ದೊಡ್ಮನೆಯಲ್ಲಿ ಫೇಕ್ ಯಾರು? ಊಸರವಳ್ಳಿ ಯಾರು? ಮ್ಯಾಚ್ ಫಿಕ್ಸಿಂಗ್ ಮಾಡ್ಕೊಂಡು ಕ್ಯಾಪ್ಟನ್ ಆದ್ರಾ ತ್ರಿವಿಕ್ರಮ್

ಕೆಲವರಿಗೆ ಕಿವಿ ಮಾತು.. ಇನ್ನೂ ಕೆಲವರಿಗೆ ಮಾತಿನ ಏಟು..ಬಾದ್ ಷಾ ಜೊತೆ ವಾರದ ಆಗು-ಹೋಗುಗಳ ಬಿಸಿ ಬಿಸಿ ಚರ್ಚೆ.. ಕಿಚ್ಚನ ನ್ಯಾಯ ತಕ್ಕಡಿಯಲ್ಲಿ ಸರಿ ತಪ್ಪುಗಳ ತೂಕ. ಹರಟೆ, ತಮಾಷೆ ಜೊತೆ, ಜೊತೆಗೆ ನೈಜ ಆಟದ ಪಾಠ. 

First Published Nov 11, 2024, 11:49 AM IST | Last Updated Nov 11, 2024, 11:49 AM IST

ಕೆಲವರಿಗೆ ಕಿವಿ ಮಾತು.. ಇನ್ನೂ ಕೆಲವರಿಗೆ ಮಾತಿನ ಏಟು..ಬಾದ್ ಷಾ ಜೊತೆ ವಾರದ ಆಗು-ಹೋಗುಗಳ ಬಿಸಿ ಬಿಸಿ ಚರ್ಚೆ.. ಕಿಚ್ಚನ ನ್ಯಾಯ ತಕ್ಕಡಿಯಲ್ಲಿ ಸರಿ ತಪ್ಪುಗಳ ತೂಕ. ಹರಟೆ, ತಮಾಷೆ ಜೊತೆ, ಜೊತೆಗೆ ನೈಜ ಆಟದ ಪಾಠ. ತಪ್ಪು ಮಾಡಿ ವಾದಿಸಿದೋರು ತಪ್ಪಾಯ್ತೆಂದು ಕೈ ಮುಗಿದ್ರು. ಚರ್ಚೆ ಸಾಕೆಂದವರಿಗೆ ಸುದೀಪ್ ಕೊಟ್ಟಿದ್ದು ಮುಟ್ಟಿ ನೋಡಿಕೊಳ್ಳುವ ಮಾತಿನ ಪೆಟ್ಟು.. ಬಿಗ್ ಬಾಸ್ ಮನೆಯಲ್ಲಿ ಇನೋಸೆಂಟ್ ಕಾರ್ಡ್ ಪ್ಲೇ ಮಾಡ್ತಾ ಇರೋರು ಯಾರು..? ಮ್ಯಾಚ್ ಫಿಕ್ಸರ್ ಯಾರು.? ವುಮೆನ್ಸ್ ಕಾರ್ಡ್ ಅಸ್ತ್ರ ಬಳಸ್ತಾ ಇರೋರು ಯಾರು.? ಇದೆಲ್ಲದರ ಜೊತೆಗೆ ಶನಿವಾರ ಸೇಫ್ ಆಗಿ, ಉಫ್ ಅಂತ ನಿಟ್ಟುಸಿರು ಬಿಟ್ಟಿದ್ಯಾರು.?  ಇದೇ ಈ ಹೊತ್ತಿನ ವಿಶೇಷ ಕಿಚ್ಚನ ಕಟಕಟೆ. 

ಭವ್ಯ ಗೌಡ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗೋಕೆ ಎಲ್ಲರೂ ನೋ ಅಂದ್ರು. ಆದ್ರೆ, ಅದೇ ಭವ್ಯ ಗೌಡಗೆ ಉತ್ತಮ ಪದಕ ಕೊಟ್ರು. ಕ್ಯಾಪ್ಟನ್ ಆಗ್ದೇ ಹೋದ್ರು ಉತ್ತಮ ಪದಕ ಕೊಟ್ಟಿದ್ದಕ್ಕೆ ಭವ್ಯ ಫುಲ್ ಖುಷ್ ಆಗಿದ್ರು. ಆದ್ರೆ, ಆ ಖುಷಿಯ ಅಸಲಿ ಮುಖವನ್ನ ತೆರೆದಿಟ್ಟಿದ್ದಾರೆ ಸುದೀಪ್. ಆ ಮೂಲಕ ಕಿಚ್ಚನ ಚಪ್ಪಾಳೆಯನ್ನ ಭವ್ಯ ಕೊಂಚದರಲ್ಲಿ ಮಿಸ್ ಮಾಡ್ಕೊಂಡಿದ್ದಾರೆ. ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗುದು ಯಾರು.? ಈ ಪ್ರಶ್ನೆಗೆ ಇಂದು ಉತ್ತರ ಸಿಗುತ್ತೆ. ಆದ್ರೆ ಶನಿವಾರವೇ ಒಂದಿಷ್ಟು ಮಂದಿ ಸೇಫ್ ಆಗಿ ನಿಟ್ಟುಸಿರು ಬಿಟ್ಟಿದ್ದಾರೆ. ಹಾಗಿದ್ರೆ ಶನಿವಾರ ಯಾರೆಲ್ಲಾ ಸೇಫ್ ಆಗಿ ಉಳಿದುಕೊಂಡಿದ್ದಾರೆ ಅಂತ ನೋಡ್ಕೊಂಡು ಬರೋಣ ಬನ್ನಿ. 

Video Top Stories