗಳ ವಿರುದ್ದ ಹಗುರವಾಗಿ ಮಾತನಾಡಿದ್ದ ಆಡಿಯೋ ವೈರಲ್ ಆಗಿ ಫಿಲ್ಮ್ ಚೇಂಬರ್ ಈತನನ್ನ ಬ್ಯಾನ್ ಮಾಡಿತ್ತು. ಬೇಲ್ ಪಡೆದು ಹೊರಬಂದ ಮೇಲೆ ಮಡೆನೂರು ಮನು ಆಯಾ ನಟರ, ಮತ್ತವರ ಅಭಿಮಾನಿಗಳ ಕ್ಷಮೆ ಕೇಳಿದ್ದ. ಫಿಲ್ಮ್ ಚೇಂಬರ್ ಈತನ ಮೇಲಿನ ಬ್ಯಾನ್ನ ವಾಪಾಸ್ ಪಡೆದಿದೆ. ಈಗ ಅತ್ಯಾ*ಚಾರ ಕೇಸ್ ಕೂಡ ವಾಪಾಸ್ ಪಡೆಯಲಾಗಿದೆ.