ಚಾಮರಾಜನಗರ: ಸುವರ್ಣಾವತಿ ಜಲಾಶಯದ ಸೊಬಗು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು
ಚಾಮರಾಜನಗರದ ಸುವರ್ಣಾವತಿ ಜಲಾಶಯ ಹಿಂದೆಲ್ಲಾ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಡ್ಯಾಂ ಭರ್ತಿಯಾಗುತ್ತಿತ್ತು. ಆದರೆ ಈ ಬಾರಿ ಒಂದೇ ವರ್ಷದಲ್ಲಿ ಎರಡೆರಡು ಬಾರಿ ಡ್ಯಾಂ ಭರ್ತಿಯಾಗಿದ್ದು ಜಲ ವೈಭವ ವೀಕ್ಷಣೆಗೆ ಸಾರ್ವಜನಿಕರು ತಂಡೋಪತಂಡವಾಗಿ ಬರುತ್ತಿದ್ದಾರೆ.
ಚಾಮರಾಜನಗರ (ಜು. 24): ಸುವರ್ಣಾವತಿ ಜಲಾಶಯ ಹಿಂದೆಲ್ಲಾ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಡ್ಯಾಂ ಭರ್ತಿಯಾಗುತ್ತಿತ್ತು. ಆದರೆ ಈ ಬಾರಿ ಒಂದೇ ವರ್ಷದಲ್ಲಿ ಎರಡೆರಡು ಬಾರಿ ಡ್ಯಾಂ ಭರ್ತಿಯಾಗಿದ್ದು ಜಲ ವೈಭವ ವೀಕ್ಷಣೆಗೆ ಸಾರ್ವಜನಿಕರು ತಂಡೋಪತಂಡವಾಗಿ ಬರುತ್ತಿದ್ದಾರೆ.
ಕರ್ನಾಟಕಕ್ಕೆ ಸೇರಿರುವ ಬೇಡಗುಳಿ, ತಮಿಳುನಾಡಿನ ದಿಂಬಂ, ಹಾಸನೂರು ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಜಲಾಶಯಗಳಿಗೆ ಜೀವಕಳೆ ತಂದಿದೆ. ಸುವರ್ಣಾವತಿ ಜಲಾಶಯದ ನೀರು ಸಂಗ್ರಹಣದ ಗರಿಷ್ಠ ಮಟ್ಟ 2455 ಅಡಿ. ಒಂದು ಅಡಿ ಬಾಕಿಯಿದ್ದು, ಬಹುತೇಕ ಭರ್ತಿಯಾಗಿದೆ. ಸುವರ್ಣಾವತಿ ಜಲಾಶಯ 6400 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದ್ದು. ಹವಾಮಾನದಲ್ಲಿ ಉಂಟಾದ ಬದಲಾವಣೆಯಿಂದ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಮಳೆ ಸುರಿದಿದ್ದು, ಜಲಾಶಯಗಳು ಹಾಗೂ ಜಲಾಶಯದ ಸುತ್ತಾ ಇರುವ ಬೆಟ್ಟಗುಡ್ಡಗಳು ಹಾಲ್ನೊರೆಯಂತೆ ಹರಿಯುತ್ತಿರುವ ನೀರಿನ ಹಾಗು ಪ್ರಕೃತಿಯ ಸೊಬಗಿನಿಂದ ನಳನಳಿಸುತ್ತಿವೆ.
ನೋಡಬನ್ನಿ ಚಿಕ್ಕಮಗಳೂರಿನ ತೀರ್ಥಕೆರೆ ಫಾಲ್ಸ್ ಸೊಬಗು....!
ಇನ್ನೂ ಈ ಜಲಾಶಯ ಭರ್ತಿಯಿಂದ ಅಂತರ್ ಜಲಮಟ್ಟ ವೃದ್ದಿಯಾದರೆ ಸುವರ್ಣಾವತಿ 5 ಟಿಎಂಸಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ.ಈ ಜಲಾಶಯಗಳು 11 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಿದೆ. ತಮಿಳುನಾಡು, ಕರ್ನಾಟಕ ಹೆದ್ದಾರಿ ಪಕ್ಕದಲ್ಲಿಯೇ ಡ್ಯಾಂ ಇರುವುದರಿಂದ ಸ್ಥಳೀಯ ಹಾಗು ತಮಿಳುನಾಡಿಗೆ ಹೋಗಿ, ಬರುವ ಪ್ರವಾಸಿಗರು ಡ್ಯಾಂ ನ ಸೌಂದರ್ಯಕ್ಕೆ ಮನಸೋತು ಡ್ಯಾಂ ಗೆ ಭೇಟಿ ಕೊಟ್ಟು ಕಾಡಿನ ತಂಪಾದ ಗಾಳಿ, ಪ್ರಕೃತಿ ಸೌಂದರ್ಯ ಸವಿದು ಸ್ವಲ್ಪ ಸಮಯ ಕಾಲಕಳೆದು ಪ್ರಯಾಣಿಸುತ್ತಾರೆ.
ಬೆಳಗಾವಿ: ಎರಡು ವರ್ಷಗಳ ನಂತರ ಗೋಕಾಕ ಫಾಲ್ಸ್‌ನಲ್ಲಿ ಪ್ರವಾಸಿಗರ ದಂಡು
ಈಗ ಡ್ಯಾಂ ನಿಂದ ನೀರು ಬಿಟ್ಟಿರು ಹಿನ್ನಲೆಯಲ್ಲಿ ಜಲಪಾತದಂತೆ ಧುಮ್ಮಿಕ್ಕಿ ಹರಿಯುವ ಜಲ ವೈಭವವನ್ನು ವೀಕ್ಷಿಸಲು ಪ್ರವಾಸಿಗರು ಆಗಮಿಸುತ್ತಿದ್ದು ಹೊರ ರಾಜ್ಯ ತಮಿಳುನಾಡಿನಿಂದ ಬರುವವರ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಿದೆ. ಮತ್ತಷ್ಟು ಪ್ರವಾಸಿಗರು ಬರಬೇಕಾದರೆ ಮೂಲಭೂತ ಸೌಲಭ್ಯ ಒದಗಿಸಿದರೆ ಒಳ್ಳೆಯದು ಅನ್ನೋದು ಪ್ರವಾಸಿಗರ ಭಾವನೆ..