
ಒಂಟಿ ಮನೆಯ ನೂರೆಂಟು ರಹಸ್ಯ! ಬಿಗ್ ಬಾಸ್ ಹುಟ್ಟಿ ಬೆಳೆದಿದ್ದೆಲ್ಲಿ, ಕನ್ನಡಕ್ಕೂ ಬಂದಿದ್ದು ಹೇಗೆ?
ಜನ ಯಾರನ್ನ ಸೆಲೆಬ್ರಿಟಿ ಅಂತ ಕರೀತಿದ್ರೋ, ಅಂಥವರನ್ನ ಒಂದೇ ಕಡೆ ಕೂಡಿಹಾಕಿ, ನೂರು ದಿನ ನೂರಾರು ಥರ ಟಾಸ್ಕ್ ಕೊಟ್ಟು, ಆಟ ಆಡಿಸಿ, ಕಟ್ಟಕಡೆಗೆ ಉಳಿದವರಿಗೆ ಬಿಗ್ ಬಾಸ್ ಬಹುಮಾನ ಸಿಕ್ತಾ ಇತ್ತು.. ಇದನ್ ನೋಡೋಕೆ, ಇಡೀ ರಾಜ್ಯವೇ ಕಣ್ಣರಳಿಸಿ ಕಾಯ್ತಾ ಇತ್ತು..
ಕನ್ನಡ ಕಿರುತೆರೆಲಿ ಸುನಾಮಿ ಸೃಷ್ಟಿಸಿದ ಅದ್ದೂರಿ ಕಾರ್ಯಕ್ರಮಗಳ ಪೈಕಿ, ಬಿಗ್ ಬಾಸ್ ಕೂಡ ಒಂದು.. ಕನ್ನಡದಲ್ಲಿ ಅಲ್ಲೀ ತನಕ ಆಗದೇ ಇದ್ದ ಪ್ರಯೋಗವೊಂದು ಈ ಷೋ ಮೂಲಕ ನಡೆದುಹೋಗಿತ್ತು.. ಜನ ಯಾರನ್ನ ಸೆಲೆಬ್ರಿಟಿ ಅಂತ ಕರೀತಿದ್ರೋ, ಅಂಥವರನ್ನ ಒಂದೇ ಕಡೆ ಕೂಡಿಹಾಕಿ, ನೂರು ದಿನ ನೂರಾರು ಥರ ಟಾಸ್ಕ್ ಕೊಟ್ಟು, ಆಟ ಆಡಿಸಿ, ಕಟ್ಟಕಡೆಗೆ ಉಳಿದವರಿಗೆ ಬಿಗ್ ಬಾಸ್ ಬಹುಮಾನ ಸಿಕ್ತಾ ಇತ್ತು.. ಇದನ್ ನೋಡೋಕೆ, ಇಡೀ ರಾಜ್ಯವೇ ಕಣ್ಣರಳಿಸಿ ಕಾಯ್ತಾ ಇತ್ತು.. ಆದ್ರೆ ಈಗ, ಈ ಬಿಗ್ ಬಾಸೇ ಕಂಟಕದ ಕಡೆ ಹೆಜ್ಜೆ ಇಟ್ಟಿದೆ.. ಅಷ್ಟಕ್ಕೂ ಇದರ ಆರಂಭ ಆಗಿದ್ದೆಲ್ಲಿ? ಈಗ ಆಗಿರೋ ಸಮಸ್ಯೆಯ ಸುತ್ತಲಿನ ಕತೆ ಏನು?
ಬಿಗ್ ಬ್ರದರ್ ಅನ್ನೋದು ಡಿಕ್ಟೇಟರ್, ಸರ್ವಾಧಿಕಾರಿ ಅನ್ನೋ ಪದಕ್ಕೆ ಇನ್ನೊಂದು ರೂಪ.. 1984 ಪುಸ್ತಕದಲ್ಲಿ, ಸರ್ವಾಧಿಕಾರಿ 'ಬಿಗ್ ಬ್ರದರ್ ನಿನ್ನನ್ನು ನೋಡ್ತಿದ್ದಾನೆ' ಅಂತ ಟೆಲಿಸ್ಕ್ರೀನ್ ಮೂಲಕ ಜನರನ್ನ ಮಾನಿಟರ್ ಮಾಡ್ತಿದ್ದ.. ಡಿ ಮೋಲ್, ಆರ್ವೆಲ್ನ ಸರ್ವೆಲೆನ್ಸ್ ರಾಜ್ಯಕ್ಕೂ, ಸ್ಪರ್ಧಿಗಳು ಸದಾ ಕಣ್ಗಾವಲಿನಲ್ಲಿ ಇರೋ ರಿಯಾಲಿಟಿ ಶೋಗೂ ಇರೋ ಸಾಮ್ಯತೆ ಎಷ್ಟಿದೆ ಅಂತ ಗುರುತಿಸಿದ್ರು.. ಈ ಮೂಲಕವೇ ಪುಸ್ತಕದಲ್ಲಿದ್ದ ವಿಚಿತ್ರ, ವಿನೂತನ ಐಡಿಯಾ ಟಿವಿ ಸ್ಕ್ರೀನ್ನಲ್ಲಿ ಹೊಸ ಕಾರ್ಯಕ್ರಮವಾಗಿ ಬದಲಾಯ್ತು..
ಬಿಗ್ ಬಾಸ್ ಅನ್ನೋದು ಬಹುತೇಕ ಜನರ ಪಾಲಿಗೆ ಒಂದು ರಿಯಾಲಿಟಿ ಷೋ.. ಆದ್ರೆ ಇನ್ನೂ ಕೆಲವರ ದೃಷ್ಟಿಲಿ ಅದೊಂದು ಕ್ರಾಂತಿಕಾರಿ ಕಾರ್ಯಕ್ರಮ.. ಅಂದ್ ಹಾಗೆ, ಅಲ್ಲೆಲ್ಲೋ ಡಚ್ ದೇಶದಲ್ಲಿ ರೂಪಗೊಂಡ ಷೋ, ಕರ್ನಾಟಕದಲ್ಲಿ ಮ್ಯಾಜಿಕ್ ಮಾಡ್ತಾ ಇರೋದು ಹೇಗೆ?
ಈ ಎಲ್ಲ ಮಾಹಿತಿಗೆ ವಿಡಿಯೋ ನೋಡಿ...