
Bigg Boss ಮನೆಯಲ್ಲಿ ಮಲ್ಲಮ್ಮನ ಪವಾಡ! ಮಲ್ಲಮ್ಮನ ಮುಗ್ದ ಮಾತಿಗೆ ಮನಸೋತ ಕಿಚ್ಚ!
ಕಿಚ್ಚ ಸುದೀಪ್ ನಡೆಸಿಕೊಡೋ ಬಿಗ್ಬಾಸ್ ಮನೆ ಈ ಭಾರಿ ರಂಗು ರಂಗಾಗಿದೆ. ಹಾಟ್ ಹಾಟ್ ಆಗಿರೋ ಹೆಂಗಳೆಯರು ಒಂದುಕಡೆ ಆದ್ರೆ ಅವರ ಮಧ್ಯೆ ಕಮಲದಂತೆ ಪ್ರಜ್ವಲಿಸೋ ಹಳ್ಳಿ ಪ್ರತಿಭೆಗಳು ಇದ್ದಾರೆ. ಅವರಲ್ಲೊಬ್ಬರು ಯಾದಗಿರಿಯ ಮಲ್ಲಮ್ಮ. ಬಿಗ್ಬಾಸ್ ಶುರುವಾಗಿ ಇನ್ನು ಒಂದು ದಿನವಷ್ಟೇ ಆಗಿದೆ.
ಬಿಗ್ ಬಾಸ್'' ಕುತೂಹಲದ ಗೂಡು. ಪ್ರತಿ ವರ್ಷ ಈ ಗೂಡಲ್ಲಿ ಬಂದು 100ಕ್ಕೂ ಅಧಿಕ ದಿನ ಕಳೆಯುವವರು ಯಾರು ಎನ್ನುವ ಪ್ರಶ್ನೆ ಬಿಗ್ಬಾಸ್ ಪ್ರೀಯರಲ್ಲಿರುತ್ತೆ. ಬಿಗ್ ಬಾಸ್ ಗೆ ಹೋಗಬೇಕು ಅನ್ನೋದು ನೇಮು ಫೇಮು ಇದ್ದವರಿಗಷ್ಟೆ ಅಲ್ಲ ಜನ ಸಾಮಾನ್ಯರ ಕನಸು ಕೂಡ ಹೌದು. ಆದ್ರೆ ಈ ಕನಸು ನನಸಾಗುವುದು ಸುಲಭ ಅಲ್ಲ. ಯಾಕೆಂದರೆ ಬಿಗ್ ಬಾಸ್ ಮನೆಯ ಬಾಗಿಲು ತೆರೆಯುವುದು ಅದೃಷ್ಟವಂತರಿಗೆ ಮಾತ್ರ. ಈ ಭಾರಿ ಬಿಗ್ಬಾಸ್ ಮನೆಗೆ ಹೋದ ಅದೃಷ್ಟವಂತರಲ್ಲಿ ಈ ಸಾಮಾನ್ಯ ಮಹಿಳೆ ಮಲ್ಲಮ್ಮ ಕೂಡ ಒಬ್ರು..