ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!

ಒಂದಿಷ್ಟು ಸಿನಿಮಾಗಳಲ್ಲಿ ನಾಯಕಿ, ಮತ್ತೊಂದಿಷ್ಟು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಂಡಿರೋ ಅಶ್ವಿನಿ ಗೌಡ ಹುಟ್ಟಾ ಶ್ರೀಮಂತೆ. ಸೋ ದೊಡ್ಮನೆಯಲ್ಲಿ ತಾನೊಬ್ಳೆ ದೊಡ್ಡ ಮನುಷ್ಯಳು ಅನ್ನೋ ಜಂಬ, ದರ್ಪ ಅಶ್ವಿನಿಯಲ್ಲಿ ಕೊಂಚ ಹೆಚ್ಚೇ ಇದೆ.

Share this Video
  • FB
  • Linkdin
  • Whatsapp

ಅಶ್ವಿನಿ ಗೌಡ & ಕ್ಯಾಪ್ಟನ್ ರಘು ನಡುವೆ ಕಿತ್ತಾಟ
ಈ ಸಾರಿ ಬಿಗ್​ಬಾಸ್​ ಮನೆಯಲ್ಲಿ ಆಟಕ್ಕಿಂತ ಜಗಳಾಟವೇ ಜಾಸ್ತಿ. ಮಂತ್ರಕ್ಕಿಂಗ ಉಗುಳೇ ಜಾಸ್ತಿ ಅನ್ನುವಂತೆ ದೊಡ್ಮನೆಲ್ಲಿ ಕಂಟೆಂಟ್​ಗಿಂತ ಫೈಟಿಂಗ್ ಜಾಸ್ತಿಯಾಗಿಬಿಟ್ಟಿದೆ. ಅದ್ರಲ್ಲೂ ಈ ವಾರದ ಆರಂಭದಿಂದಲೂ ಅಶ್ವಿನಿ ಗೌಡ ಮನೆಮಂದಿ ಜೊತೆ ಕಿರಿಕ್ ಮಾಡ್ತಾ ಬಂದಿದ್ದು, ಫೈನಲಿ ಬಾಗಿಲು ತೆಗೆದುಬಿಡಿ ನಾನು ಹೊರಗೆ ಹೋಗ್ತಿನಿ ಅಂತ ಹೊರಟು ನಿಂತಿದ್ದಾರೆ.

ಬಿಗ್​ಬಾಸ್​ನಲ್ಲಿ ಕಂಟೆಂಟ್​ಗಿಂತ ಫೈಟಿಂಗ್​ ಜಾಸ್ತಿ
ಯೆಸ್ ಈ ಸಾರಿ ಬಿಗ್​ಬಾಸ್​​ನಲ್ಲಿ ಕಂಟೆಂಟ್ ಗಿಂತ ಜಾಸ್ತಿ ಫೈಟಿಂಗೇ ಇದೆ ಅಂತಿದ್ದಾರೆ ವೀಕ್ಷಕರು. ಅದ್ರಲ್ಲೂ ಅಶ್ವಿನಿ ಗೌಡ ಮೊದಲ ದಿನದಿಂದಲೂ ಕಂಡ ಕಂಡ ಸ್ಫರ್ಧಿಗಳ ಜೊತೆಗೆ ಏರು ಧ್ವನಿಯಲ್ಲಿ ಜಗಳ ಮಾಡ್ತಾನೇ ಬಂದಿದ್ದಾರೆ.

ಒಂದಿಷ್ಟು ಸಿನಿಮಾಗಳಲ್ಲಿ ನಾಯಕಿ, ಮತ್ತೊಂದಿಷ್ಟು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಂಡಿರೋ ಅಶ್ವಿನಿ ಗೌಡ ಹುಟ್ಟಾ ಶ್ರೀಮಂತೆ. ಸೋ ದೊಡ್ಮನೆಯಲ್ಲಿ ತಾನೊಬ್ಳೆ ದೊಡ್ಡ ಮನುಷ್ಯಳು ಅನ್ನೋ ಜಂಬ, ದರ್ಪ ಅಶ್ವಿನಿಯಲ್ಲಿ ಕೊಂಚ ಹೆಚ್ಚೇ ಇದೆ.

ಈ ವಾರದ ಆರಂಭದಲ್ಲಿ ಗಿಲ್ಲಿ ಜೊತೆಗೆ ಅಶ್ವಿನಿಯ ಫೈಟ್ ನಡೆದಿತ್ತು. ಟಾಸ್ಕ್ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ರಣರೋಚಕ ಕದನ ನಡೆದಿತ್ತು. ಅದು ಮುಗೀತು ಅನ್ನೋವಷ್ಟರಲ್ಲಿ ರಘು ಮತ್ತು ಅಶ್ವಿನಿ ನಡುವೆ ಮತ್ತೊಂದು ಜಗಳ ನಡೆದಿದೆ.

ಏಕವಚನ ಪ್ರಯೋಗ.. ಮರ್ಯಾದೆ ಪ್ರಶ್ನೆ..!
ಯೆಸ್ ಈ ವಾರದ ಕ್ಯಾಪ್ಟನ್ ಆಗಿರೋ ರಘು ಅಶ್ವಿನಿಯನ್ನ ಕೆಲಸ ಮಾಡು ಬಾ ಅಂತ ಕರೀತಾರೆ. ಅದಕ್ಕೆ ನಿರಾಕರಿಸೋ ಅಶ್ವಿನಿ ಬರಲ್ಲ ಅಂತಾರೆ.. ಆಗ ರಘು ಏಕವಚನ ಬಳಸಿದ್ರು ಅಂತ ಅಶ್ವಿನಿ ಯದ್ವಾ ತದ್ವಾ ಕೂಗಾಡ್ತಾರೆ.

ಕೊನೆಗೆ ತನ್ನನ್ನ ಏಕವಚನದಲ್ಲಿ ಕರೆದು ಅವಮಾನ ಮಾಡಿದ್ದಾರೆ. ನಾನು ಈ ಮನೆಯಲ್ಲಿರಲ್ಲ ಬಾಗಿಲು ತೆಗೀರಿ ಅಂತೆಲ್ಲಾ ಅಶ್ವಿನಿ ಬಿಗ್ ಡ್ರಾಮಾ ಮಾಡಿದ್ದಾರೆ.

ಅಸಲಿಗೆ ಬಿಗ್​ಬಾಸ್ ಮನೆಗೆ ರಘು ಎಂಟ್ರಿ ಕೊಟ್ಟಾಗಲೇ ಇದೇ ವಿಚಾರಕ್ಕೆ ಇಬ್ಬರ ನಡುವೆ ಫೈಟ್ ನಡೆದಿತ್ತು. ಆಗ ಸುದೀಪ್ , ಮೊದಲು ನೀವು ಏಕವಚನ ಪ್ರಯೋಗ ಮಾಡೋದು ಬಿಟ್ರೆ ಆ ಕಡೆಯಿಂದಲೂ ಅದನ್ನ ನಿರೀಕ್ಷೆ ಮಾಡಬಹುದು ಅಂತ ಪಾಠ ಹೇಳಿದ್ರು. ಆದ್ರೆ ಅದೆಷ್ಟೇ ಪಾಠ ಹೇಳಿದ್ರೂ ಅಶ್ವಿನಿ ವರಸೆ ಬದಲಾಗಿಲ್ಲ. ಇವರ ಬಿಗ್ ಡ್ರಾಮಾ ನಿಂತಿಲ್ಲ..!
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...

Related Video